ನಿತಿನ್ ಗಡ್ಕರಿ ಜೊತೆ ಪೋಟೋ ತೆಗಿಸಿಕೊಂಡಾಕ್ಷಣ ತನ್ವೀರ್ ಪೀರಾ ಪಾಪಮುಕ್ತನಾಗಲಾರ: ಬಸನಗೌಡ ಪಾಟೀಲ್ ಯತ್ನಾಳ್

ಅರುಣ್​ ಕುಮಾರ್​ ಬೆಳ್ಳಿ

Updated on: Dec 08, 2023 | 11:36 AM

ಸಯ್ಯದ್ ತನ್ವೀರ್ ಪೀರಾ ಕೇವಲ ಸಾರ್ವಜನಿಕವಾಗಿ ಮಾತ್ರ ಸಾರೇ ಜಹಾಂ ಸೆ ಅಚ್ಚಾ ಹಿಂದೂಸ್ತಾನ್ ಹಮಾರಾ ಅಂತ ಹಾಡುತ್ತಾನೆ ಒಳಗಡೆ ಹೋಗಿ ಪಾಕಿಸ್ತಾನ್ ಹಮಾರಾ ಅಂತ ಹಾಡುತ್ತಾನೆ ಅಂತ ಬಸನಗೌಡ ಪಾಟೀಲ್ ಯತ್ನಾಳ್ ಆರೋಪ ಮಾಡುತ್ತಾರೆ. ತನ್ವೀರ್ ವಿರುದ್ಧ ದಾಖಲಾಗಿದ್ದ ಪೊಲೀಸ್ ಕೇಸನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಕ್ಲೋಸ್ ಮಾಡಿಸಿದ್ದಾರೆ ಎಂದು ಸಹ ಅವರು ಹೇಳುತ್ತಾರೆ.

ಬೆಳಗಾವಿ: ವಿಜಯಪುರದ ಮುಸ್ಲಿಂ ಮೌಲ್ವಿ ಸಯ್ಯದ್ ತನ್ವೀರ್ ಪೀರಾ (cleric Sayed Tanveer Peera) ಅವರಿಗೆ ಭಯೋತ್ಪಾದನೆ ಸಂಘಟನೆಗಳ ಜೊತೆ ಸಂಪರ್ಕವಿದೆ, ಐಸಿಸ್ ಉಗ್ರರ (ISIS ultras) ಜೊತೆ ಒಡನಾಟವಿದೆ, ಆಗಾಗ ಮಧ್ಯಪ್ರಾಚ್ಯ ದೇಶಗಳಿಗೆ ಭೇಟಿ ನೀಡುತ್ತಿರುತ್ತಾನೆ, ವಿಜಯಪುರದಲ್ಲಿ ರಾಷ್ಟ್ರ ವಿರೋಧಿ ಚಟಿವಟಿಕೆಗಳಲ್ಲಿ ತೊಡಗಿದ್ದಾನೆ ಎಂದು ಮೊದಲು ಖಚಿತವಾದ ಸ್ವರದಲ್ಲಿ ಹೇಳಿದ್ದ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಈಗ ಅದೆಲ್ಲದರ ತನಿಖೆ ಆಗಬೇಕು ಅನ್ನುತ್ತಿದ್ದಾರೆ. ಬೆಳಗಾವಿಯಲ್ಲಿ ಟಿವಿ9 ವರದಿಗಾರನೊಂದಿಗೆ ಮಾತಾಡಿದ ಅವರು ಕೇಂದ್ರ ಸಚಿವ ನಿತಿನ್ ಗಡ್ಕರಿ ಜೊತೆ ತನ್ವೀರ್ ಪೀರಾ ಫೋಟೋ ತೆಗಿಸಿಕೊಂಡಾಕ್ಷಣ ಗಂಗಾನದಿಯಲ್ಲಿ ಪವಿತ್ರ ಸ್ನಾನ ಮಾಡಿ ಪಾಪ ವಿಮೋಚನೆ ಅದಂತಾಗಲ್ಲ ಎಂದು ಯತ್ನಾಳ್ ಹೇಳಿದರು. ಧಾರವಾಡದ ಪೊಲೀಸರು ತನ್ವೀರ್ ಪೀರಾ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿರುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಾಹಿತಿ ನೀಡಿದ್ದರೂ ಕೆಲ ಮಂತ್ರಿಗಳ ಮಾತಿಗೆ ಬೆಲೆನೀಡಿ ಪೊಲೀಸರ ಮಾಹಿತಿ ಕಡೆಗಣಿಸಿದ್ದಾರೆ ಮತ್ತು ತನ್ವೀರ್ ನೊಂದಿಗೆ ವೇದಿಕೆ ಹಂಚಿಕೊಂಡಿದ್ದಾರೆ ಎಂದು ಯತ್ನಾಳ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.