ತಮನ್ನಾ ವಿವಾದದಲ್ಲಿ ಯಶ್ ಹೆಸರು ಹೇಳಿದ ನಟಿ ಕಾರುಣ್ಯ ರಾಮ್

Updated on: May 24, 2025 | 9:26 PM

Karunya Ram: ನಟಿ ಕಾರುಣ್ಯ ರಾಮ್ ಅವರು, ತಮನ್ನಾ ಭಾಟಿಯಾ ವಿವಾದವನ್ನು ಭಿನ್ನವಾಗಿ ನೋಡಿದ್ದಾರೆ. ಕನ್ನಡದ ನಟರು ಅಂತರಾಷ್ಟ್ರೀಯ ಬ್ರ್ಯಾಂಡ್​ಗಳಲ್ಲಿ ನಟಿಸುವುದನ್ನು ಸಂಭ್ರಮಿಸುತ್ತೀವಿ, ಯಶ್ ಪೆಪ್ಸಿ ಜಾಹೀರಾತು ಮಾಡಿದಾಗ ಖುಷಿ ಪಡುತ್ತೀವಿ, ಆದರೆ ಅವರು ಒಂದು ಪ್ರದೇಶ ಅಥವಾ ಜಿಲ್ಲೆಗೆ ಸೇರಿದ ಜಾಹೀರಾತಿನಲ್ಲಿ ನಟಿಸಿಲ್ಲ, ಅವರದ್ದು ಹೆಚ್ಚು ವ್ಯಾಪ್ತಿ ಇರುವ ಪ್ರಾಡಕ್ಟ್. ಮೈಸೂರು ಸ್ಯಾಂಡಲ್ ಸೋಪು ಮೈಸೂರು ಜಿಲ್ಲೆಯದ್ದು ಅದನ್ನು ನಾವೇ ಉಳಿಸಿಕೊಳ್ಳಬೇಕು ಎಂದಿದ್ದಾರೆ. ಅಂದಹಾಗೆ ಮೈಸೂರು ಸ್ಯಾಂಡಲ್ ಸೋಪಿಗೆ ಜಿಲ್ಲೆಯ ಹೆಸರಲ್ಲ, ಮೈಸೂರು ರಾಜ್ಯದ ಹೆಸರನ್ನು ನೀಡಲಾಗಿತ್ತು.

ಮೈಸೂರು ಸ್ಯಾಂಡಲ್ (Mysore Sandal Soap) ಸೋಪಿಗೆ ತಮನ್ನಾ ಭಾಟಿಯಾ ಅನ್ನು ರಾಯಭಾರಿ ಮಾಡಿರುವ ವಿಚಾರ ಜೋರಾಗಿ ಚರ್ಚೆ ಆಗುತ್ತಿದೆ. ಕನ್ನಡಿಗರನ್ನೇ ಆಯ್ಕೆ ಮಾಡಬಹುದಿತ್ತು ಎಂಬ ಚರ್ಚೆ ಎದ್ದಿದೆ. ಚಿತ್ರರಂಗದ ಕೆಲವರು ಸಹ ತಮನ್ನಾ ಆಯ್ಕೆಯನ್ನು ವಿರೋಧಿಸಿದ್ದಾರೆ. ಆದರೆ ನಟಿ ಕಾರುಣ್ಯ ರಾಮ್ ಈ ವಿವಾದವನ್ನು ಭಿನ್ನವಾಗಿ ನೋಡಿದ್ದಾರೆ. ಕನ್ನಡದ ನಟರು ಅಂತರಾಷ್ಟ್ರೀಯ ಬ್ರ್ಯಾಂಡ್​ಗಳಲ್ಲಿ ನಟಿಸುವುದನ್ನು ಸಂಭ್ರಮಿಸುತ್ತೀವಿ, ಯಶ್ ಪೆಪ್ಸಿ ಜಾಹೀರಾತು ಮಾಡಿದಾಗ ಖುಷಿ ಪಡುತ್ತೀವಿ, ಆದರೆ ಯಶ್ ಮಾಡಿರುವುದು ಒಂದು ಜಿಲ್ಲೆಗೆ ಸಂಬಂಧಿಸಿದ್ದಲ್ಲ, ಆದರೆ ಮೈಸೂರು ಸ್ಯಾಂಡಲ್ ಸೋಪು, ಒಂದು ಜಿಲ್ಲೆಗೆ, ಪ್ರದೇಶಕ್ಕೆ ಸೇರಿದ್ದು, ಹಾಗಾಗಿ ಅದನ್ನು ನಾವೇ ಉಳಿಸಿಕೊಳ್ಳಬೇಕು ಎಂದಿದ್ದಾರೆ. ಅಂದಹಾಗೆ ಮೈಸೂರು ಸ್ಯಾಂಡಲ್ ಸೋಪು, ಮೈಸೂರು ಜಿಲ್ಲೆಯ ಹೆಸರಿನದ್ದಲ್ಲ, ಮೈಸೂರು ರಾಜ್ಯದ ಹೆಸರನ್ನು ಹೊಂದಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ