ವೈಕೋ ಮನೆಗೆ ಹೋದ ಸಿಎಂ ವಿಜಯ್​ಗೆ ದೃಷ್ಟಿ ತೆಗೆದ ಮನೆಕೆಲಸದವರು; ವಿಡಿಯೋ ವೈರಲ್

Updated on: May 11, 2026 | 9:18 PM

ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರು ಇಂದು ಚೆನ್ನೈನಲ್ಲಿರುವ ಎಂಡಿಎಂಕೆ ಮುಖ್ಯಸ್ಥ ವೈಕೋ ಅವರ ನಿವಾಸಕ್ಕೆ ಭೇಟಿ ನೀಡಿದ್ದರು. ಆದರೆ, ಭೇಟಿ ಅನಿರೀಕ್ಷಿತವಾದ ವೈರಲ್ ದೃಶ್ಯಕ್ಕೆ ಸಾಕ್ಷಿಯಾಯಿತು. ವೈಕೋ ತಮ್ಮ ಕುಟುಂಬದ ಸದಸ್ಯರನ್ನು ಮುಖ್ಯಮಂತ್ರಿಗೆ ಪರಿಚಯಿಸಿದರು. ಆಗ ಅಲ್ಲೇ ಇದ್ದ ಮನೆಕೆಲಸದವರು ನಾವು ಕೂಡ ನಿಮಗೇ ಮತ ಹಾಕಿದ್ದೇವೆ, ನಾವು ನಿಮ್ಮ ಅಭಿಮಾನಿಗಳು ಎಂದು ಸಿಎಂ ವಿಜಯ್ ಎದುರು ಬಂದು ಕೈಮುಗಿದರು.

ಚೆನ್ನೈ, ಮೇ 11: ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ (Vijay) ಅವರು ಇಂದು ಚೆನ್ನೈನಲ್ಲಿರುವ ಎಂಡಿಎಂಕೆ ಮುಖ್ಯಸ್ಥ ವೈಕೋ ಅವರ ನಿವಾಸಕ್ಕೆ ಭೇಟಿ ನೀಡಿದ್ದರು. ಆದರೆ, ಭೇಟಿ ಅನಿರೀಕ್ಷಿತವಾದ ವೈರಲ್ ದೃಶ್ಯಕ್ಕೆ ಸಾಕ್ಷಿಯಾಯಿತು. ವೈಕೋ ತಮ್ಮ ಕುಟುಂಬದ ಸದಸ್ಯರನ್ನು ಮುಖ್ಯಮಂತ್ರಿಗೆ ಪರಿಚಯಿಸಿದರು. ಆಗ ಅಲ್ಲೇ ಇದ್ದ ಮನೆಕೆಲಸದವರು ನಾವು ಕೂಡ ನಿಮಗೇ ಮತ ಹಾಕಿದ್ದೇವೆ, ನಾವು ನಿಮ್ಮ ಅಭಿಮಾನಿಗಳು ಎಂದು ಸಿಎಂ ವಿಜಯ್ ಎದುರು ಬಂದು ಕೈಮುಗಿದರು. ಅದನ್ನು ಕೇಳಿ ಖುಷಿಯಾದ ವಿಜಯ್ ಕೂಡ ಅವರಿಗೆ ಕೈ ಮುಗಿದರು. ಆಗ ಆ ಕೆಲಸದವರು ವಿಜಯ್​ಗೆ ದೃಷ್ಟಿ ತೆಗೆದು ಸಂಭ್ರಮಿಸಿದ್ದಾರೆ. ಅದಕ್ಕೆ ಪ್ರತಿಯಾಗಿ ಸಿಎಂ ವಿಜಯ್ ಕೂಡ ಆ ಕೆಲಸದವರಿಗೆ ದೃಷ್ಟಿ ತೆಗೆದ ವಿಡಿಯೋ ಭಾರೀ ವೈರಲ್ ಆಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us