ಹಿಂದೂ ದೇಗುಲದಲ್ಲಿ ಪೂಜೆ ಸಲ್ಲಿಸಿ, ತೀರ್ಥ ತೆಗೆದುಕೊಂಡ ತ.ನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಪುತ್ರಿ ಸೀತಾಮರೈ ಸ್ಟಾಲಿನ್!

ಹಿಂದೂ ದೇಗುಲದಲ್ಲಿ ಪೂಜೆ ಸಲ್ಲಿಸಿ, ತೀರ್ಥ ತೆಗೆದುಕೊಂಡ ತ.ನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಪುತ್ರಿ ಸೀತಾಮರೈ ಸ್ಟಾಲಿನ್!

ಸಾಧು ಶ್ರೀನಾಥ್​
|

Updated on: Oct 03, 2023 | 1:45 PM

ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಅವರ ಪುತ್ರಿ ಸೀತಾಮರೈ ಸ್ಟಾಲಿನ್ ಅವರನ್ನು ದೇವಸ್ಥಾನದ ಆಡಳಿತ ಮಂಡಳಿ ಸ್ವಾಗತಿಸಿತು. ಸೆಂತಾಮರೈ ಸ್ಟಾಲಿನ್ ಅವರು ಸ್ವಾಮಿ ಅಂಬಲ್ ಚಟ್ಟನಾಥರ್ ಮತ್ತು ಅಷ್ಟ ಭೈರವ ದೇಗುಲಗಳಿಗೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಸತ್ತೈನಾಥರ್ ದೇವಾಲಯವು ಬೆಟ್ಟದ ಮೇಲಿರುವ ದೇವಾಲಯವಾಗಿದ್ದು, ಭಗವಾನ್ ಶಿವನ ಕೃಪಾಕಟಾಕ್ಷಕ್ಕೆ ಎಂಬುದು ಇಲ್ಲಿನ ನಂಬಿಕೆಯಾಗಿದೆ.

ನಾಗಪಟ್ಟಣಂ -ತಮಿಳುನಾಡು, ಅಕ್ಟೋಬರ್ 3: ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ (Tamil Nadu MK Stalin) ಅವರ ಪುತ್ರ ಹಾಗೂ ರಾಜ್ಯ ಸಚಿವ ಉದಯನಿಧಿ ಸ್ಟಾಲಿನ್ ಅವರು ಸನಾತನ ಧರ್ಮದ ಕುರಿತು ನೀಡಿದ್ದ ಹೇಳಿಕೆಯ ವಿವಾದ, ಕೋಲಾಹಲ ಮಾಸುವ ಮುನ್ನವೇ ಮತ್ತೊಂದು ಸುದ್ದಿ ಚರ್ಚೆಗೆ ಗ್ರಾಸವಾಗಿದೆ. ಇದಕ್ಕೆ ಕಾರಣ ಸ್ಟಾಲಿನ್ ಅವರ ಪುತ್ರಿ ಸೀತಾಮರೈ ಸ್ಟಾಲಿನ್ (Senthamarai Stalin) ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಪೂಜೆ ಮಾಡಿಸಿ, ತೀರ್ಥ ತೆಗೆದುಕೊಂಡಿದ್ದಾರೆ. ಮೈಲಾಡುತುರೈ ಜಿಲ್ಲೆಯ ಸಿರ್ಕಾಜಿಯಲ್ಲಿರುವ (Sirkazhi in Mayiladuthurai district) ಸತ್ತೇನಾಥರ್ ದೇವಸ್ಥಾನದಲ್ಲಿ (Sattainathar Temple) ಸೀತಾಮರೈ ಅವರು ಭಾನುವಾರ ಈ ವಿಶೇಷ ಪೂಜೆ ಸಲ್ಲಿಸಿದರು. ಆರತಿ ತೆಗೆದುಕೊಂಡು, ತೀರ್ಥ ತೆಗೆದುಕೊಂಡು, ಅದರ ನಂತರ, ದಕ್ಷಿಣೆಯನ್ನು ತಟ್ಟೆಯಲ್ಲಿ ಹಾಕಿದರು. ಸದ್ಯಕ್ಕೆ ಈ ವಿಡಿಯೋ ವೈರಲ್ ಆಗಿದೆ. ಇದಕ್ಕೆ ನೆಟ್ಟಿಗರು ಕೂಡ ಸಖತ್ತಾಗಿ ಪ್ರತಿಕ್ರಿಯಿಸುತ್ತಿದ್ದಾರೆ. ಏನಂತೀರಿ ಮಿಸ್ಟರ್ ಸ್ಟಾಲಿನ್? ಏನಂತೀರಿ ಸ್ಟಾಲಿನ್ ಪುತ್ರ ಉದಯನಿಧಿಯರವೇ ಎಂದು ಜನ ಕೇಳುತ್ತಿದ್ದಾರೆ. ಇದು ಸನಾತನ ಧರ್ಮವಲ್ಲವೇ? ಎಂದು ಟ್ರೋಲ್‌ ಮಾಡುತ್ತಿತ್ತಿದ್ದಾರೆ.

ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಅವರ ಪುತ್ರಿ ಸೀತಾಮರೈ ಸ್ಟಾಲಿನ್ ಅವರನ್ನು ದೇವಸ್ಥಾನದ ಆಡಳಿತ ಮಂಡಳಿ ಸ್ವಾಗತಿಸಿತು. ಸೆಂತಾಮರೈ ಸ್ಟಾಲಿನ್ ಅವರು ಸ್ವಾಮಿ ಅಂಬಲ್ ಚಟ್ಟನಾಥರ್ ಮತ್ತು ಅಷ್ಟ ಭೈರವ ದೇಗುಲಗಳಿಗೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಸತ್ತೈನಾಥರ್ ದೇವಾಲಯವು ಬೆಟ್ಟದ ಮೇಲಿರುವ ದೇವಾಲಯವಾಗಿದ್ದು, ಭಗವಾನ್ ಶಿವನ ಕೃಪಾಕಟಾಕ್ಷಕ್ಕೆ ಎಂಬುದು ಇಲ್ಲಿನ ನಂಬಿಕೆಯಾಗಿದೆ. ಅಲ್ಲದೆ, ಕಾಶಿಗೆ ಸಮಾನವಾದ ತಿರುಜ್ಞಾನಸಂಬಂದರ (ಮತ್ತೊಂದು ಹಿಂದೂ ದೇವತೆ) ಅವತಾರವಾದ ಅಷ್ಟ ಭೈರವರು ಇಲ್ಲಿನ ಮತ್ತೊಂದು ದೇಗುಲದಲ್ಲಿ ಸ್ಥಾಪಿತಗೊಂಡಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ