Video: ತಪ್ಪಾದ ಬಸ್ ಹತ್ತಿ ಹೋದ 5 ವರ್ಷದ ಬಾಲಕ, ಮುಂದೇನಾಯ್ತು?

|

Updated on: Jan 17, 2025 | 7:59 AM

ತಾಂಬರಂ ಪೂರ್ವ ರೈಲ್ವೆ ನಿಲ್ದಾಣದಲ್ಲಿ 5 ವರ್ಷದ ಬಾಲಕ ತಿಳಿಯದೇ ಎಂಟಿಸಿ ಬಸ್ ಹತ್ತಿದ್ದ. ಬಾಲಕನ ಜತೆ ಯಾರೂ ಇಲ್ಲದ್ದನ್ನು ಗಮನಿಸಿದ ಬಸ್ ಚಾಲಕ ತಿರು ವೀರಮಣಿ ಎಚ್ಚೆತ್ತು ಕ್ರೋಮ್‌ಪೇಟ್-2 ಬ್ರಾಂಚ್ ಮ್ಯಾನೇಜರ್‌ಗೆ ಮಾಹಿತಿ ನೀಡಿದ್ದರು. ಪೋಷಕರಿಂದ ತಪ್ಪಿಸಿಕೊಂಡಿದ್ದ ಬಾಲಕ ಕೇವಲ 40 ನಿಮಿಷಗಳಲ್ಲೇ ಅವರ ಮಡಿಲು ಸೇರಿದ್ದಾನೆ. ತಾಂಬರಂ ರೈಲ್ವೆ ನಿಲ್ದಾಣಕ್ಕೆ ಬಸ್ ಸಿಬ್ಬಂದಿಯನ್ನು ಕಳುಹಿಸಲಾಗಿತ್ತು, ಅವರು ಬಾಲಕನ ಪೋಷಕರನ್ನು ಹುಡುಕಲು ಶುರು ಮಾಡಿದ್ದರು, ಆಗ ಬಾಲಕನ ಅಜ್ಜಿ ಕಂಡಿದ್ದಾರೆ, ಅವರು ಮೊಮ್ಮಗನನ್ನು ಹುಡುಕುತ್ತಿದ್ದರು.

ತಾಂಬರಂ ಪೂರ್ವ ರೈಲ್ವೆ ನಿಲ್ದಾಣದಲ್ಲಿ 5 ವರ್ಷದ ಬಾಲಕ ತಿಳಿಯದೇ ಎಂಟಿಸಿ ಬಸ್ ಹತ್ತಿದ್ದ. ಬಾಲಕನ ಜತೆ ಯಾರೂ ಇಲ್ಲದ್ದನ್ನು ಗಮನಿಸಿದ ಬಸ್ ಚಾಲಕ ತಿರು ವೀರಮಣಿ ಎಚ್ಚೆತ್ತು ಕ್ರೋಮ್‌ಪೇಟ್-2 ಬ್ರಾಂಚ್ ಮ್ಯಾನೇಜರ್‌ಗೆ ಮಾಹಿತಿ ನೀಡಿದ್ದರು. ಪೋಷಕರಿಂದ ತಪ್ಪಿಸಿಕೊಂಡಿದ್ದ ಬಾಲಕ ಕೇವಲ 40 ನಿಮಿಷಗಳಲ್ಲೇ ಅವರ ಮಡಿಲು ಸೇರಿದ್ದಾನೆ.

ತಾಂಬರಂ ರೈಲ್ವೆ ನಿಲ್ದಾಣಕ್ಕೆ ಬಸ್ ಸಿಬ್ಬಂದಿಯನ್ನು ಕಳುಹಿಸಲಾಗಿತ್ತು, ಅವರು ಬಾಲಕನ ಪೋಷಕರನ್ನು ಹುಡುಕಲು ಶುರು ಮಾಡಿದ್ದರು, ಆಗ ಬಾಲಕನ ಅಜ್ಜಿ ಕಂಡಿದ್ದಾರೆ, ಅವರು ಮೊಮ್ಮಗನನ್ನು ಹುಡುಕುತ್ತಿದ್ದರು. ಭಯಗೊಂಡಿದ್ದರು, ಕುಟುಂಬದವರಿಂದ ವಿವಿರ ಸಂಗ್ರಹಿಸಿದ ಸಿಬ್ಬಂದಿಗೆ ಚಾಲಕನಿಗೆ ಕರೆ ಮಾಡಿ ಬಾಲಕನನ್ನು ಕರೆದುಕೊಂಡು ತಾಂಬರಂ ಕ್ಯಾಂಪ್ ರಸ್ತೆಯಲ್ಲಿ ಬಸ್ ನಿಲ್ಲಿಸುವಂತೆ ಸೂಚಿಸಿದರು.

ತಕ್ಷಣವೇ ಬಸ್​ನಲ್ಲಿ ಬಾಲಕನನ್ನು ಕರೆದುಕೊಂಡು ಬಂದು ಪೋಷಕರಿಗೆ ಒಪ್ಪಿಸಿದ್ದಾರೆ, ಕಳೆದುಹೋಗಿ 40 ನಿಮಿಷಗಳಲ್ಲೇ ಕುಟುಂಬಕ್ಕೆ ಮಗು ಸಿಗುವಂತೆ ಮಾಡಿದ್ದು, ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗಿದೆ. ಕುಟುಂಬಸ್ಥರು ನಿಗದಿತ ಸ್ಥಳಕ್ಕೆ ಧಾವಿಸಿದ್ದು, ಸೆಲೈಯೂರ್ ಪೊಲೀಸರ ಸಮ್ಮುಖದಲ್ಲಿ ಮಗುವನ್ನು ಸುರಕ್ಷಿತವಾಗಿ ಹಸ್ತಾಂತರಿಸಲಾಗಿದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ