ಜಿ20 ಶೃಂಗಸಭೆ: ಯುಎಸ್ ಅಧ್ಯಕ್ಷ ಜೋ ಬೈಡೆನ್ ವಾಸ್ತವ್ಯಕ್ಕೆ ಬುಕ್ ಆಗಿರುವ ಹೋಟೆಲ್ ಕೋಣೆಯ ಬಾಡಿಗೆ ದಿನಕ್ಕೆ ರೂ. 8 ಲಕ್ಷ!

|

Updated on: Sep 06, 2023 | 7:36 PM

ಬೈಡನ್ ಮತ್ತು ಅವರ ಸಿಬ್ಬಂದಿಗಾಗಿ ಅದೇ ಹೊಟೆಲ್ ನಲ್ಲಿ ಸುಮಾರು 400 ರೂಮುಗಳನ್ನು ಬುಕ್ ಮಾಡಲಾಗಿದೆ. ಬೈಡನ್ ಅವರು ಉಳಿದುಕೊಳ್ಳುವ ಸೂಟ್ 4,600 ಚದರ ಅಡಿಗಳಷ್ಟು ವಿಸ್ತಾರವಾಗಿದೆ ಮತ್ತು ದಿನವೊಂದಕ್ಕೆ ಇದರ ಬಾಡಿಗೆ ರೂ. 8 ಲಕ್ಷ ಅಂತೆ! ಬ್ರಿಟಿಷ್ ಪ್ರಧಾನಿ ಮತ್ತು ಭಾರತದ ಅಳಿಯ ಸುನಾಕ್, ಶ್ಯಾಂಗ್ರಿಲಾ ಹೋಟೆಲ್ ನಲ್ಲಿ ಉಳಿದುಕೊಳ್ಳಲಿದ್ದಾರೆ, ಮ್ಯಾಕ್ರನ್ ಗೆ ದಿ ಕ್ಲ್ಯಾರಿಜ್ ಹೋಟೆಲ್ ಬುಕ್ ಮಾಡಲಾಗಿದೆ.

ನವದೆಹಲಿ: ಜಿ20 ಶೃಂಗಸಭೆಗೆ (G20 Summit) ರಾಷ್ಟ್ರದ ರಾಜಧಾನಿ ಸರ್ವಾಲಂಕಾರಗೊಳ್ಳುತ್ತಿದೆ. ದೆಹಲಿಯ ಪ್ರಗತಿ ಮೈದಾನದಲ್ಲಿ ಸೆಪ್ಟೆಂಬರ್ 8 ರಿಂದ 10 ರವರೆಗೆ ನಡೆಯಲಿರುವ ಸಮಾವೇಶದಲ್ಲಿ ವಿಶ್ವದ ಪ್ರಮುಖ ಗಣ್ಯರು ಭಾಗವಹಿಸುತ್ತಿದ್ದಾರೆ. ಅವರಲ್ಲಿ ಯುಎಸ್ ಅಧ್ಯಕ್ಷ ಜೋ ಬೈಡೆನ್ (Joe Biden), ಯುಕೆ ಪ್ರಧಾನ ಮಂತ್ರಿ ರಿಷಿ ಸುನಾಕ್ (Rishi Sunak), ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೇಲ್ ಮ್ಯಾಕ್ರನ್ (Emmanuel Macron) ಮೊದಲಾದವರು ಸೇರಿದ್ದಾರೆ. ವಿದೇಶೀ ಗಣ್ಯರ ವಾಸ್ತವ್ಯಕ್ಕಾಗಿ ದೆಹಲಿಯ 30 ಅತ್ಯುನ್ನತ ಶ್ರೇಣಿಯ ಹೋಟೆಲ್ ಗಳನ್ನು ಬುಕ್ ಮಾಡಲಾಗಿದೆ. ಯುಎಸ್ ಅಧ್ಯಕ್ಷರು ಭಾರತ ಪ್ರವಾಸ ಬಂದಾಗ ಅವರನ್ನು ಐಟಿಸಿ ಮೌರ್ಯ ಹೋಟೆಲ್ ನಲ್ಲಿ ಇರಿಸುವುದು ವಾಡಿಕೆ. ಬೈಡನ್ ಮತ್ತು ಅವರ ಸಿಬ್ಬಂದಿಗಾಗಿ ಅದೇ ಹೊಟೆಲ್ ನಲ್ಲಿ ಸುಮಾರು 400 ರೂಮುಗಳನ್ನು ಬುಕ್ ಮಾಡಲಾಗಿದೆ. ಬೈಡನ್ ಅವರು ಉಳಿದುಕೊಳ್ಳುವ ಸೂಟ್ 4,600 ಚದರ ಅಡಿಗಳಷ್ಟು ವಿಸ್ತಾರವಾಗಿದೆ ಮತ್ತು ದಿನವೊಂದಕ್ಕೆ ಇದರ ಬಾಡಿಗೆ ರೂ. 8 ಲಕ್ಷ ಅಂತೆ! ಬ್ರಿಟಿಷ್ ಪ್ರಧಾನಿ ಮತ್ತು ಭಾರತದ ಅಳಿಯ ಸುನಾಕ್, ಶ್ಯಾಂಗ್ರಿಲಾ ಹೋಟೆಲ್ ನಲ್ಲಿ ಉಳಿದುಕೊಳ್ಳಲಿದ್ದಾರೆ, ಮ್ಯಾಕ್ರನ್ ಗೆ ದಿ ಕ್ಲ್ಯಾರಿಜ್ ಹೋಟೆಲ್ ಬುಕ್ ಮಾಡಲಾಗಿದೆ. ಟಿವಿ9 ಕನ್ನಡ ವಾಹಿನಿಯ ದೆಹಲಿ ವರದಿಗಾರ ಹರೀಶ್ ಮತ್ತಷ್ಟು ವಿವರಗಳನ್ನು ನೀಡಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on