ದರ್ಶನ್​ಗೆ ಜೈಲಲ್ಲೇ ಮದುವೆ ಆಮಂತ್ರಣ ಕೊಟ್ಟ ನಿರ್ದೇಶಕ ತರುಣ್ ಸುಧೀರ್

|

Updated on: Jul 19, 2024 | 12:42 PM

ಜೈಲನಲ್ಲಿರೋ ದರ್ಶನ್​ನ ‘ಕಾಟೇರ’ ನಿರ್ದೇಶಕ ತರುಣ್ ಸುಧೀರ್ ಭೇಟಿ ಮಾಡಿದ್ದಾರೆ. ದರ್ಶನ್ ಜೈಲು ಸೇರಿದ ನಂತರ ಮೊದಲ ಬಾರಿಗೆ ಅವರನ್ನು ತರುಣ್ ಭೇಟಿ ಮಾಡಿದ್ದಾರೆ. ಈ ವೇಳೆ ಅವರು ಮದುವೆ ಆಮಂತ್ರಣವನ್ನು ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.

ರೇಣುಕಾ ಸ್ವಾಮಿ ಕೊಲೆ ಕೇಸ್​ನಲ್ಲಿ ದರ್ಶನ್ ಅವರು ಅರೆಸ್ಟ್ ಆಗಿದ್ದಾರೆ. ಸದ್ಯ ಅವರು ಜೈಲಿನಲ್ಲಿ ಇದ್ದಾರೆ. ಅವರನ್ನು ನೋಡಲು ಅನೇಕ ಸೆಲೆಬ್ರಿಟಿಗಳು ಬರುತ್ತಿದ್ದಾರೆ. ಕೆಲವರಿಗೆ ಅವರನ್ನು ನೋಡೋಕೆ ಅವಕಾಶ ಸಿಗುತ್ತಿದೆ. ಇನ್ನೂ ಕೆಲವರು ಕಾದು ಹಾಗೆಯೇ ಹೋಗುತ್ತಿದ್ದಾರೆ. ಈಗ ಜೈಲನಲ್ಲಿರೋ ದರ್ಶನ್​ನ ‘ಕಾಟೇರ’ ನಿರ್ದೇಶಕ ತರುಣ್ ಸುಧೀರ್ ಭೇಟಿ ಮಾಡಿದ್ದಾರೆ. ದರ್ಶನ್ ಜೈಲು ಸೇರಿದ ನಂತರ ಮೊದಲ ಬಾರಿಗೆ ಅವರನ್ನು ತರುಣ್ ಭೇಟಿ ಮಾಡಿದ್ದಾರೆ. ತರುಣ್ ಸುಧೀರ್ ಅವರು ಆಗಸ್ಟ್ 10-11ರಂದು ಮದುವೆ ಆಗಲಿದ್ದಾರೆ. ನಟಿ ಸೋನಲ್ ಮೊಂತೇರೋ ಅವರನ್ನು ವರಿಸಲಿದ್ದಾರೆ. ತಮ್ಮ ಮದುವೆ ಆಮಂತ್ರಣವನ್ನು ದರ್ಶನ್​ಗೆ ತರುಣ್ ನೀಡಿದ್ದಾರೆ ಎನ್ನಲಾಗಿದೆ. ದರ್ಶನ್ ಜೈಲಿನಲ್ಲಿ ಇರುವ ಕಾರಣ ಮದುವೆಯನ್ನು ಮುಂದಕ್ಕೆ ಹಾಕಲು ತರುಣ್ ಯೋಚಿಸಿದ್ದರು. ಆದರೆ, ಹಿರಿಯರು ಹಾಗೂ ದರ್ಶನ್ ಸಲಹೆ ಮೇರೆಗೆ ಮದುವೆಗೆ ತರುಣ್ ಮುಂದಾಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.