Chikmagalur: ಒಂದೇ ಶಾಲೆಯಲ್ಲಿ 23-ವರ್ಷ ಸೇವೆ ಸಲ್ಲಿಸಿ ನಿವೃತ್ತರಾದ ಶಿಕ್ಷಕರಿಗೆ ವಿದ್ಯಾರ್ಥಿಗಳಿಂದ ಹೃದಯಸ್ಪರ್ಶಿ ಬೀಳ್ಕೊಡುಗೆ
ಶಿಕ್ಷಕ ಲಕ್ಷ್ಮಣ್ ಸೇವೆಯ ಕೊನೆದಿನವನ್ನು ಶಾಲಾ ವಿದ್ಯಾರ್ಥಿಗಳು ಸ್ಮರಣೀಯವಾಗಿಸಿದರು ಅಂತ ಹೇಳಿದರೆ ಉತ್ಪ್ರೇಕ್ಷೆ ಅನಿಸದು.
ಚಿಕ್ಕಮಗಳೂರು: ಸೇವೆಯಿಂದ ನಿವೃತ್ತಿ ಹೊಂದಿದ ಶಿಕ್ಷಕರೊಬ್ಬರಿಗೆ ವಿದ್ಯಾರ್ಥಿಗಳಿಂದ ಇದಕ್ಕೂ ಮಿಗಿಲಾದ ಉಡುಗೊರೆ ಸಿಗಲಾರದು. ಜಿಲ್ಲೆಯ ತರೀಕೆರೆ ತಾಲ್ಲೂಕಿನ ಹಳಿಯೂರು (Haliyur) ಗ್ರಾಮದಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಕಳೆದ 23 ವರ್ಷಗಳಿಂದ ಸೇವೆ ಸಲ್ಲಿಸಿ ನಿವೃತ್ತರಾದ ಶಿಕ್ಷಕ ಲಕ್ಷ್ಮಣ್ ಎನ್ ವಿ (Laxman NV) ಅವರಿಗೆ ಮಕ್ಕಳು ವಿದಾಯ ಹೇಳಿದ ವಿಧಾನ ಹೃದಯಸ್ಪರ್ಶಿಯಾಗಿತ್ತು. ಸೇವೆಯ ಕೊನೆಯ ದಿನ ಶಾಲೆಗೆ ನಡೆದು ಬಂದಾಗ ಅವರ ಮೇಲೆ ಮಕ್ಕಳು ಮೇಲೆ ಪುಷ್ಪಾರ್ಚನೆ ಮಾಡಿದರು. ಬಳಿಕ ಎತ್ತಿನ ಬಂಡಿಯೊಂದರಲ್ಲಿ ಶಿಕ್ಷಕರ ಮೆರವಣಿಗೆ (procession) ನಡೆಸಲಾಯಿತು. ಮೆರವವಣಿಗೆಯಲ್ಲಿ ಮಕ್ಕಳೇ ತಮಟೆ ಬಾರಿಸಿದ್ದು ವಿಶೇಷವಾಗಿತ್ತು. ಶಿಕ್ಷಕ ಲಕ್ಷ್ಮಣ್ ಸೇವೆಯ ಕೊನೆದಿನವನ್ನು ಶಾಲಾ ವಿದ್ಯಾರ್ಥಿಗಳು ಸ್ಮರಣೀಯವಾಗಿಸಿದರು ಅಂತ ಹೇಳಿದರೆ ಉತ್ಪ್ರೇಕ್ಷೆ ಅನಿಸದು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ