My India My Life Goals: ಪ್ಲಾಸ್ಟಿಕ್ ಮುಕ್ತ ಗ್ರಾಮಕ್ಕಾಗಿ ಶ್ರಮಿಸುತ್ತಿರುವ ಕನಾ ರಾಮ್ ಮೇವಾಡ
ಆಜಾದಿಕಾ ಅಮೃತ ಮಹೋತ್ಸವದ ಅಂಗವಾಗಿ ಪರಿಸರ ಸಂರಕ್ಷಣೆ ಬಗ್ಗೆ ಜಾಗೃತಿ ಕಾರ್ಯಕ್ರಮದ ಜತೆಗೆ ಕೈಜೋಡಿಸಿರುವ ಟಿವಿ9 ನೆಟ್‌ವರ್ಕ್ My India My Life Goals ಅಡಿಯಲ್ಲಿ ಪರಿಸರ ಸಂರಕ್ಷಣೆ ಮಾಡಿದ ವ್ಯಕ್ತಿಗಳ ಬಗ್ಗೆ ತಿಳಿಸುವ ಕಾರ್ಯವನ್ನು ಮಾಡುತ್ತಿದೆ, ಈ ಕಾರ್ಯಕ್ರಮದ ಮೂಲಕ ಅನೇಕ ಪರಿಸರ ಸಂರಕ್ಷಣಾ ಸಾಧಕರನ್ನು ಪರಿಚಯಿಸಿದೆ, ಅದರಲ್ಲಿ ಕಾನಾ ರಾಮ್ ಮೇವಾಡ ಕೂಡ ಒಬ್ಬರು.
ಈ ಜಗತ್ತಿನಲ್ಲಿ ಪ್ರತಿಯೊಬ್ಬ ವ್ಯಕ್ತಿಗೂ ಪರಿಸರ ಎನ್ನುವುದು ಅತಿಮುಖ್ಯ, ಅದು ನಮ್ಮ ಜೀವನದ ಜತೆಗೆ ಸಾಗುವ ಶಕ್ತಿ, ಇದಕ್ಕೆ ಸ್ವಲ್ಪ ತೊಂದರೆಯಾದರೂ ನಮ್ಮ ಜೀವನ ಸರ್ವ ನಾಶ ಖಂಡಿತ. ನಮ್ಮ ನಮ್ಮ ಸ್ವಾರ್ಥ ಜೀವನದಲ್ಲಿ ಸಾಗುತ್ತಿರುವಾಗ, ಈ ಪರಿಸರದ ರಕ್ಷಣೆ ಮಾಡುವುದು ಹೇಗೆ?, ಈ ಪರಿಸರವನ್ನು ನಾವೇ ನಾಶ ಮಾಡುತ್ತಿರುವಾಗ, ಇದರ ರಕ್ಷಣೆ ಮಾಡಲು ಕೆಲವೊಂದು ಪುಣ್ಯತ್ಮರು ಬೇಕಲ್ಲ, ಅಂತವರ ಸಾಲಿನಲ್ಲಿ ನಿಲ್ಲುವವರು ಕಾನಾ ರಾಮ್ ಮೇವಾಡ, ಕೇಂದ್ರ ಸರ್ಕಾರ ಆಜಾದಿಕಾ ಅಮೃತ ಮಹೋತ್ಸವದ ಅಂಗವಾಗಿ ಪರಿಸರ ಸಂರಕ್ಷಣೆ ಬಗ್ಗೆ ಜಾಗೃತಿ ಕಾರ್ಯಕ್ರಮದ ಜತೆಗೆ ಕೈಜೋಡಿಸಿರುವ ಟಿವಿ9 ನೆಟ್‌ವರ್ಕ್ My India My Life Goals ಅಡಿಯಲ್ಲಿ ಪರಿಸರ ಸಂರಕ್ಷಣೆ ಮಾಡಿದ ವ್ಯಕ್ತಿಗಳ ಬಗ್ಗೆ ತಿಳಿಸುವ ಕಾರ್ಯವನ್ನು ಮಾಡುತ್ತಿದೆ, ಈ ಕಾರ್ಯಕ್ರಮದ ಮೂಲಕ ಅನೇಕ ಪರಿಸರ ಸಂರಕ್ಷಣಾ ಸಾಧಕರನ್ನು ಪರಿಚಯಿಸಿದೆ, ಅದರಲ್ಲಿ ಕನಾ ರಾಮ್ ಮೇವಾಡ ಕೂಡ ಒಬ್ಬರು. ಇವರು ರಾಜಸ್ಥಾನದ ಒಂದು ಸಾಮಾನ್ಯ ಟೀ ಸ್ಟಾಲ್ ನಡೆಸುತ್ತಿದ್ದಾರೆ. ತಮ್ಮ ಗ್ರಾಮ ಪ್ಲಾಸ್ಟಿಕ್ ಮುಕ್ತವಾಗಬೇಕು ಎಂದು, ತನ್ನ ಗ್ರಾಮದಲ್ಲಿರುವ ಪ್ಲಾಸ್ಟಿಕ್ಗಳನ್ನು ಸಂಗ್ರಹ ಮಾಡಿ, ಅದನ್ನು ಮರುಬಳಕೆ ಮಾಡುವ ಕೆಲಸವನ್ನು ಮಾಡುತ್ತಿದ್ದಾರೆ, ಪ್ಲಾಸ್ಟಿಕ್ ಮುಕ್ತ ಗ್ರಾಮಕ್ಕೆ ಜನರ ಸಹಕಾರ ಅಗತ್ಯ ಎಂದು ಪ್ಲಾಸ್ಟಿಕ್ ಸಂಗ್ರಹ ಮಾಡಿದವರಿಗೆ ವಿಶೇಷ ಬಹುಮಾನ ನೀಡಲಾಗುವುದು ಎಂದು ಘೋಷಣೆ ಮಾಡಿದ್ದಾರೆ.
ಎನ್‌ಜಿಒ ಮೂಲಕ ತಾವು ಸಂಗ್ರಹ ಮಾಡಿದ ಪ್ಲಾಸ್ಟಿಕ್ಗಳನ್ನು ಮರುಬಳಕೆ ಮಾಡಲು ಕಂಪನಿಗಳಿಗೆ ನೀಡುತ್ತಿದ್ದರು. ತಮ್ಮ ಅಂಗಡಿಯಲ್ಲೇ ಈ ತ್ಯಾಜ್ಯವನ್ನು ಸಂಗ್ರಹ ಮಾಡುತ್ತಿದ್ದರು. ಅಕ್ಕಪಕ್ಕದ ಗ್ರಾಮಗಳಲ್ಲಿಯೂ ಪ್ಲಾಸ್ಟಿಕ್ ತ್ಯಾಜ್ಯವನ್ನು ಮರುಬಳಕೆ ಮಾಡುವ ಮೂಲಕ ಇಡೀ ಪ್ರದೇಶವನ್ನು ಪ್ಲಾಸ್ಟಿಕ್ ಮುಕ್ತವನ್ನಾಗಿಸುವ ಕೆಲಸ ಮಾಡುತ್ತಿದ್ದಾರೆ. “
ಆಜಾದಿಕಾ ಅಮೃತ ಮಹೋತ್ಸವದ ಅಂಗವಾಗಿ ಭಾರತ ಸರ್ಕಾರವು ಪರಿಸರ ಸಂರಕ್ಷಣಾ ಆಂದೋಲನವನ್ನು ಆರಂಭಿಸಿದೆ. ಇದರ ಜತೆಗೆ ಟಿವಿ9 ನೆಟ್‌ವರ್ಕ್ ಕೂಡ ಮೈ ಇಂಡಿಯಾ – ಮೈ ಲೈಫ್ ಗೋಲ್ಸ್.. ಲೈಫ್ ಸ್ಟೈಲ್ ಫಾರ್ ಎನ್ವಿರಾನ್‌ಮೆಂಟ್ ಮೂವ್‌ಮೆಂಟ್ ಎಂಬ ಘೋಷಣೆಯಡಿಯಲ್ಲಿ ಈ ಆಂದೋಲನದಲ್ಲಿ ಪಾಲುದಾರಿಕೆ ಹೊಂದಿದೆ.