Ind Vs Aus: ‘ಇತಿಹಾಸದಲ್ಲೇ ಕಂಡಿರದ ಬಲಿಷ್ಠ ಟೀಮ್​ ಇದು’: ಭಾರತದ ವಿಶ್ವಕಪ್​ ಗೆಲುವಿನ ಬಗ್ಗೆ ನಿಖಿಲ್​ ಭರವಸೆ

|

Updated on: Nov 19, 2023 | 1:05 PM

ಐತಿಹಾಸಿಕ ಕ್ಷಣಕ್ಕೆ ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂ ಸಾಕ್ಷಿ ಆಗುತ್ತಿದೆ. ‘ವಿಶ್ವಕಪ್​ 2023’ ಫೈನಲ್​ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಸೆಣೆಸಾಟ ನಡೆಯಲಿದೆ. ಈ ಬಾರಿ ಟೀಮ್​ ಇಂಡಿಯಾ ಗೆದ್ದೇ ಗೆಲ್ಲುತ್ತದೆ ಎಂದು ನಿಖಿಲ್​ ಕುಮಾರಸ್ವಾಮಿ ಅವರು ಭರವಸೆ ವ್ಯಕ್ತಪಡಿಸಿದ್ದಾರೆ. ಭಾರತದ ತಂಡಕ್ಕೆ ಅವರು ಶುಭ ಹಾರೈಸಿದ್ದಾರೆ.

ನಟ, ರಾಜಕಾರಣಿ ನಿಖಿಲ್​ ಕುಮಾರ್ (Nikhil Kumar)​ ಅವರಿಗೆ ಕ್ರಿಕೆಟ್​ ಎಂದರೆ ಇಷ್ಟ. ಸಿನಿಮಾ ಮತ್ತು ರಾಜಕೀಯ ಕೆಲಸದ ನಡುವೆ ಬಿಡುವು ಮಾಡಿಕೊಂಡು ಅವರು ವಿಶ್ವಕಪ್​ (ICC World Cup 2023) ಪಂದ್ಯವನ್ನು ವೀಕ್ಷಿಸುತ್ತಾರೆ. ಇಂದು (ನವೆಂಬರ್​ 19) ಐತಿಹಾಸಿಕ ಕ್ಷಣಕ್ಕೆ ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂ ಸಾಕ್ಷಿ ಆಗುತ್ತಿದೆ. ‘ವಿಶ್ವಕಪ್​ 2023’ ಫೈನಲ್​ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ (Ind Vs Aus) ನಡುವೆ ಸೆಣೆಸಾಟ ನಡೆಯಲಿದೆ. ಈ ಬಾರಿ ಭಾರತ ಗೆದ್ದೇ ಗೆಲ್ಲುತ್ತದೆ ಎಂದು ನಿಖಿಲ್​ ಕುಮಾರಸ್ವಾಮಿ ಅವರು ಭರವಸೆ ವ್ಯಕ್ತಪಡಿಸಿದ್ದಾರೆ. ‘ಭಾರತ ಗೆಲ್ಲುತ್ತದೆ ಎಂಬ ವಿಶ್ವಾಸ ಇಡೀ ವಿಶ್ವಕ್ಕೆ ಇದೆ. ಯಾಕೆಂದರೆ ಈವರೆಗಿನ ಎಲ್ಲ ಮ್ಯಾಚ್​ ಗೆದ್ದಿದ್ದೇವೆ. ಪ್ರತಿ ಆಟಗಾರರೂ ತುಂಬ ಚೆನ್ನಾಗಿ ಆಡುತ್ತಿದ್ದಾರೆ. ಇತಿಹಾಸದಲ್ಲೇ ಕಂಡಿರದ ಬಹಳ ಬಲಿಷ್ಠವಾದ ಟೀಮ್​ ಈಗ ನಮ್ಮದಾಗಿದೆ. ಕರ್ನಾಟಕದ ಕೆಎಲ್​ ರಾಹುಲ್​ ಆಟ ತುಂಬ ಚೆನ್ನಾಗಿದೆ. ವಿರಾಟ್​ ಕೊಹ್ಲಿ ಅವರ ಬಗ್ಗೆ ಹೇಳುವಂತೆಯೇ ಇಲ್ಲ. ಬೌಲರ್​ಗಳು ಅದ್ಭುತವಾಗಿ ಆಡುತ್ತಿದ್ದಾರೆ’ ಎಂದಿರುವ ನಿಖಿಲ್​ ಕುಮಾರ್​ ಅವರು ಭಾರತದ ತಂಡಕ್ಕೆ ಶುಭ ಹಾರೈಸಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.