ನೀತು ಎಲಿಮಿನೇಟ್ ಆದ್ರೆ ದೊಡ್ಮನೆಯಿಂದ ಹೊರಗೆ ಬರೋದು ಸ್ನೇಹಿತ್; ಬಿಗ್ ಶಾಕ್ ಕೊಟ್ಟ ಸುದೀಪ್
ನೀತು ವನಜಾಕ್ಷಿ ಡೇಂಜರ್ ಜೋನ್ನಲ್ಲಿ ಇದ್ದಾರೆ. ಈ ಮೊದಲು ಸ್ನೇಹಿತ್ ಅವರು ನೀತುಗೆ ಒಂದು ಮಾತು ನೀಡಿದ್ದರು. ‘ನಿಮಗಾಗಿ ಏನು ಬೇಕಾದರೂ ಮಾಡ್ತೀನಿ’ ಎಂದು ಹೇಳಿದ್ದರು. ಈಗ ಎಲಿಮಿನೇಷನ್ ಸಮಯದಲ್ಲಿ ಆ ಮಾತು ನಡೆಸಿಕೊಡುತ್ತೀರಾ ಎಂದು ಸುದೀಪ್ ಕೇಳಿದ್ದಾರೆ. ಮೊದಲಿಗೆ ನೋ ಎಂದ ಸ್ನೇಹಿತ್ ನಂತರ ಒಪ್ಪಿಕೊಂಡಿದ್ದಾರೆ.
‘ಬಿಗ್ ಬಾಸ್ ಕನ್ನಡ ಸೀಸನ್ 10’ (Bigg Boss Kannada) ರಿಯಾಲಿಟಿ ಶೋನ ಆರನೇ ವಾರದಲ್ಲಿ ಎರಡು ಎಲಿಮಿನೇಷನ್ನ ನಡೆಯಲಿದೆ ಎಂದು ಮೊದಲೇ ತಿಳಿಸಲಾಗಿತ್ತು. ಶನಿವಾರ (ನ.18) ಈಶಾನಿ ಔಟ್ ಆಗಿದ್ದಾರೆ. ಭಾನುವಾರ (ನ.19) ಯಾರು ಎಲಿಮಿನೇಟ್ ಆಗುತ್ತಾರೆ ಎಂಬುದನ್ನು ತಿಳಿಯುವ ಕುತೂಹಲ ಮೂಡಿದೆ. ನೀತು ವನಜಾಕ್ಷಿ (Neethu Vanajakshi) ಅವರು ಡೇಂಜರ್ ಜೋನ್ನಲ್ಲಿ ಇದ್ದಾರೆ. ಈ ಮೊದಲು ಸ್ನೇಹಿತ್ ಅವರು ನೀತುಗೆ ಒಂದು ಮಾತು ನೀಡಿದ್ದರು. ‘ನಿಮಗಾಗಿ ಏನು ಬೇಕಾದರೂ ಮಾಡ್ತೀನಿ’ ಎಂದು ಹೇಳಿದ್ದರು. ಈಗ ಎಲಿಮಿನೇಷನ್ ಸಮಯದಲ್ಲಿ ಆ ಮಾತು ನಡೆಸಿಕೊಡುತ್ತೀರಾ ಎಂದು ಸುದೀಪ್ ಕೇಳಿದ್ದಾರೆ. ಮೊದಲಿಗೆ ನೋ ಎಂದ ಸ್ನೇಹಿತ್ (Snehith Gowda) ನಂತರ ಒಪ್ಪಿಕೊಂಡಿದ್ದಾರೆ. ಒಂದು ವೇಳೆ ನೀತು ಎಲಿಮಿನೇಟ್ ಆದರೆ ಅವರ ಬದಲಿಗೆ ಸ್ನೇಹಿತ್ ಔಟ್ ಆಗಬೇಕಾಗುತ್ತದೆ. ಆ ಮೂಲಕ ದೊಡ್ಮನೆಯಲ್ಲಿ ಟೆನ್ಷನ್ ಹೆಚ್ಚಾಗಿದೆ. ‘ಕಲರ್ಸ್ ಕನ್ನಡ’ದಲ್ಲಿ ಪ್ರತಿ ರಾತ್ರಿ 9.30ಕ್ಕೆ ಬಿಗ್ ಬಾಸ್ ಪ್ರಸಾರ ಆಗುತ್ತಿದೆ. ‘ಜಿಯೋ ಸಿನಿಮಾ’ ಮೂಲಕ 24 ಗಂಟೆಯೂ ಲೈವ್ ನೋಡಬಹುದು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.