ಮುಂಬೈ ಜು.04: ಮುಂಬೈನಲ್ಲಿ ಟೀಂ ಇಂಡಿಯಾ ಭರ್ಜರಿ ರೋಡ್ ಶೋ ನಡೆಸುತ್ತಿದ್ದು, ಜನಸಾಗರ ಸೇರಿದೆ. ಈ ಮಳೆಯಲ್ಲೂ ಅಲ್ಲಿ ಜನರ ಕ್ರೇಜ್ ಕಡಿಮೆಯಾಗಿಲ್ಲ. ಸಾವಿರಾರೂ ಜನರು ಟೀಮ್ ಇಂಡಿಯಾದ ಸಂಭ್ರಮ ನೋಡಲು ಧಾವಿಸಿದ್ದಾರೆ. ಟೀಮ್ ಇಂಡಿಯಾದ ನಾಯಕರು ಈಗಾಗಲೇ ಮುಂಬೈಗೆ ಬಂದಿದ್ದು, ಮುಂಬೈ ಜನರಲ್ಲಿ ಸಂತಸ ಮುಗಿಲು ಮುಟ್ಟಿದೆ. ಇಂದು ಬೆಳಿಗ್ಗೆ ಟೀಮ್ ಇಂಡಿಯಾ ದೆಹಲಿ ಬಂದಿದ್ದು, ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿ ಸಂಭ್ರಮದ ಕ್ಷಣವನ್ನು ಹಂಚಿಕೊಂಡಿದ್ದರು. ಇದೀಗ ಮುಂಬೈಗೆ ಬಂದಿದ್ದು ಅಲ್ಲಿ ಭರ್ಜರಿ ರೋಡ್ ಶೋ ನಡೆಸುತ್ತಿದ್ದಾರೆ. ಇದೀಗ ಈ ಬಗ್ಗೆ ನೇರಪ್ರಸಾರ ಇಲ್ಲಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:10 pm, Thu, 4 July 24