ಟೀಮ್ ಇಂಡಿಯಾ ವಿಜಯೋತ್ಸವ: ಎಲ್ಲಿ ನೋಡಿದರಲ್ಲಿ ಜನ, ಅಭಿಮಾನಿಗಳ ಸಂಭ್ರಮಕ್ಕೆ ಪಾರವೇ ಇಲ್ಲ

ಟೀಮ್ ಇಂಡಿಯಾ ವಿಜಯೋತ್ಸವ: ಎಲ್ಲಿ ನೋಡಿದರಲ್ಲಿ ಜನ, ಅಭಿಮಾನಿಗಳ ಸಂಭ್ರಮಕ್ಕೆ ಪಾರವೇ ಇಲ್ಲ

ಗಂಗಾಧರ​ ಬ. ಸಾಬೋಜಿ
|

Updated on: Jul 04, 2024 | 5:44 PM

ಟಿ20 ವಿಶ್ವಕಪ್ ಗೆದ್ದು ತಾಯ್ನಾಡಿಗೆ ಬಂದಿರುವ ಟೀಮ್ ಇಂಡಿಯಾಗೆ ಅಭೂತಪೂರ್ವ ಸ್ವಾಗತ ದೊರೆಯಲಿದೆ. ಗೌರವ, ಸನ್ಮಾನಗಳ ಮಹಾಪೂರವೆ ಹರಿಯಲಿದೆ. ಜೊತೆಗೆ ಮುಂಬೈನಲ್ಲಿ ವಿಜಯೋತ್ಸವ ಕೂಡ ಜರುಗಲಿದೆ. ತೆರೆದ ಬಸ್‌ನಲ್ಲಿ ವಿಶ್ವಕಪ್ ಗೆದ್ದ ಆಟಗಾರರ ಮೆರವಣಿಗೆ ನಡೆಯಲಿದೆ. ಸದ್ಯ ಮುಂಬೈನಲ್ಲಿ ಭಾರತ ತಂಡದ ವಿಜಯ ಯಾತ್ರೆಗೆ ಸಾಕಷ್ಟು ಜನರು ಸೇರಿದ್ದಾರೆ.

ಮುಂಬೈ, ಜುಲೈ 04: ಟಿ20 ವಿಶ್ವಕಪ್ (T20 World Cup) ಫೈನಲ್​​​ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಟೀಮ್ ಇಂಡಿಯಾ ರೋಚಕ ಗೆಲುವು ದಾಖಲಿಸಿತ್ತು. ಆ ಮೂಲಕ ಬರೋಬ್ಬರಿ 17 ವರ್ಷಗಳ ಬಳಿಕ ಭಾರತ ತಂಡ ಟಿ20 ವಿಶ್ವಕಪ್ ಮುಡಿಗೇರಿಸಿಕೊಂಡಿತು. ಇದು ಕೋಟ್ಯಂತರ ಅಭಿಮಾನಿಗಳ ಸಂಭ್ರಮಕ್ಕೆ ಕಾರಣವಾಗಿದೆ. ಗೆಲುವು ದಾಖಲಿಸಿದ ನಂತರ ಟೀಮ್ ಇಂಡಿಯಾ ಆಟಗಾರರು ತಾಯ್ನಾಡಿಗೆ ಮರಳಿದ್ದಾರೆ. ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿರುವ ಭಾರತ ತಂಡ ಇದೀಗ ಮುಂಬೈಗೆ ಆಗಮಿಸಿದ್ದು, ಇಂದು ಸಂಜೆ ವಿಜಯಯಾತ್ರೆ (Team India Victory Parade) ನಡೆಸಲಿದೆ. ಸದ್ಯ ಭಾರತ ತಂಡದ ಸಂಭ್ರಮ ಮತ್ತು ತಮ್ಮ ನೆಚ್ಚಿನ ಆಟಗಾರರನ್ನು ನೋಡಲು ಸ್ಟೇಡಿಯಂ ಬಳಿ ಈಗಾಗಲೇ ಸಾಕಷ್ಟು ಅಭಿಮಾನಿಗಳು ಆಗಮಿಸುತ್ತಿದ್ದಾರೆ. ಸದ್ಯ ಎಲ್ಲಿ ನೋಡಿದರಲ್ಲಿ ಜನರು ತುಂಬಿಕೊಂಡಿದ್ದು ಅವರ ಸಂಭ್ರಮಕ್ಕೆ ಪಾರವೇ ಇಲ್ಲ. ಇನ್ನು ತೆರೆದ ಬಸ್‌ನಲ್ಲಿ ವಿಶ್ವಕಪ್ ಗೆದ್ದ ಆಟಗಾರರ ಮೆರವಣಿಗೆ ನಡೆಯಲಿದೆ. ನಾರಿಮನ್ ಪಾಯಿಂಟ್​ನಿಂದ ಶುರುವಾಗುವ ವಿಜಯೋತ್ಸವ ಮೆರವಣಿಗೆ ಪ್ರಸಿದ್ಧ ಮರೈನ್ ಡ್ರೈವ್ ಬೀಚ್ ಮೂಲಕ ವಾಂಖೇಡೆ ಸ್ಟೇಡಿಯಂಗೆ ತಲುಪಲಿದೆ. ವಿಡಿಯೋ ನೋಡಿ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.