ಕನಕಪುರ, ರಾಮನಗರವನ್ನು ಬಿಬಿಎಂಪಿ ವ್ಯಾಪ್ತಿಗೆ ಸೇರಿಸುವ ಶಿವಕುಮಾರ್ ಯೋಜನೆ ಸ್ವಾಗತಿಸಿದ ರಾಜಣ್ಣ

ಕನಕಪುರ, ರಾಮನಗರವನ್ನು ಬಿಬಿಎಂಪಿ ವ್ಯಾಪ್ತಿಗೆ ಸೇರಿಸುವ ಶಿವಕುಮಾರ್ ಯೋಜನೆ ಸ್ವಾಗತಿಸಿದ ರಾಜಣ್ಣ

ಅರುಣ್​ ಕುಮಾರ್​ ಬೆಳ್ಳಿ
|

Updated on: Jul 04, 2024 | 5:59 PM

ಶಿವಕುಮಾರ್ ಅವರ ಯೋಜನೆಯನ್ನು ಸ್ವಾಗತಿಸುವ ಮೂಲಕ ಸಹಕಾರ ಸಚಿವ ಕೆಎನ್ ರಾಜಣ್ಣ ರಾಜಕೀಯ ಪ್ರಬುದ್ಧತೆಯನ್ನು ಪ್ರದರ್ಶಿಸಿದ್ದಾರೆ. ಇದನ್ನು ಯಾಕೆ ಹೇಳಬೇಕಾಗಿದೆಯೆಂದರೆ ಪದೇಪದೆ ಹೆಚ್ಚುವರಿ ಡಿಸಿಎಂಗಳ ಪ್ರಸ್ತಾಪ ಮುಂದಿಡುತ್ತಿರುವ ರಾಜಣ್ಣ ಬಗ್ಗೆ ಶಿವಕುಮಾರ್ ಅವರಲ್ಲಿ ಒಳ್ಳೆಯ ಅಬಿಪ್ರಾಯವಿರಲಿಕ್ಕಿಲ್ಲ, ಅದರೆ ರಾಜಣ್ಣ ಅದೇ ಬೇರೆ ಇದೇ ಬೇರೆ ಅಂತ ಹೇಳಿ ಏಸ್ ಬಾರಿಸಿದ್ದಾರೆ.

ಬೆಂಗಳೂರು: ಇಂದು ನಡೆದ ಸಚಿವ ಸಂಪುಟ ಸಭೆಯ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಸಚಿವ ಕೆಎನ್ ರಾಜಣ್ಣ ರಾಮನಗರ ಮತ್ತು ಕನಕಪುರವನ್ನು ಬಿಬಿಎಂಪಿ ವ್ಯಾಪ್ತಿಗೆ ಸೇರಿಸುವ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಆಶಯವನ್ನು ಸ್ವಾಗತಿಸಿದರು. ತನ್ನ ಕ್ಷೇತ್ರಗಳ ಅಭಿವೃದ್ದಿಯ ಬಗ್ಗೆ ಶಾಸಕನಿಗೆ ತನ್ನದೇ ಆದ ಯೋಜನೆ ಮತ್ತು ರೂಪುರೇಷೆಗಳಿರುತ್ತವೆ. ಶಿವಕುಮಾರ್ ಈ ವಿಷಯವನ್ನು ಸಚಿವ ಸಂಪುಟ ಸಭೆಯಲ್ಲಿ ಪ್ರಸ್ತಾಪಿಸಿಲ್ಲ. ಅದರೆ ಅವರು ಕ್ಷೇತ್ರದ ಅಭಿವೃದ್ಧಿ ಗಮನಲ್ಲಿಟ್ಟುಕೊಡೇ ಅದನ್ನು ಯೋಚಿಸಿರುತ್ತಾರೆ ಎಂದು ಹೇಳಿದರು. ಶಿವಕುಮಾರ್ ಪ್ರಸ್ತಾಪಕ್ಕೆ ನಿಮ್ಮದೇನೂ ಆಕ್ಷೇಪಣೆ, ವಿರೋಧ ಇಲ್ಲವೇ ಅಂತ ಕೇಳಿದಾಗ ಸಾರ್ವಜನಿಕ ಹಿತದೃಷ್ಟಿ ಮತ್ತು ಅಭಿವೃದ್ಧಿ ಪೂರಕ ಪ್ರಸ್ತಾವನೆಗಳನ್ನು ಹೇಗೆ ವಿರೋಧಿಸಲಾಗುತ್ತದೆ? ರಾಜಕೀಯವಾಗಿ ಭಿನ್ನಾಭಿಪ್ರಾಯಗಳಿರಲು ಸಾಧ್ಯ, ಅದರೆ ಜನಪರ ಯೋಜನೆಗಳನ್ನು ಎಲ್ಲರೂ ಬೆಂಬಲಿಸಬೇಕಾಗುತ್ತದೆ ಎಂದು ರಾಜಣ್ಣ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಯೋಗ್ಯತೆ ಇಲ್ಲವೆಂದಾದರೆ ಚುನಾವಣೆಗೆ ಹೋಗುವುದು ವಾಸಿ: ಕೆಎನ್ ರಾಜಣ್ಣ ವಿರುದ್ಧ ಡಿಕೆ ಸುರೇಶ್ ಆಕ್ರೋಶ