ತೆರೆಮರೆಯಲ್ಲಿ ಆಪರೇಶನ್ ಹಸ್ತ ಜಾರಿಯಲ್ಲಿರುವಾಗಲೇ ಡಿಕೆ ಶಿವಕುಮಾರ್ ರನ್ನು ಭೇಟಿಯಾದ ತೇಜಸ್ವಿನಿ ಅನಂತಕುಮಾರ್

|

Updated on: Sep 04, 2023 | 4:34 PM

ಲೋಕ ಸಭಾ ಚುನಾವಣೆಗೆ ಕೇವಲ 9 ತಿಂಗಳು ಮಾತ್ರ ಉಳಿದ ಹಿನ್ನೆಲೆಯಲ್ಲಿ ಕರ್ನಾಟಕದಿಂದ ಈ ಬಾರಿ 20 ಸ್ಥಾನಗಳನ್ನು ಗೆದ್ದೇ ತೀರಬೇಕೆಂಬ ಛಲ ತೊಟ್ಟಿರುವ ಶಿವಕುಮಾರ್ ಬಿಜೆಪಿ ಶಾಸಕರನ್ನು ನಾಯಕರನ್ನು ಸೆಳೆಯವ ಪ್ರಯತ್ನ ನಡೆಸಿರೋದು ಸುಳ್ಳಲ್ಲ. ಯಾರೆಲ್ಲ ಕಾಂಗ್ರೆಸ್ ಸೇರುತ್ತಿದ್ದಾರೆ ಅನ್ನೋದು ಕೆಲ ದಿನಗಳಲ್ಲಿ ಗೊತ್ತಾಗಲಿದೆ.

ಬೆಂಗಳೂರು: ಕೇಂದ್ರ ಸಚಿವರಾಗಿದ್ದ ದಿವಂಗತ ಅನಂತಕುಮಾರ (late Anant Kumar) ಪತ್ನಿ ಮತ್ತು ಬಿಜೆಪಿ ನಾಯಕಿ ತೇಜಸ್ವಿನಿ ಅನಂತಕುಮಾರ್ (Tejaswini Anant Kumar) ಅವರ ರಾಜಕೀಯ ನಡೆ ರಾಜ್ಯ ರಾಜಕೀಯ ವಲಯದಲ್ಲಿ ಕುತೂಹಲ ಸೃಷ್ಟಿಸುತ್ತಿದೆ. ಕೆಲ ದಿನಗಳ ಹಿಂದೆ ಅವರು ಕಾಂಗ್ರೆಸ್ ಸೇರುತ್ತಾರೆ ಎಂಬ ವದಂತಿ ಹರಡಿದ್ದು ನಿಜವಾದರೂ ಖುದ್ದು ಅವರೇ ಅದನ್ನು ಅಲ್ಲಗಳೆದಿದ್ದರು. ಇಂದು ಅವರು ಕುಮಾರ ಕೃಪಾ ಅತಿಥಿ ಗೃಹದಲ್ಲಿ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಅವರನ್ನು ಭೇಟಿಯಾದರು. ಭೇಟಿಯ ಕಾರಣ ಗೊತ್ತಾಗಿಲ್ಲವಾದರೂ ಆಗಲೇ ಹೇಳಿದಂತೆ ಕುತೂಹಲವಂತೂ ಮೂಡಿಸಿದೆ. ಲಭ್ಯವಾಗಿರುವ ಫೋಟೋಗಳನ್ನು ನೋಡಿದರೆ, ತೇಜಸ್ವಿನಿ ಒಂದು ಅಮಂತ್ರಣ ಪತ್ರವನ್ನು ಶಿವಕುಮಾರ್ ಗೆ ನೀಡಿದ್ದಾರೆ. ಯಾವ ಕಾರ್ಯಕ್ರಮಕ್ಕೆ ಸಂಬಂಧಿಸಿದ ಅಹ್ವಾನ ಪತ್ರಿಕೆ ಅಂತ ಗೊತ್ತಾಗಿಲ್ಲ. ಲೋಕ ಸಭಾ ಚುನಾವಣೆಗೆ ಕೇವಲ 9 ತಿಂಗಳು ಮಾತ್ರ ಉಳಿದ ಹಿನ್ನೆಲೆಯಲ್ಲಿ ಕರ್ನಾಟಕದಿಂದ ಈ ಬಾರಿ 20 ಸ್ಥಾನಗಳನ್ನು ಗೆದ್ದೇ ತೀರಬೇಕೆಂಬ ಛಲ ತೊಟ್ಟಿರುವ ಶಿವಕುಮಾರ್ ಬಿಜೆಪಿ ಶಾಸಕರನ್ನು ನಾಯಕರನ್ನು ಸೆಳೆಯವ ಪ್ರಯತ್ನ ನಡೆಸಿರೋದು ಸುಳ್ಳಲ್ಲ. ಯಾರೆಲ್ಲ ಕಾಂಗ್ರೆಸ್ ಸೇರುತ್ತಿದ್ದಾರೆ ಅನ್ನೋದು ಕೆಲ ದಿನಗಳಲ್ಲಿ ಗೊತ್ತಾಗಲಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ