ಸ್ಟಾಲಿನ್ ಮಗ ಉದಯನಿಧಿಗೆ ನಾವಲ್ಲ, ತಮಿಳುನಾಡು ಜನ ಉತ್ತರ ಕೊಡುತ್ತಾರೆ: ಡಿಕೆ ಶಿವಕುಮಾರ್, ಡಿಸಿಎಂ

ಸ್ಟಾಲಿನ್ ಮಗ ಉದಯನಿಧಿಗೆ ನಾವಲ್ಲ, ತಮಿಳುನಾಡು ಜನ ಉತ್ತರ ಕೊಡುತ್ತಾರೆ: ಡಿಕೆ ಶಿವಕುಮಾರ್, ಡಿಸಿಎಂ

ಅರುಣ್​ ಕುಮಾರ್​ ಬೆಳ್ಳಿ
|

Updated on: Sep 04, 2023 | 2:20 PM

ರಾಜ್ಯದಲ್ಲಿ ಬರಗಾಲ ಘೋಷಿಸುವುದನ್ನು ಕುರಿತು ಕೇಳಿದಾಗ, ಆಯಾ ಜಿಲ್ಲೆಗಳ ಉಸ್ತುವಾರಿ ಸಚಿವರು, ಅಧಿಕಾರಿಗಳು ತಾಲ್ಲೂಕುಗಳ ಸ್ಥಿತಿಯನ್ನು ಅಧ್ಯಯನ ನಡೆಸಿದ್ದಾರೆ ಮತ್ತು ವರದಿಗಳನ್ನು ಕಳಿಸಿದ್ದಾರೆ. ಜಿಲ್ಲೆಗಳ ಸಚಿವರು ಮತ್ತು ಕೃಷಿ ಸಚಿವರು ಕ್ಯಾಬಿನೆಟ್ ಕಮಿಟಿಯೊಂದಿಗೆ ಚರ್ಚೆ ನಡೆಸಿ ಯಾವ್ಯಾವ ತಾಲ್ಲೂಕುಗಳಲ್ಲಿ ಬರ ಅನ್ನೋದನ್ನು ಘೋಷಿಸಲಿದ್ದಾರೆ ಎಂದು ಶಿವಕುಮಾರ್ ಹೇಳಿದರು

ಬೆಂಗಳೂರು: ತಮಿಳು ನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ (MK Stalin) ಪುತ್ರ ಉದಯನಿಧಿ ಸ್ಟಾಲಿನ್  (Udhayanidhi Stalin) ಸನಾತನ ಧರ್ಮದ ಬಗ್ಗೆ ನೀಡಿರುವ ವಿವಾದಾತ್ಮಕ ಹೇಳಿಕೆಯನ್ನು ರಾಷ್ಟ್ರದೆಲ್ಲೆಡೆ ಖಂಡಿಸಲಾಗುತ್ತಿದೆ. ಬೆಂಗಳೂರಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಅವರಿಗೆ ಉದಯನಿಧಿ ನೀಡಿರುವ ಹೇಳಿಕೆ ಬಗ್ಗೆ ಕೇಳಿದಾಗ, ಒಂದೆರಡು ಕ್ಷಣ ಯೋಚಿಸಿ, ಅವರ ಹೇಳಿಕೆ ತಮಿಳುನಾಡು ಜನರೇ ಉತ್ತರ ನೀಡುತ್ತಾರೆ, ತಾವೇನೂ ಹೇಳಬೇಕಿಲ್ಲ ಎಂದರು. ಅದಾದ ಬಳಿಕ ರಾಜ್ಯದಲ್ಲಿ ಬರಗಾಲ ಘೋಷಿಸುವುದನ್ನು ಕುರಿತು ಕೇಳಿದಾಗ, ಆಯಾ ಜಿಲ್ಲೆಗಳ ಉಸ್ತುವಾರಿ ಸಚಿವರು, ಅಧಿಕಾರಿಗಳು ತಾಲ್ಲೂಕುಗಳ ಸ್ಥಿತಿಯನ್ನು ಅಧ್ಯಯನ ನಡೆಸಿದ್ದಾರೆ ಮತ್ತು ವರದಿಗಳನ್ನು ಕಳಿಸಿದ್ದಾರೆ. ಜಿಲ್ಲೆಗಳ ಸಚಿವರು ಮತ್ತು ಕೃಷಿ ಸಚಿವರು ಕ್ಯಾಬಿನೆಟ್ ಕಮಿಟಿಯೊಂದಿಗೆ ಚರ್ಚೆ ನಡೆಸಿ ಯಾವ್ಯಾವ ತಾಲ್ಲೂಕುಗಳಲ್ಲಿ ಬರ ಅನ್ನೋದನ್ನು ಘೋಷಿಸಲಿದ್ದಾರೆ ಎಂದು ಶಿವಕುಮಾರ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ