AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಮಗ ಓದುತ್ತಿದ್ದ ಶಾಲೆಯ ಹೊರಗೆ ತಂದೆಯ ಬರ್ಬರ ಹತ್ಯೆ

Video: ಮಗ ಓದುತ್ತಿದ್ದ ಶಾಲೆಯ ಹೊರಗೆ ತಂದೆಯ ಬರ್ಬರ ಹತ್ಯೆ

ನಯನಾ ರಾಜೀವ್
|

Updated on: Dec 09, 2025 | 10:13 AM

Share

ಮಗ ಓದುತ್ತಿದ್ದ ಶಾಲೆಯ ಹೊರಗೆ ತಂದೆಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ. ತೆಲಂಗಾಣದ ಮೆಡ್ಚಲ್-ಮಲ್ಕಜ್‌ಗಿರಿ ಜಿಲ್ಲೆಯಲ್ಲಿ ಸೋಮವಾರ ಬೆಳಗ್ಗೆ ಮಗನನ್ನು ಶಾಲೆಗೆ ಬಿಡಲು ಹೋಗಿದ್ದ 50 ವರ್ಷದ ವ್ಯಕ್ತಿಯೊಬ್ಬರನ್ನು ಆರು ಅಪರಿಚಿತ ವ್ಯಕ್ತಿಗಳು ಶಾಲೆಯ ಎದುರು ಇರಿದು ಕೊಂದಿದ್ದಾರೆ. ಘಟನೆಯ ವಿಡಿಯೋ ಇದೀಗ ಬಹಿರಂಗಗೊಂಡಿದೆ. ದಾಳಿಕೋರರು ಆ ವ್ಯಕ್ತಿಯನ್ನು ಇರಿದು ಕೊಂದಾಗ ಆ ವ್ಯಕ್ತಿ ನೆಲದ ಮೇಲೆ ಬಿದ್ದಿರುವುದನ್ನು ಈ ಕ್ಲಿಪ್ ತೋರಿಸುತ್ತದೆ, ಇಬ್ಬರು ಪಕ್ಕದಲ್ಲಿದ್ದವರು ದೂರದಿಂದ ನೋಡುತ್ತಿದ್ದಾರೆ. ನಂತರ ಆರೋಪಿಗಳು ರಿಕ್ಷಾ ಮತ್ತು ಮೋಟಾರ್ ಸೈಕಲ್‌ನಲ್ಲಿ ಸ್ಥಳದಿಂದ ಪರಾರಿಯಾಗುವುದನ್ನು ಕಾಣಬಹುದು. ಇಡೀ ಘಟನೆ ಹತ್ತಿರದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಮೆಡ್ಚಲ್, ಡಿಸೆಂಬರ್ 09: ಮಗ ಓದುತ್ತಿದ್ದ ಶಾಲೆಯ ಹೊರಗೆ ತಂದೆಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ. ತೆಲಂಗಾಣದ ಮೆಡ್ಚಲ್-ಮಲ್ಕಜ್‌ಗಿರಿ ಜಿಲ್ಲೆಯಲ್ಲಿ ಸೋಮವಾರ ಬೆಳಗ್ಗೆ ಮಗನನ್ನು ಶಾಲೆಗೆ ಬಿಡಲು ಹೋಗಿದ್ದ 50 ವರ್ಷದ ವ್ಯಕ್ತಿಯೊಬ್ಬರನ್ನು ಆರು ಅಪರಿಚಿತ ವ್ಯಕ್ತಿಗಳು ಶಾಲೆಯ ಎದುರು ಇರಿದು ಕೊಂದಿದ್ದಾರೆ.
ಘಟನೆಯ ವಿಡಿಯೋ ಇದೀಗ ಬಹಿರಂಗಗೊಂಡಿದೆ. ದಾಳಿಕೋರರು ಆ ವ್ಯಕ್ತಿಯನ್ನು ಇರಿದು ಕೊಂದಾಗ ಆ ವ್ಯಕ್ತಿ ನೆಲದ ಮೇಲೆ ಬಿದ್ದಿರುವುದನ್ನು ಈ ಕ್ಲಿಪ್ ತೋರಿಸುತ್ತದೆ, ಇಬ್ಬರು ಪಕ್ಕದಲ್ಲಿದ್ದವರು ದೂರದಿಂದ ನೋಡುತ್ತಿದ್ದಾರೆ. ನಂತರ ಆರೋಪಿಗಳು ರಿಕ್ಷಾ ಮತ್ತು ಮೋಟಾರ್ ಸೈಕಲ್‌ನಲ್ಲಿ ಸ್ಥಳದಿಂದ ಪರಾರಿಯಾಗುವುದನ್ನು ಕಾಣಬಹುದು. ಇಡೀ ಘಟನೆ ಹತ್ತಿರದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಮೃತ ವ್ಯಕ್ತಿ ಹೆಸರು ಘಂಟಾ ವೆಂಕಟರತ್ನಂ, ಇವರು ರಿಯಲ್ ಎಸ್ಟೇಟ್ ಉದ್ಯಮಿ. ಫೋಸ್ಟರ್ ಬಿಲ್ಲಾಬಾಂಗ್ ಶಾಲೆಯ ಮುಂದೆ ಅವರ ಮೇಲೆ ಹಲ್ಲೆ ನಡೆಸಲಾಗಿದೆ. ಅವರು ತಮ್ಮ ಮಗುವನ್ನು ಬಿಟ್ಟು ಸ್ಕೂಟರ್‌ನಲ್ಲಿ ಮನೆಗೆ ಹಿಂತಿರುಗುತ್ತಿದ್ದಾಗ, ಮೋಟಾರ್‌ಬೈಕ್‌ನಲ್ಲಿ ಬಂದ ಇಬ್ಬರು ಮತ್ತು ಆಟೋರಿಕ್ಷಾದಲ್ಲಿ ಬಂದಿದ್ದ ಇತರ ನಾಲ್ವರು ವ್ಯಕ್ತಿಗಳು ಶಾಲೆಯ ಹೊರಗೆ ನಿಲ್ಲಿಸಿ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ವೆಂಕಟರತ್ನಂ ಸ್ಥಳದಲ್ಲೇ ಸಾವನ್ನಪ್ಪಿದರು. ಅಪರಾಧ ಸ್ಥಳದಿಂದ ಒಂದು ಚಾಕುವನ್ನು ವಶಪಡಿಸಿಕೊಳ್ಳಲಾಗಿದೆ. ಅಪರಾಧದ ಉದ್ದೇಶ ಸ್ಪಷ್ಟವಾಗಿಲ್ಲ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ