Video: ಊರಿಗೆ ರಸ್ತೆಯಿಲ್ಲ ಎಂದು ಕೇಳಲು ಬಂದ ದಿವ್ಯಾಂಗನನ್ನು ಕಲೆಕ್ಟರ್ ಕಚೇರಿಯಿಂದ ಹೊರದಬ್ಬಿದ ಸಿಬ್ಬಂದಿ
ಊರಿಗೆ ರಸ್ತೆ ಸೌಕರ್ಯ ಕಲ್ಪಿಸುವಂತೆ ಮನವಿ ಮಾಡಲು ಹೋಗಿದ್ದ ದಿವ್ಯಾಂಗನನ್ನು ಕಲೆಕ್ಟರ್ ಕಚೇರಿಯಿಂದ ಸಿಬ್ಬಂದಿ ಹೊರದಬ್ಬಿದ ಹೃದಯವಿದ್ರಾವಕ ಘಟನೆ ತೆಲಂಗಾಣದಲ್ಲಿ ನಡೆದಿದೆ. ಸಾರ್ವಜನಿಕರ ಕುಂದುಕೊರತೆ ವಿಚಾರಣೆ ಸಂದರ್ಭದಲ್ಲಿ ನಡೆದ ಘಟನೆ ಕ್ಯಾಮರಾದಲ್ಲಿ ಸೆರೆಯಾಗಿದೆ.ಆ ವ್ಯಕ್ತಿಯನ್ನು ರಾಜ ಗಂಗಾರಾಮ್ ಎಂದು ಗುರುತಿಸಲಾಗಿದೆ. ಅವರು ಮಲ್ಲಾಪುರ ಮಂಡಲದ ಮುತ್ಯಂಪೇಟೆ ಗ್ರಾಮದ ನಿವಾಸಿ. ಕಳೆದ ಎಂಟು ವರ್ಷಗಳಿಂದ ಗಂಗಾರಾಮ್ ತಮ್ಮ ಮನೆಗೆ ರಸ್ತೆಗಾಗಿ ಮನವಿ ಮಾಡುತ್ತಿದ್ದರು.
ಹೈದರಾಬಾದ್, ಆಗಸ್ಟ್ 12: ಊರಿಗೆ ರಸ್ತೆ ಸೌಕರ್ಯ ಕಲ್ಪಿಸುವಂತೆ ಮನವಿ ಮಾಡಲು ಹೋಗಿದ್ದ ದಿವ್ಯಾಂಗನನ್ನು ಕಲೆಕ್ಟರ್ ಕಚೇರಿಯಿಂದ ಸಿಬ್ಬಂದಿ ಹೊರದಬ್ಬಿದ ಹೃದಯವಿದ್ರಾವಕ ಘಟನೆ ತೆಲಂಗಾಣದಲ್ಲಿ ನಡೆದಿದೆ. ಸಾರ್ವಜನಿಕರ ಕುಂದುಕೊರತೆ ವಿಚಾರಣೆ ಸಂದರ್ಭದಲ್ಲಿ ನಡೆದ ಘಟನೆ ಕ್ಯಾಮರಾದಲ್ಲಿ ಸೆರೆಯಾಗಿದೆ.ಆ ವ್ಯಕ್ತಿಯನ್ನು ರಾಜ ಗಂಗಾರಾಮ್ ಎಂದು ಗುರುತಿಸಲಾಗಿದೆ.
ಅವರು ಮಲ್ಲಾಪುರ ಮಂಡಲದ ಮುತ್ಯಂಪೇಟೆ ಗ್ರಾಮದ ನಿವಾಸಿ. ಕಳೆದ ಎಂಟು ವರ್ಷಗಳಿಂದ ಗಂಗಾರಾಮ್ ತಮ್ಮ ಮನೆಗೆ ರಸ್ತೆಗಾಗಿ ಮನವಿ ಮಾಡುತ್ತಿದ್ದರು. ಅವರು ಜಿಲ್ಲಾಧಿಕಾರಿ ಸತ್ಯಪ್ರಸಾದ್ ಅವರಿಗೆ ದೂರು ಸಲ್ಲಿಸಿದ್ದಾರೆಂದು ವರದಿಯಾಗಿದೆ. ಜಿಲ್ಲಾಧಿಕಾರಿ ಈ ಕುರಿತು ಕ್ರಮ ಕೈಗೊಳ್ಳುವುದಾಗಿ ಮನವಿ ಮಾಡಿದ್ದರೂ ಯಾವುದೇ ಪ್ರಗತಿ ಕಂಡುಬಂದಿರಲಿಲ್ಲ. ಜಿಲ್ಲಾಧಿಕಾರಿ ಕಚೇರಿಯ ಸಿಬ್ಬಂದಿ ಅವರ ಬಳಿಗೆ ಬಂದಾಗ ಆ ವ್ಯಕ್ತಿ ವೀಲ್‌ಚೇರ್‌ನಲ್ಲಿ ಕುಳಿತಿರುವುದನ್ನು ಕಾಣಬಹುದು.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Aug 12, 2025 11:23 AM