ಅತ್ತ ಹೆರಿಗೆಗೆಂದು ತವರಿಗೆ ಹೋದ ಟೆಕ್ಕಿ ಪತ್ನಿ, ಇತ್ತ ಫ್ಲ್ಯಾಟ್​ ಮಾರಿ ಪತಿ ಪರಾರಿ

Updated on: Jul 20, 2025 | 10:53 AM

ಅತ್ತ ಹೆರಿಗೆಗೆಂದು ಟೆಕ್ಕಿ ಪತ್ನಿ ತವರಿಗೆ ಹೋಗಿದ್ದರೆ ಇತ್ತ ಪತಿ ಫ್ಲ್ಯಾಟ್ ಮಾರಿ ಪರಾರಿಯಾಗಿರುವ ಘಟನೆ ಕುಕಟ್ಪಲ್ಲಿಯಲ್ಲಿರುವ ಶಾಂತಿ ನಗರದಲ್ಲಿ ನಡೆದಿದೆ. ಪತ್ನಿ ಹೆರಿಗೆ ನಂತರ ಮನೆಗೆ ಹಿಂದಿರುಗಿದಾಗ ಪತಿ ಶ್ರವಣ್ ಫ್ಲಾಟ್​ ಮಾರಾಟ ಮಾಡಿರುವುದು ತಿಳಿದುಬಂದಿದೆ. ನಿಕಿತಾ ಮನೆಯ ಕಂತು ಪಾವತಿಸುತ್ತಿದ್ದರು. ಆದರೆ ಮನೆಗೆ ಹಿಂದಿರುಗುವ ಹೊತ್ತಿಗೆ ಅಪರಿಚಿತರು ಮನೆ ಬಾಗಿಲು ತೆರೆದಾಗ ಆತಂಕಗೊಂಡಿದ್ದಾರೆ. ಆಕೆಯ ಸಂಬಂಧಿಕರು ಮನೆ ಮುಂದೆ ಧರಣಿ ಕುಳಿತಿದ್ದಾರೆ.

ತೆಲಂಗಾಣ, ಜುಲೈ 20: ಅತ್ತ ಹೆರಿಗೆಗೆಂದು ಟೆಕ್ಕಿ ಪತ್ನಿ ತವರಿಗೆ ಹೋಗಿದ್ದರೆ ಇತ್ತ ಪತಿ ಫ್ಲ್ಯಾಟ್ ಮಾರಿ ಪರಾರಿಯಾಗಿರುವ ಘಟನೆ ಕುಕಟ್ಪಲ್ಲಿಯಲ್ಲಿರುವ ಶಾಂತಿ ನಗರದಲ್ಲಿ ನಡೆದಿದೆ. ಪತ್ನಿ ಹೆರಿಗೆ ನಂತರ ಮನೆಗೆ ಹಿಂದಿರುಗಿದಾಗ ಪತಿ ಶ್ರವಣ್ ಫ್ಲಾಟ್​ ಮಾರಾಟ ಮಾಡಿರುವುದು ತಿಳಿದುಬಂದಿದೆ. ನಿಕಿತಾ ಮನೆಯ ಕಂತು ಪಾವತಿಸುತ್ತಿದ್ದರು. ಆದರೆ ಮನೆಗೆ ಹಿಂದಿರುಗುವ ಹೊತ್ತಿಗೆ ಅಪರಿಚಿತರು ಮನೆ ಬಾಗಿಲು ತೆರೆದಾಗ ಆತಂಕಗೊಂಡಿದ್ದಾರೆ. ಆಕೆಯ ಸಂಬಂಧಿಕರು ಮನೆ ಮುಂದೆ ಧರಣಿ ಕುಳಿತಿದ್ದಾರೆ.

ಪತಿ ಎಲ್ಲಿದ್ದಾನೆ ಎನ್ನುವ ಕುರುಹೂ ಇಲ್ಲ. ನಿಕಿತಾ ಮತ್ತು ಶ್ರವಣ್ ನಾಲ್ಕು ವರ್ಷಗಳ ಹಿಂದೆ ಪ್ರೇಮ ವಿವಾಹವಾಗಿದ್ದರು. ಆಗ ನಿಕಿತಾ ಪೋಷಕರು ವರದಕ್ಷಿಣೆಯಾಗಿ 48 ಲಕ್ಷ ರೂ. ನೀಡಿದ್ದರು. ದಂಪತಿ ಬ್ಯಾಂಕ್​​ನಲ್ಲಿ ಸಾಲ ಮಾಡಿ ಆ ಹಣಕ್ಕೆ ಸೇರಿಸಿ ಫ್ಲ್ಯಾಟ್ ಖರೀದಿ ಮಾಡಿದ್ದರು.ನಿಕಿತಾ ಇಎಂಐ ಪಾವತಿಸುತ್ತಿದ್ದವರು. ನಿಕಿತಾ ಗರ್ಭಿಣಿಯಾಗಿ ಹೆರಿಗೆಗಾಗಿ ತನ್ನ ಪೋಷಕರ ಮನೆಗೆ ಹೋಗುವವರೆಗೂ ಎಲ್ಲವೂ ಚೆನ್ನಾಗಿತ್ತು.

ಕೊನೆಗೆ ಶ್ರವಣ್ ಮಾತುಕತೆಯನ್ನು ಕಡಿಮೆ ಮಾಡಿದ್ದ, ಆಕೆಯ ಮನೆಗೆ ಬರುವುದನ್ನು ನಿಲ್ಲಿಸಿದ್ದ, ಆ ಸಮಯದಲ್ಲಿ ಆತ ಚೆನ್ನೈನಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿಕೊಂಡಿದ್ದ. ಆತ ತುಂಬಾ ದಿನ ಕಾಣಿಸಿದ ಕಾರಣ ಪತ್ನಿ ಮನೆಗೆ ಬಂದಿದ್ದಳು.

ನಿಕಿತಾ ತನ್ನ ಹೆಸರಿನಲ್ಲಿ ಬ್ಯಾಂಕ್ ಸಾಲವನ್ನು ಪಡೆದುಕೊಂಡಿದ್ದು, ಮಾರಾಟಕ್ಕೆ ಯಾವುದೇ ಕಾಗದಪತ್ರಗಳಿಗೆ ಸಹಿ ಹಾಕಿಲ್ಲ. ತನ್ನ ಒಪ್ಪಿಗೆಯಿಲ್ಲದೆ ಮನೆಯನ್ನು ಮಾರಾಟ ಮಾಡಲಾಗಿದ್ದು, ತುರ್ತು ಕ್ರಮ ಕೈಗೊಳ್ಳುವಂತೆ ಕೋರಿ ನಿಕಿತಾ ಕುಕತ್ಪಲ್ಲಿ ಪೊಲೀಸರಿಗೆ ದೂರು ನೀಡಿದ್ದಾರೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published on: Jul 20, 2025 10:53 AM