ತೆಲಂಗಾಣ ಚುನಾವಣೆ ಮಧ್ಯೆ ಬಿಜೆಪಿ ಬಿಟ್ಟು ಕಾಂಗ್ರೆಸ್​​ ಕೈಹಿಡಿದ ವಿಜಯಶಾಂತಿ! ಏನೀ ನಿರ್ಧಾರ?

|

Updated on: Nov 16, 2023 | 9:42 AM

ಇತ್ತೀಚೆಗೆ ಕಾಂಗ್ರೆಸ್ ಮುಖಂಡ ಮಲ್ಲು ರವಿ ವಿಜಯಶಾಂತಿ ಮಾತ್ರವಲ್ಲ.. ಇನ್ನು ಕೆಲವರು ಕೂಡ ಸದ್ಯದಲ್ಲೇ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರಲಿದ್ದಾರೆ ಎಂದು ಹೇಳಿದ್ದರು.. ಆಗ ಟಿವಿ 9 ತೆಲುಗು ನಟಿ ವಿಜಯಶಾಂತಿ ಅವರ ಪ್ರತಿಕ್ರಿಯೆ ಕೇಳಿತ್ತು. ಅದಕ್ಕೆ ಉತ್ತರಿಸಿದ್ದ ವಿಜಯಶಾಂತಿ ಅವರು ಅಂತಹದ್ದೇನೂ ಇಲ್ಲ, ಕಳೆದ ವಾರ ಹೈದರಾಬಾದಿಗೆ ಪ್ರಧಾನಿ ಮೋದಿ ಬಂದಿದ್ದಾಗ ಅವರನ್ನು ಆಹ್ವಾನಿಸಲು ನಾನು ವಿಮಾನ ನಿಲ್ದಾಣಕ್ಕೂ ಬಂದಿದ್ದೆ ಗೊತ್ತಾ? ಎಂದು ಸಬೂತು ನೀಡುವ ದಾಟಿಯಲ್ಲಿ ಮಾತನಾಡಿದ್ದರು.

ತೆಲಂಗಾಣ ಅಸೆಂಬ್ಲಿ ಚುನಾವಣೆ (Telangana Assembly Elections 2023) ಸಮೀಪಿಸುತ್ತಿದೆ. ಈ ಮಧ್ಯೆ, ಹಿಡಿಯ ನಟಿ, ರಾಜಕಾರಣಿ ವಿಜಯಶಾಂತಿ ( Vijayashanti) ಸಂಚಲನದ ನಿರ್ಧಾರ ಕೈಗೊಂಡಿದ್ದಾರೆ. ನಾಲ್ಕು ದಿನಗಳ ಹಿಂದೆಯೂ ಬಿಜೆಪಿ ಪಕ್ಷ ಬಿಡುವುದಿಲ್ಲ ಎಂದಿದ್ದ ವಿಜಯಶಾಂತಿ ನಿನ್ನೆ ಬುಧವಾರ ದಿಢೀರನೆ ಬಿಜೆಪಿಗೆ ರಾಜೀನಾಮೆ ನೀಡಿದ್ದಾರೆ. ಈ ಸಂಬಂಧ ತೆಲಂಗಾಣ ಬಿಜೆಪಿ ರಾಜ್ಯಾಧ್ಯಕ್ಷ ಕಿಶನ್ ರೆಡ್ಡಿ ಅವರಿಗೆ ರಾಜೀನಾಮೆ ಪತ್ರ (Resignation) ರವಾನಿಸಿದ್ದಾರೆ. ಆದರೆ, ವಿಜಯಶಾಂತಿ ಬೇರೆ ಪಕ್ಷ ಸೇರುವ ಬಗ್ಗೆ ಅವರು ತಕ್ಷಣಕ್ಕೆ ಯಾವುದೇ ಸುಳಿವು ಬಿಟ್ಟುಕೊಟ್ಟಿಲ್ಲ. ಆದರೆ ವಿಶ್ವಸನೀಯ ಮೂಲಗಳ ಮಾಹಿತಿ ಪ್ರಕಾರ ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi) ಅಧಿಪತ್ಯದ ಕಾಂಗ್ರೆಸ್ ಪಕ್ಷ ಸೇರುವ ಸಾಧ್ಯತೆ ಇದೆಯಂತೆ. ಇತ್ತೀಚೆಗಷ್ಟೇ ವಿಜಯಶಾಂತಿ ಬಿಜೆಪಿಗೆ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರುತ್ತಾರೆ ಎಂಬ ಮಾತುಗಳು ವ್ಯಾಪಕವಾಗಿ ಕೇಳಿಬಂದಿತ್ತು. ಸ್ವಯಂ ಕಾಂಗ್ರೆಸ್ ಮುಖಂಡ ಮಲ್ಲು ರವಿ ಅವರೇ ಕಾಂಗ್ರೆಸ್ ಸೇರುತ್ತಾರೆ ಎಂದಿದ್ದರು. ಆಗ ವಿಜಯಶಾಂತಿ ಪ್ರತಿಕ್ರಿಯಿಸಿ… ನಾನು ಇಂಥದ್ದನ್ನು ಖಂಡಿಸುತ್ತೇನೆ. ಕಾಂಗ್ರೆಸ್​ ಸೇರುವ ಪ್ರಮೇಯ ತನಗಿಲ್ಲ ಎಂದಿದ್ದರು​, ಈಗ ನಾಲ್ಕೇ ದಿನದಲ್ಲಿ ಬಿಜೆಪಿಗೆ ರಾಜೀನಾಮೆ ನೀಡುವ ವಿಜಯಶಾಂತಿ ನಿರ್ಧಾರ ರಾಜಕೀಯವಾಗಿ ಸಂಚಲನ ಮೂಡಿಸಿದೆ.

ಕಾಂಗ್ರೆಸ್ ಮುಖಂಡ ಮಲ್ಲು ರವಿ ಏನು ಹೇಳಿದ್ದರು ಅಂದ್ರೆ…

ವಿಜಯಶಾಂತಿ ಮಾತ್ರವಲ್ಲ.. ಇನ್ನು ಕೆಲವರು ಕೂಡ ಸದ್ಯದಲ್ಲೇ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರಲಿದ್ದಾರೆ ಎಂದಿದ್ದರು.. ಆಗ ಟಿವಿ 9 ತೆಲುಗು ನಟಿ ವಿಜಯಶಾಂತಿ ಅವರ ಪ್ರತಿಕ್ರಿಯೆ ಕೇಳಿತ್ತು. ಅದಕ್ಕೆ ಉತ್ತರಿಸಿದ್ದ ವಿಜಯಶಾಂತಿ ಅವರು ಅಂತಹದ್ದೇನೂ ಇಲ್ಲ, ಕಳೆದ ವಾರ ಹೈದರಾಬಾದಿಗೆ ಪ್ರಧಾನಿ ಮೋದಿ ಬಂದಿದ್ದಾಗ ಅವರನ್ನು ಆಹ್ವಾನಿಸಲು ನಾನು ವಿಮಾನ ನಿಲ್ದಾಣಕ್ಕೂ ಬಂದಿದ್ದೆ ಗೊತ್ತಾ? ಎಂದು ಸಬೂತು ನೀಡುವ ದಾಟಿಯಲ್ಲಿ ಮಾತನಾಡಿದ್ದರು.

ಆದರೆ, ಮೂರು ಬಾರಿ ಮೋದಿ ಸಭೆಗೆ ವಿಜಯಶಾಂತಿ ಬಂದಿರಲಿಲ್ಲ ಎಂಬುದು ಗಮನಾರ್ಹ. ಇದರಿಂದ ಅವರು ರಾಜೀನಾಮೆ ನೀಡುತ್ತಾರೆ ಎಂಬ ಮಾತು ನಿರಂತರ ಪ್ರಚಾರ ಪಡೆಯುತ್ತಿತ್ತು. ಇದೇ ವೇಳೆ ತೆಲಂಗಾಣ ಬಿಜೆಪಿ ಪಕ್ಷದ ನಾಯಕರ ಜತೆಗಿನ ಭಿನ್ನಾಭಿಪ್ರಾಯ ಕುರಿತು ವಿಜಯಶಾಂತಿ ಮಾಡಿರುವ ಟ್ವೀಟ್ ಗಳು ಹಲವು ಬಾರಿ ಗೊಂದಲಕ್ಕೆ ಕಾರಣವಾಗಿತ್ತು ಎಂಬುದು ಇಲ್ಲಿ ಉಲ್ಲೇಖಾರ್ಹ

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ