CCL 2023: ಶಿವಣ್ಣನ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ತೆಲುಗಿನ ಯುವ ನಟ
ಸಿಸಿಎಲ್ 2023 ಪಂದ್ಯಗಳು ಬೆಂಗಳೂರಿನಲಿ ನಡೆಯುತ್ತಿದ್ದು, ಇಂದು ಪಂದ್ಯವಾಡಿದ ತೆಲುಗು ತಂಡದಲ್ಲಿದ್ದ ತೆಲುಗು ಚಿತ್ರರಂಗದ ಸ್ಟಾರ್ ಯುವನಟ, ಮ್ಯಾಚ್ ವೀಕ್ಷಿಸಲು ಬಂದಿದ್ದ ಶಿವಣ್ಣನ ಕಾಲಿಗೆ ಎರಗಿ ಆಶೀರ್ವಾದ ಪಡೆದರು.
ಸೆಲೆಬ್ರಿಟಿ ಕ್ರಿಕೆಟ್ ಲೀಗ್ (CCL 2023) ಕ್ರಿಕೆಟ್ ಟೂರ್ನಿಯ ಎರಡು ಪಂದ್ಯಗಳು ಇಂದು ಬೆಂಗಳೂರಿನ ಚಿನ್ನಸ್ವಾಮಿಯಲ್ಲಿ ನಡೆದಿವೆ. ಸುದೀಪ್, ಗಣೇಶ್ ಇನ್ನಿತರೆ ಸ್ಯಾಂಡಲ್ವುಡ್ ಸೆಲೆಬ್ರಿಟಿಗಳ ಕರ್ನಾಟಕ ಬುಲ್ಡೋಜರ್ಸ್ ತಂಡ ಚೆನ್ನೈ ರೈನೋರ್ಸ್ ವಿರುದ್ಧ ಆಡುತ್ತಿದೆ. ತೆಲುಗಿನ ಸೆಲೆಬ್ರಿಟಿಗಳು ಇಂದು ಪಂಜಾಬ್ ವಿರುದ್ಧ ಆಡಿದ್ದು, ಪಂದ್ಯ ಸೋತಿದ್ದಾರೆ. ಕರ್ನಾಟಕ ತಂಡಕ್ಕೆ ಬೆಂಬಲ ಸೂಚಿಸಲು ಶಿವಣ್ಣ (Shiva Rajkumar) ಕ್ರೀಡಾಂಗಣಕ್ಕೆ ಬಂದಾಗ, ತೆಲುಗು ಚಿತ್ರರಂಗದ ಜನಪ್ರಿಯ ಯುವ ನಟ ಅಖಿಲ್ (Akhil Akkineni), ಶಿವಣ್ಣನ ಆಶೀರ್ವಾದ ಪಡೆದರು. ಅಖಿಲ್, ತೆಲುಗಿನ ಜನಪ್ರಿಯ ನಟ ಅಕ್ಕಿನೇನಿ ನಾಗಾರ್ಜುನ ಪುತ್ರ. ಅಖಿಲ್ ಹಾಗೂ ಶಿವಣ್ಣ ಕೆಲ ಕಾಲ ಮಾತುಕತೆ ನಡೆಸಿದರು.