ಚಿಕ್ಕಮಗಳೂರು: ‘ರಾಜಹಂಸಗಡದಲ್ಲಿ ಸರ್ಕಾರದಿಂದ ನಿರ್ಮಿತವಾಗಿರುವ ಶಿವಾಜಿ ಮೂರ್ತಿಯನ್ನ, ಅಧಿಕೃತವಾಗಿ ಉದ್ಘಾಟನೆ ಮಾಡಿದ ಮೇಲೆ, ಮತ್ತೊಮ್ಮೆ ಅದನ್ನ ಉದ್ಘಾಟನೆ ಮಾಡುವುದು ಹಾಸ್ಯಾಸ್ಪದ ಎಂದು ಸಿಎಂ ಬಸವರಾಜ ಬೊಮ್ಮಾಯಿ(Basavaraj Bommai) ಚಿಕ್ಕಮಗಳೂರಿನಲ್ಲಿ ಹೇಳಿದರು. ಬಾಳೆಹೊನ್ನೂರಿನ ರಂಭಾಪುರಿ ಪೀಠದಲ್ಲಿ ‘ಕಾಂಗ್ರೆಸ್ನಿಂದ ಶಿವಾಜಿ ಪ್ರತಿಮೆ ಮತ್ತೊಮ್ಮೆ ಲೋಕಾರ್ಪಣೆ ಹಿನ್ನೆಲೆ ಕುರಿತು ಪ್ರತಿಕ್ರಿಯಿಸಿದ ಅವರು ‘ಪ್ರತಿಯೊಬ್ಬರೂ ತಮ್ಮ ಗೌರವವನ್ನು ಸಮರ್ಪಣೆ ಮಾಡಬಹುದು. ಆದರೆ ಮತ್ತೆ ಉದ್ಘಾಟನೆ ಮಾಡುವುದನ್ನು ನಾನು ಎಂದು ಕೇಳಿರಲಿಲ್ಲ. ಅಧಿಕಾರ ಚಲಾವಣೆ ಮಾಡುವಂತಹ ಆಲಸ್ಯ ಎಷ್ಟಿದೆ ಅನ್ನೋದು ಇದರಲ್ಲಿ ಸ್ಪಷ್ಟವಾಗುತ್ತದೆ ಎಂದರು.
ಇನ್ನಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ