ಬ್ರಹ್ಮಗಿರಿ ಬೆಟ್ಟ ಕುಸಿತ: ತಲಕಾವೇರಿ ದೇಗುಲದ ಅರ್ಚಕರು, ಕುಟುಂಬಸ್ಥರು ನಾಪತ್ತೆ

[lazy-load-videos-and-sticky-control id=”OxE8wKoLM7o”] ತಲಕಾವೇರಿ ದೇಗುಲದ ಬಳಿ ಬ್ರಹ್ಮಗಿರಿ ಬೆಟ್ಟ ಕುಸಿತ ಸಂಭವಿಸಿದೆ. ಗುಡ್ಡ ಕುಸಿತದಿಂದ ದೇಗುಲದ ಅರ್ಚಕರ ಎರಡು ಮನೆಗಳು ಸಂಪೂರ್ಣ ಧ್ವಂಸವಾಗಿದೆ ಎಂದು ತಿಳಿದುಬಂದಿದೆ. ಮನೆಗಳ ಮೇಲೆ ಗುಡ್ಡ ಕುಸಿದ ಪರಿಣಾಮ 6 ಜನರು ಸಿಲುಕಿರೋ ಸಾಧ್ಯತೆಯಿದೆ ಎಂದು ಹೇಳಲಾಗಿದೆ. ದೇವಸ್ಥಾನದ ಹಿರಿಯ ಅರ್ಚಕರು, ಅವರ ಪತ್ನಿ, ಅಡುಗೆ ಕೆಲಸದವರು, ಒಬ್ಬರು ಅಥವಾ ಇಬ್ಬರು ಪುರೋಹಿತರು ಘಟನೆಯ ವೇಳೆ ಮನೆಯಲ್ಲಿ ಇದ್ದರು ಎಂದು ಸ್ಥಳೀಯರಾದ ಸತೀಶ್ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಎನ್​ಡಿಆರ್​ಎಫ್ ತಂಡದಿಂದ ಆಗಮಿಸಿದ್ದು ನಾಪತ್ತೆಯಾದವ್ರಿಗಾಗಿ […]

ಬ್ರಹ್ಮಗಿರಿ ಬೆಟ್ಟ ಕುಸಿತ: ತಲಕಾವೇರಿ ದೇಗುಲದ ಅರ್ಚಕರು, ಕುಟುಂಬಸ್ಥರು ನಾಪತ್ತೆ
Edited By:

Updated on: Aug 06, 2020 | 6:28 PM

[lazy-load-videos-and-sticky-control id=”OxE8wKoLM7o”]

ತಲಕಾವೇರಿ ದೇಗುಲದ ಬಳಿ ಬ್ರಹ್ಮಗಿರಿ ಬೆಟ್ಟ ಕುಸಿತ ಸಂಭವಿಸಿದೆ. ಗುಡ್ಡ ಕುಸಿತದಿಂದ ದೇಗುಲದ ಅರ್ಚಕರ ಎರಡು ಮನೆಗಳು ಸಂಪೂರ್ಣ ಧ್ವಂಸವಾಗಿದೆ ಎಂದು ತಿಳಿದುಬಂದಿದೆ. ಮನೆಗಳ ಮೇಲೆ ಗುಡ್ಡ ಕುಸಿದ ಪರಿಣಾಮ 6 ಜನರು ಸಿಲುಕಿರೋ ಸಾಧ್ಯತೆಯಿದೆ ಎಂದು ಹೇಳಲಾಗಿದೆ.

ದೇವಸ್ಥಾನದ ಹಿರಿಯ ಅರ್ಚಕರು, ಅವರ ಪತ್ನಿ, ಅಡುಗೆ ಕೆಲಸದವರು, ಒಬ್ಬರು ಅಥವಾ ಇಬ್ಬರು ಪುರೋಹಿತರು ಘಟನೆಯ ವೇಳೆ ಮನೆಯಲ್ಲಿ ಇದ್ದರು ಎಂದು ಸ್ಥಳೀಯರಾದ ಸತೀಶ್ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಎನ್​ಡಿಆರ್​ಎಫ್ ತಂಡದಿಂದ ಆಗಮಿಸಿದ್ದು ನಾಪತ್ತೆಯಾದವ್ರಿಗಾಗಿ ಶೋಧಕಾರ್ಯ ನಡೆಯುತ್ತಿದೆ.


Published On - 10:39 am, Thu, 6 August 20