ಬ್ರಹ್ಮಗಿರಿ ಬೆಟ್ಟ ಕುಸಿತ: ಭಾವನಾತ್ಮಕ ಸಂಬಂಧಕ್ಕೆ ಕಟ್ಟುಬಿದ್ದು ಅನಾಹುತಕ್ಕೀಡಾದ ಅರ್ಚಕರು

[lazy-load-videos-and-sticky-control id=”eBVVA2nQAHs”] ಕೊಡಗು ಜಿಲ್ಲೆಯ ತಲಕಾವೇರಿ ಬಳಿ ಬ್ರಹ್ಮಗಿರಿ ಬೆಟ್ಟ ಕುಸಿತದ ಮಣ್ಣಿನಡಿ ಇಬ್ಬರು ಅರ್ಚಕರು ಸೇರಿ 6 ಜನ ಸಿಲುಕಿದ್ದಾರೆ ಎಂದು ತಿಳಿದುಬಂದಿದೆ. ದೇಗುಲದ ಪ್ರಧಾನ ಅರ್ಚಕರು, ಅವರ ಪತ್ನಿ, ಅರ್ಚಕರ ಸಹೋದರ ಹಾಗೂ ಮತ್ತಿಬ್ಬರು ಅರ್ಚಕರು ಸೇರಿ 6 ಜನರು ನಾಪತ್ತೆಯಾಗಿದ್ದಾರೆ ಎಂದು ತಲಕಾವೇರಿ ದೇವಾಲಯದ ಅಧ್ಯಕ್ಷ ಬಿ.ಎಸ್. ತಮ್ಮಯ್ಯ ಮಾಹಿತಿ ನೀಡಿದ್ದಾರೆ. ಬೆಟ್ಟ ಕುಸಿತ ಪ್ರದೇಶದಲ್ಲಿ ಆರಂಭವಾಗದ ಕಾರ್ಯಾಚರಣೆ ಎನ್​ಡಿಆರ್​ಎಫ್ ಕಾರ್ಯಾಚರಣೆಗೆ ದುರ್ಗಮ ಹಾದಿ ಅಡ್ಡಿಯಾಗಿದೆ. ಹೀಗಾಗಿ, ತಂಡಕ್ಕೆ ಘಟನಾ ಸ್ಥಳಕ್ಕೆ ತೆರಳಲು […]

ಬ್ರಹ್ಮಗಿರಿ ಬೆಟ್ಟ ಕುಸಿತ:  ಭಾವನಾತ್ಮಕ ಸಂಬಂಧಕ್ಕೆ ಕಟ್ಟುಬಿದ್ದು ಅನಾಹುತಕ್ಕೀಡಾದ ಅರ್ಚಕರು
Edited By:

Updated on: Aug 06, 2020 | 5:25 PM

[lazy-load-videos-and-sticky-control id=”eBVVA2nQAHs”]

ಕೊಡಗು ಜಿಲ್ಲೆಯ ತಲಕಾವೇರಿ ಬಳಿ ಬ್ರಹ್ಮಗಿರಿ ಬೆಟ್ಟ ಕುಸಿತದ ಮಣ್ಣಿನಡಿ ಇಬ್ಬರು ಅರ್ಚಕರು ಸೇರಿ 6 ಜನ ಸಿಲುಕಿದ್ದಾರೆ ಎಂದು ತಿಳಿದುಬಂದಿದೆ. ದೇಗುಲದ ಪ್ರಧಾನ ಅರ್ಚಕರು, ಅವರ ಪತ್ನಿ, ಅರ್ಚಕರ ಸಹೋದರ ಹಾಗೂ ಮತ್ತಿಬ್ಬರು ಅರ್ಚಕರು ಸೇರಿ 6 ಜನರು ನಾಪತ್ತೆಯಾಗಿದ್ದಾರೆ ಎಂದು ತಲಕಾವೇರಿ ದೇವಾಲಯದ ಅಧ್ಯಕ್ಷ ಬಿ.ಎಸ್. ತಮ್ಮಯ್ಯ ಮಾಹಿತಿ ನೀಡಿದ್ದಾರೆ.

ಬೆಟ್ಟ ಕುಸಿತ ಪ್ರದೇಶದಲ್ಲಿ ಆರಂಭವಾಗದ ಕಾರ್ಯಾಚರಣೆ

ಎನ್​ಡಿಆರ್​ಎಫ್ ಕಾರ್ಯಾಚರಣೆಗೆ ದುರ್ಗಮ ಹಾದಿ ಅಡ್ಡಿಯಾಗಿದೆ. ಹೀಗಾಗಿ, ತಂಡಕ್ಕೆ ಘಟನಾ ಸ್ಥಳಕ್ಕೆ ತೆರಳಲು ವಿಳಂಬವಾಗುತ್ತಿದೆ. ಘಟನಾ ಸ್ಥಳಕ್ಕೆ ತೆರಳಬೇಕಾದ್ರೆ 4 ಕಿ.ಮೀ. ನಡೆದುಕೊಂಡು ಹೋಗ್ಬೇಕು. ಹಾಗಾಗಿ, ಘಟನಾ ಸ್ಥಳದತ್ತ NDRF ಸಿಬ್ಬಂದಿ ನಡೆದುಕೊಂಡೇ ಹೋಗ್ತಿದ್ದಾರೆ.

ಭಾವನಾತ್ಮಕ ಸಂಬಂಧಕ್ಕೆ ಕಟ್ಟುಬಿದ್ದು ಹಿಂದುಳಿದ ಅರ್ಚಕರು?
ಈ ಹಿಂದೆಯೇ ಘಟನಾ ಸ್ಥಳವು ಡೇಂಜರ್‌ ಪ್ರದೇಶವೆಂದು ಜಿಲ್ಲಾಡಳಿತ ಅರ್ಚಕರಿಗೆ ತಿಳಿಸಿತ್ತು ಎಂದು ಬೆಳಕಿಗೆ ಬಂದಿದೆ. ಜೊತೆಗೆ, ಮನೆ ಖಾಲಿಮಾಡಿ ಸುರಕ್ಷಿತ ಸ್ಥಳಕ್ಕೆ ತೆರಳಲೂ ಸೂಚಿಸಿತ್ತು. ಆದ್ರೆ ಜಿಲ್ಲಾಡಳಿತದ ಮುನ್ಸೂಚನೆ ಬಗ್ಗೆ ಅರ್ಚಕರು ಹೆಚ್ಚು ಗಮನ ನೀಡಲಿಲ್ಲವಂತೆ.

ಕಳೆದ ಎರಡು ದಿನಗಳಿಂದ ಅರ್ಚಕರು ಬೆಂಗಳೂರಿಗೆ ತೆರಳಿ ವಾಪಸ್ ಆಗಿದ್ರು. ಇದಾದ ಬಳಿಕ ಕಂದಾಯ ಇಲಾಖೆ ಮತ್ತು ಜಿಲ್ಲಾಡಳಿತವು ಮನೆ ಖಾಲಿ ಮಾಡುವಂತೆ ಮನವಿ ಮಾಡಿದ್ರು. ಹೀಗಿದ್ದರೂ ಭಾವನಾತ್ಮಕ ಸಂಬಂಧದಿಂದ ಅರ್ಚಕರು ತಲಕಾವೇರಿಯಲ್ಲಿ ಉಳಿಯಲು ಬಯಸಿದ್ದರು ಎಂದು ತಿಳಿದುಬಂದಿದೆ. ಅರ್ಚಕರಿಗೆ ಮೂವರು ಮಕ್ಕಳಿದ್ದಾರೆ ಎಂಬ ಮಾಹಿತಿ ದೊರೆತಿದೆ. ಒಬ್ಬ ಗಂಡು ಮಗ ತೀರಿಹೋಗಿದ್ದು ,ಇಬ್ಬರು ಹೆಣ್ಣು ಮಕ್ಕಳು ವಿದೇಶದಲ್ಲಿ ವಾಸವಾಗಿದ್ದಾರೆ.

Published On - 11:30 am, Thu, 6 August 20