Shivaji Jayanti; ಛತ್ರಪತಿ ಶಿವಾಜಿ ಹುಟ್ಟಿರದಿದ್ದರೆ ವಿಜಯಪುರ ಮತ್ತು ಸುತ್ತಮುತ್ತಲಿನ ಭಾಗಗಳಲ್ಲಿ ಹಿಂದೂಗಳು ಉಳಿಯುತ್ತಿರಲಿಲ್ಲ: ಬಸನಗೌಡ ಯತ್ನಾಳ್
ಛತ್ರಪತಿ ಶಿವಾಜಿ ಮಹಾರಾಜ್ ಅವರಿಂದಾಗಿ ಇಂದು ವಿಜಯಪುರ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಹಿಂದೂಗಳು ಉಳಿದುಕೊಂಡಿದ್ದಾರೆ ಎಂದು ಯತ್ಮಾಳ್ ಹೇಳಿದರು.
ವಿಜಯಪುರ: ಜನತಾ ಸೇವಾ ಸಂಸ್ಥೆಯಿಂದ ನಗರದಲ್ಲಿಂದು ಶಿವಾಜಿ ಜಯಂತಿ (Shivaji Jayanti) ಮೆರವಣಿಗೆ ಹಾಗೂ ಕಾರ್ಯಕ್ರಮದಲ್ಲಿ ಸ್ಥಳೀಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಮಾತಾಡಿ, ಛತ್ರಪತಿ ಶಿವಾಜಿ ಮಹಾರಾಜ್ ಅವರಿಂದಾಗಿ ಇಂದು ವಿಜಯಪುರ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಹಿಂದೂಗಳು ಉಳಿದುಕೊಂಡಿದ್ದಾರೆ ಎಂದು ಹೇಳಿದರು. 16ನೇ ವಯಸ್ಸಿಗೆ ಶಿವಾಜಿ ಅವರು ಕೈಯಲ್ಲಿ ಖಡ್ಗ ಹಿಡಿದರು ಮತ್ತು ಅಗಿನ ಬಿಜಾಪುರ ಸಂಸ್ಥಾನವನ್ನು ಆಳುತ್ತಿದ್ದ ಆದಿಲ್ ಶಾಹಿಗೆ ಕಪ್ಪ ನೀಡುವುದಿಲ್ಲ ಎಂದು ಸವಾಲೆಸೆದಿದ್ದರು ಎಂದು ಹೇಳಿದ ಯತ್ನಾಳ್ ಅವರು ಮಹಾರಾಣಾ ಪ್ರತಾಪ್ (Maharana Pratap) ಅವರನ್ನು ಉಲ್ಲೇಖಿಸಿ ಮರಾಠ ಮತ್ತು ಕ್ಷತ್ರಿಯರ ನಡುವೆ ಹೆಚ್ಚು ವ್ಯತ್ಯಾಸವಿಲ್ಲ ಎಂದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ