ಬುರೆವಿ ಚಂಡಮಾರುತದ ಎಫೆಕ್ಟ್‌ಗೆ ನವ ವಧುವಿನಂತೆ ಕಂಗೊಳಿಸುತ್ತಿದೆ ನಂದಿಗಿರಿಧಾಮ!
ರಾಜಧಾನಿ ಬೆಂಗಳೂರಿನಿಂದ ಕೂಗಳತೆ ದೂರದಲ್ಲಿರುವ ನಂದಿಹಿಲ್ಸ್ ಹೇಳಿ ಕೇಳಿ ಪ್ರಕೃತಿ ಸೌಂದರ್ಯದ ಖಣಿ. ಅದ್ರಲ್ಲೂ ಪ್ರೇಮಿಗಳ ಅಚ್ಚು ಮೆಚ್ಚಿನ ತಾಣವಾಗಿರುವ ಈ ಪ್ರವಾಸಿತಾಣ ಈಗ ಬುರೆವಿ ಚಂಡಮಾರುತದ ಪರಿಣಾಮದಿಂದಾಗಿ ಮತ್ತಷ್ಟು ರಂಗೇರಿದೆ. ಪ್ರಕೃತಿ ಸೌಂದರ್ಯದ ಅದ್ಬುತವನ್ನೆ ಸೃಷ್ಟಿಸಿದೆ. ಇದನ್ನ ನೋಡಲು ಎರಡೂ ಕಣ್ಣುಗಳು ಸಾಲದು. ಹೀಗಾಗಿ ಈಗ ನಂದಿ ಹಿಲ್ಸ್ ನೋಡಲು ಸಾವಿರಾರು ಜನರು ಬರುತ್ತಿದ್ದಾರೆ. ಬಂದವರು ಇಲ್ಲಿನ ಈ ಪ್ರಕೃತಿ ಸೌಂದರ್ಯ ನೋಡಿ ರೊಮಾಂಚನಗೊಳ್ಳುತ್ತಿದ್ದಾರೆ.
Published on: Dec 07, 2020 11:27 AM