ಮಂಗಳವಾರದ ಬೆಂಗಳೂರು ಬಂದ್​ಗೆ ಪ್ರಾಯಶಃ ಹೋಟೆಲ್ ಮಾಲೀಕರ ಬೆಂಬಲವಿಲ್ಲ, ಎರಡು ಬಂದ್​ಗಳ ಹಿನ್ನೆಲೆ ಗೊಂದಲ!

ಮಂಗಳವಾರದ ಬೆಂಗಳೂರು ಬಂದ್​ಗೆ ಪ್ರಾಯಶಃ ಹೋಟೆಲ್ ಮಾಲೀಕರ ಬೆಂಬಲವಿಲ್ಲ, ಎರಡು ಬಂದ್​ಗಳ ಹಿನ್ನೆಲೆ ಗೊಂದಲ!

ಅರುಣ್​ ಕುಮಾರ್​ ಬೆಳ್ಳಿ
|

Updated on: Sep 25, 2023 | 7:33 PM

ಸೆಪ್ಟೆಂಬರ್ 29 ರಂದು ಕರ್ನಾಟಕ ಬಂದ್ ಗೆ ಕರೆ ನೀಡಿರುವಿದರಿಂದ ಮತ್ತು ಅದರಲ್ಲಿ ಹೆಚ್ಚಿನ ಸಂಖ್ಯೆಯ ಸಂಘಟನೆಗಳು ಭಾಗಿಯಾಗಲಿರುವುದರಿಂದ ಕರ್ನಾಟಕ ಬಂದ್ ಗೆ ಬೆಂಬಲ ನೀಡುವುದು ಹೆಚ್ಚು ಸೂಕ್ತ ಅಂತ ಶೆಟ್ಟಿ ಹೇಳುತ್ತಾರೆ. ನಿರ್ದಿಷ್ಟವಾಗಿ ನಾಳಿನ ಬಂದ್ ಬಗ್ಗೆ ಹೋಟೆಲ್ ಮಾಲೀಕರ ನಿಲುವು ಏನು ಅಂತ ಕೇಳಿದರೆ ಈ ಪ್ರಶ್ನೆಗೆ ಬೆಂಗಳೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷರೇ ಸರಿಯಾದ ಉತ್ತರ ನೀಡಬಲ್ಲರು ಎನ್ನುತ್ತಾರೆ.

ಬೆಂಗಳೂರು: ಕಾವೇರಿ ನದಿ ನೀರು ವಿವಾದದ (Cauvery water dispute) ಹಿನ್ನೆಲೆಯಲ್ಲಿ ನಾಳೆ ಬೆಂಗಳೂರು ಬಂದ್ (Bengaluru Bandh) ಕರೆ ನೀಡಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿಯೇ. ಆದರೆ, ನಾಳೆ ನಗರದಲ್ಲಿರುವ ಹೋಟೆಲ್ ಗಳು ಎಂದಿನಂತೆ ಕಾರ್ಯ ನಿರ್ವಹಿಸುವ ಲಕ್ಷಣಗಳು ಕಾಣಿಸುತ್ತಿವೆ. ಕರ್ನಾಟಕ ಹೋಟೆಲ್ ಮಾಲೀಕರ ಸಂಘದ ಪ್ರಧಾನ ಕಾರ್ಯದರ್ಶಿಗಳಾಗಿರುವ ಗೋಪಾಲ ಶೆಟ್ಟಿ (Gopal Shetty) ಟಿವಿ9 ಕನ್ನಡ ವಾಹಿನಿಯ ಬೆಂಗಳೂರು ವರದಿಗಾರನೊಂದಿಗೆ ಮಾತಾಡಿದ್ದು, ಸೆಪ್ಟೆಂಬರ್ 29 ರಂದು ಕರ್ನಾಟಕ ಬಂದ್ ಗೆ (Karnataka Bandh) ಕರೆ ನೀಡಿರುವಿದರಿಂದ ಮತ್ತು ಅದರಲ್ಲಿ ಹೆಚ್ಚಿನ ಸಂಖ್ಯೆಯ ಸಂಘಟನೆಗಳು ಭಾಗಿಯಾಗಲಿರುವುದರಿಂದ ಕರ್ನಾಟಕ ಬಂದ್ ಗೆ ಬೆಂಬಲ ನೀಡುವುದು ಹೆಚ್ಚು ಸೂಕ್ತ ಅಂತ ಅವರು ಹೇಳುತ್ತಾರೆ. ನಿರ್ದಿಷ್ಟವಾಗಿ ನಾಳಿನ ಬಂದ್ ಬಗ್ಗೆ ಹೋಟೆಲ್ ಮಾಲೀಕರ ನಿಲುವು ಏನು ಅಂತ ಕೇಳಿದರೆ ಈ ಪ್ರಶ್ನೆಗೆ ಬೆಂಗಳೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷರೇ ಸರಿಯಾದ ಉತ್ತರ ನೀಡಬಲ್ಲರು ಎಂದು ಗೋಪಾಲ ಶೆಟ್ಟಿ ಹೇಳುತ್ತಾರೆ. ಕರ್ನಾಟಕ ರಕ್ಷಣಾ ದಳದ (ಪ್ರವೀಣ್ ಶೆಟ್ಟಿ ಬಣ) ಅಧ್ಯಕ್ಷ ಪ್ರವೀಣ್ ಶೆಟ್ಟಿಯವರನ್ನು ವಿಡಿಯೋದಲ್ಲಿ ನೋಡಬಹುದು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ