ದರ್ಶನ್ ನಟನೆಯ ‘ಕಾಟೇರ’ ಶೀರ್ಷಿಕೆಯ ಅರ್ಥ ವಿವರಿಸಿದ ನಿರ್ದೇಶಕ ತರುಣ್ ಸುಧೀರ್

Updated on: Sep 12, 2023 | 11:14 AM

ದರ್ಶನ್ ನಟನೆಯ ‘ಕಾಟೇರ’ ಸಿನಿಮಾ ಸೆಟ್ಟೇರಿದ ದಿನದಿಂದಲೂ ಗಮನ ಸೆಳೆಯುತ್ತಲೇ ಇದೆ. ಈ ಚಿತ್ರದಲ್ಲಿ ದರ್ಶನ್​ಗೆ ಜೊತೆಯಾಗಿ ಆರಾಧನಾ ನಟಿಸುತ್ತಿದ್ದಾರೆ. ಈ ಚಿತ್ರದ ಬಹುತೇಕ ಶೂಟಿಂಗ್ ಪೂರ್ಣಗೊಂಡಿದ್ದು, ಮೂರು ಸಾಂಗ್ ಶೂಟ್ ಬಾಕಿ ಇದೆ. ಈ ಚಿತ್ರದ ಬಗ್ಗೆ ತರುಣ್ ಸುಧೀರ್ ಮಾತನಾಡಿದ್ದಾರೆ.

ದರ್ಶನ್ ನಟನೆಯ ‘ಕಾಟೇರ’ ಸಿನಿಮಾ (Kaatera Movie) ಸೆಟ್ಟೇರಿದ ದಿನದಿಂದಲೂ ಗಮನ ಸೆಳೆಯುತ್ತಲೇ ಇದೆ. ಈ ಚಿತ್ರದಲ್ಲಿ ದರ್ಶನ್​ಗೆ ಜೊತೆಯಾಗಿ ಆರಾಧನಾ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ತರುಣ್ ಸುಧೀರ್ ನಿರ್ದೇಶನ ಇದೆ. ಈ ಚಿತ್ರದ ಬಹುತೇಕ ಶೂಟಿಂಗ್ ಪೂರ್ಣಗೊಂಡಿದ್ದು, ಮೂರು ಸಾಂಗ್ ಶೂಟ್ ಬಾಕಿ ಇದೆ. ಈ ಚಿತ್ರದ ಬಗ್ಗೆ ತರುಣ್ ಸುಧೀರ್ ಮಾತನಾಡಿದ್ದಾರೆ. ‘ಸಿನಿಮಾದಲ್ಲಿ ಕಾಟೇರ ಅನ್ನೋದು ನಾಯಕನ ಹೆಸರು. ಕಾಟೇರ ಅನ್ನೋದಕ್ಕೆ ಹಲವು ಅರ್ಥ ಇದೆ. ಕಾಟೇರಮ್ಮ ಅನ್ನೋದು ಪವರ್​ಫುಲ್ ದೇವತೆ. ಆ ತಾಯಿಯ ಕಾವಲುಗಾರನ ಕಾಟೇರಾ ಅನ್ನುತ್ತಾರೆ. ಇದರ ಜೊತೆ ಹಲವು ಆಯಾಮ ಇದೆ. ಹೀರೋನ ಹಿನ್ನೆಲೆ ಮತ್ತಿತ್ಯಾದಿ ವಿಚಾರಗಳನ್ನು ಇಟ್ಟುಕೊಂಡು ಈ ಶೀರ್ಷಿಕೆ ನೀಡಿದ್ದೇವೆ’ ಎಂದಿದ್ದಾರೆ ತರುಣ್.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Loading...
Unable to load recommendations.
Follow Us
ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More