Assembly Polls: ಕಾಂಗ್ರೆಸ್ ಬಸ್ ಕನ್ಯಾಕುಮಾರಿಯಿಂದ ಹೊರಟು ಕಾಶ್ಮೀರದಲ್ಲಿ ನಿಂತುಹೋಗಿದೆ: ಹೆಚ್ ಡಿ ರೇವಣ್ಣ

|

Updated on: Feb 02, 2023 | 1:43 PM

ಕಾಂಗ್ರೆಸ್ ಎಂಥ ಪಕ್ಷ ಅಂತ ಜನರಿಗೆ ಗೊತ್ತಾಗಿದೆ, ಪಕ್ಷದ ಬಸ್ ಕನ್ಯಾಕುಮಾರಿಯಿಂದ ಹೊರಟು ಕಾಶ್ಮೀರದಲ್ಲಿ ನಿಂತುಹೋಗಿದೆ ಎಂದು ರೇವಣ್ಣ ಹೇಳಿದರು.

ಹಾಸನ: ಜೆಡಿಎಸ್ ಮುಖಂಡ ಹೆಚ್ ಡಿ ರೇವಣ್ಣ (HD Revanna) ಇಂದು ಹಾಸನದಲ್ಲಿ ಕಾಂಗ್ರೆಸ್ ಪಕ್ಷವನ್ನು ನಿರ್ನಾಮಗೊಂಡಿರುವ ಪಕ್ಷ ಅಂತ ಲೇವಡಿ ಮಾಡಿದರು. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತಾಡಿದ ರೇವಣ್ಣನವರು, ಕಾಂಗ್ರೆಸ್ ನಾಯಕರು ಜೆಡಿಎಸ್ ಪಕ್ಷವನ್ನು ಎ ಟೀಮ್ ಬಿ ಟೀಮ್ ಅಂತ ಕರೆಯುತ್ತಾರೆ. ಆದರೆ ಕಳೆದ ಲೋಕಸಭೆ ಚುನಾವಣೆಯಲ್ಲಿ ತುಮಕೂರು ಕ್ಷೇತ್ರದಿಂದ ಹೆಚ್ ಡಿ ದೇವೇಗೌಡರು (HD Devegowda) ಸೋಲೋದಕ್ಕೆ ಕಾಂಗ್ರೆಸ್ ಕಾರಣ. ಹಾಸನದಲ್ಲಿ ಮುಸ್ಲಿಂ ಮತದಾರರು ವೋಟ್ ನೀಡದೆ ಹೋಗಿದ್ದಕ್ಕೆ ಬಿಜೆಪಿ ಅಭ್ಯರ್ಥಿ ವಿಧಾನ ಸಭೆಗೆ ಆಯ್ಕೆಯಾದರು. ಕಾಂಗ್ರೆಸ್ ಎಂಥ ಪಕ್ಷ ಅಂತ ಜನರಿಗೆ ಗೊತ್ತಾಗಿದೆ, ಪಕ್ಷದ ಬಸ್ ಕನ್ಯಾಕುಮಾರಿಯಿಂದ ಹೊರಟು ಕಾಶ್ಮೀರದಲ್ಲಿ ನಿಂತುಹೋಗಿದೆ ಎಂದು ರೇವಣ್ಣ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ