ಪಾಲಿಕೆಯವರು ಕೆಡವಿರುವ ಮನೆಯನ್ನು ಪುನಃ ಹೇಗೆ ಕಟ್ಟಿಕೊಳ್ಳೋದು ಅಂತ ಆತ್ಮಹತ್ಯೆಗೆ ಪ್ರಯತ್ನಿಸಿದ ದಂಪತಿ ಕಣ್ಣೀರಿಟ್ಟರು!
ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿದ್ದ ಸುನಿಲ್ ಸಿಂಗ್ ಮತ್ತು ಅವರ ಪತ್ನಿ ಇಂದು ಮಾಧ್ಯಮದವರ ಮುಂದೆ ತಮ್ಮ ನೋವು, ಹತಾಷೆಯನ್ನು ತೋಡಿಕೊಂಡರು.
ಬೆಂಗಳೂರು: ಬಿ ಬಿ ಎಮ್ ಪಿ ವ್ಯಾಪ್ತಿಯ ಮಹಾದೇವಪುರ ವಿಭಾಗದಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ಮುಂದುವರಿದಿದೆ. ಬುಧವಾರ ಒತ್ತುವರಿ ಮಾಡಿಕೊಂಡ ಜಾಗದಲ್ಲಿ ಕಟ್ಟಿದ ಭಾಗವನ್ನು ಬಿಬಿಎಮ್ ಪಿ (BBMP) ಸಿಬ್ಬಂದಿ ಕೆಡವಲು ಬಂದಾಗ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ (immolate) ಪ್ರಯತ್ನಿಸಿದ್ದ ಸುನಿಲ್ ಸಿಂಗ್ (Sunil Singh) ಮತ್ತು ಅವರ ಪತ್ನಿ ಇಂದು ಮಾಧ್ಯಮದವರ ಮುಂದೆ ತಮ್ಮ ನೋವು, ಹತಾಷೆಯನ್ನು ತೋಡಿಕೊಂಡರು. ಅವರ ಮನೆಯ ಒಂದು ಭಾಗ ಕೆಡವಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಕೆಡವಿರುವ ಭಾಗವನ್ನು ಹೇಗೆ ಪುನಃ ಕಟ್ಟಿಕೊಳ್ಳಲಿ ಅಂತ ಸುನೀಲ್ ಸಿಂಗ್ ಕಣ್ಣೀರು ಸುರಿಸುತ್ತಿದ್ದಾರೆ.