ಉಪಹಾರ ಸೇವಿಸಿದ ದಲಿತ ಕುಟುಂಬದ ಮನೆಯ ರಿಪೇರಿಗೆ ಹಣ ಮಂಜೂರು ಮಡುವಂತೆ ಬಿಎಸ್ ವೈ ಹೇಳಿದಾಗ ಸಿಎಮ್ ಬೊಮ್ಮಾಯಿ ಸರಿ ಅಂದರು!
ಈ ಸಂದರ್ಭದಲ್ಲಿ ತಮ್ಮ ಅತಿಥೇಯರ ಮನೆ ದುರವಸ್ಥೆ ಕಂಡ ಯಡಿಯೂರಪ್ಪನವರು, ಮನೆಯ ನವೀಕರಣಕ್ಕೆ ಪರಿಹಾರ ಬಿಡುಗಡೆ ಮಾಡಿಸಿಕೊಡಿ ಅಂತ ಹೇಳಿದಾಗ ಮುಖ್ಯಮಂತ್ರಿಗಳು ಸರಿ ಅಂತ ತಲೆದೂಗಿದರು.
ಬಳ್ಳಾರಿ: ಬುಧವಾರ ವಿಜಯಪುರದ ದಲಿತ ಕುಟುಂಬದ ಮನೆಯೊಂದರಲ್ಲಿ ವಗ್ರಾಣಿ ಮತ್ತು ಮೆಣಸಿನಕಾಯಿ ಭಜ್ಜಿ ಉಪಹಾರ ಸೇವಿಸಿದ್ದ ಜನಸಂಕಲ್ಪ ಯಾತ್ರೆ ಕೈಗೊಂಡಿರುವ ಬಿಜೆಪಿ ನಾಯಕರಾದ ಬಿ ಎಸ್ ಯಡಿಯೂರಪ್ಪ (BS Yediyurappa), ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರು ಇಂದು ಬಳ್ಳಾರಿ ಜಿಲ್ಲೆಯ ಹಿರೇಹಡಗಲಿಯಲ್ಲಿ ದಲಿತ ಸಮುದಾಯಕ್ಕೆ (Dalit community) ಸೇರಿದ ಹನುಮಂತವ್ವನ ಮನೆಯಲ್ಲಿ ಉಪ್ಪಿಟ್ಟು ಸೇವಿಸಿದರು. ಈ ಸಂದರ್ಭದಲ್ಲಿ ತಮ್ಮ ಅತಿಥೇಯರ ಮನೆ ದುರವಸ್ಥೆ ಕಂಡ ಯಡಿಯೂರಪ್ಪನವರು, ಮನೆಯ ನವೀಕರಣಕ್ಕೆ ಪರಿಹಾರ ಬಿಡುಗಡೆ ಮಾಡಿಸಿಕೊಡಿ ಅಂತ ಹೇಳಿದಾಗ ಮುಖ್ಯಮಂತ್ರಿಗಳು ಸರಿ ಅಂತ ತಲೆದೂಗಿದರು.
Latest Videos