AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೇವರಿಗೆ ಕಣ್ಣಿಲ್ಲ ಎಂದು ದೂರುವ ಮುನ್ನ ಈ ಸ್ಟೋರಿ ನೋಡಿ ! ಭಗವಂತನ ಅನುಗ್ರಹ ಪಡೆಯಲು ಬೇಕಿಲ್ಲ ವಿಶೇಷ ಯೋಗ್ಯತೆ

ದೇವರಿಗೆ ಕಣ್ಣಿಲ್ಲ ಎಂದು ದೂರುವ ಮುನ್ನ ಈ ಸ್ಟೋರಿ ನೋಡಿ ! ಭಗವಂತನ ಅನುಗ್ರಹ ಪಡೆಯಲು ಬೇಕಿಲ್ಲ ವಿಶೇಷ ಯೋಗ್ಯತೆ

ಅಕ್ಷಯ್​ ಪಲ್ಲಮಜಲು​​
|

Updated on: Apr 23, 2026 | 7:28 AM

Share

"ದೇವರಿಗೆ ಕಣ್ಣಿಲ್ಲವಾ" ಎಂಬ ಲೋಕರೂಢಿ ಮಾತು ಅತೀವ ನೋವು, ಅಸಹಾಯಕತೆ ಮತ್ತು ಅನ್ಯಾಯಕ್ಕೆ ಒಳಗಾದಾಗ ಮನದಾಳದಿಂದ ಬರುತ್ತದೆ. ಇದು ಕೇವಲ ಒಂದು ಮಾತಿಗಿಂತ ಹೆಚ್ಚಾಗಿ, ಭಾವನೆಯ ತೀವ್ರತೆಯಿಂದ ಕೂಡಿದ ಪ್ರಬಲ ಪ್ರಾರ್ಥನೆಯಾಗಿದ್ದು, ತಕ್ಷಣವೇ ಭಗವಂತನ ಅನುಗ್ರಹವನ್ನು ತರುತ್ತದೆ. ದ್ರೌಪದಿಯ ಉದಾಹರಣೆ ಈ ಸತ್ಯಕ್ಕೆ ಸಾಕ್ಷಿ.

ಬೆಂಗಳೂರು. ಏ.23: ನಮ್ಮ ದೈನಂದಿನ ಜೀವನದಲ್ಲಿ ಕೇಳುವ ನುಡಿಗಳ ಹಿಂದಿರುವ ಆಳವಾದ ತತ್ವಗಳನ್ನು ಅನಾವರಣಗೊಳಿಸುತ್ತದೆ. “ದೇವರಿಗೆ ಕಣ್ಣಿಲ್ಲವಾ” ಎಂಬ ಲೋಕರೂಢಿ ಮಾತು ಇಂತಹ ಒಂದು ವಿಶೇಷ ಮಹತ್ವವನ್ನು ಹೊಂದಿದೆ. ಈ ಮಾತನ್ನು ನಾವು ಯಾವಾಗಲು ನೋವು, ಅಸಹಾಯಕತೆ, ಅಥವಾ ಅನ್ಯಾಯಕ್ಕೆ ಒಳಗಾದಾಗ, ಮನದಾಳದಿಂದ ಹೊರಡುವ ಭಾವನಾತ್ಮಕ ಅಭಿವ್ಯಕ್ತಿಯಾಗಿ ಬಳಸುತ್ತೇವೆ. ಇದು ಕೇವಲ ಒಂದು ವಾಕ್ಯವಲ್ಲ, ಬದಲಿಗೆ ಯಾವ ಜಪ, ತಪ, ಪೂಜೆ ಇಲ್ಲದೆ, ಹೃದಯದಿಂದ ಹೊರಹೊಮ್ಮುವ ತೀವ್ರವಾದ ಭಾವನೆಯನ್ನು ಪ್ರತಿನಿಧಿಸುತ್ತದೆ. ಸಂಕಷ್ಟದ ಸಮಯದಲ್ಲಿ, ನಾವು ಎಲ್ಲ ರೀತಿಯಿಂದಲೂ ಕುಗ್ಗಿ ಹೋದಾಗ, ನ್ಯಾಯಯುತವಾಗಿ ನಡೆದುಕೊಂಡಿದ್ದರೂ ಕಷ್ಟಗಳು ಬಂದಾಗ ಈ ಮಾತು ಬರುತ್ತದೆ. ಈ ವಾಕ್ಯಶಕ್ತಿಗೆ ಯಾವುದೇ ವಿಶೇಷ ಯೋಗ್ಯತೆ, ಮಹನೀಯತೆ ಅಥವಾ ತಪಸ್ವಿಯ ಸ್ಥಾನ ಅಗತ್ಯವಿಲ್ಲ. ಸಾಮಾನ್ಯ ಮನುಷ್ಯರ ನೈಜ ಅಳಲು ಇದು. ಈ ಮಾತನ್ನು ಉಚ್ಚರಿಸಿದಾಗ ಭಗವಂತನ ಅನುಗ್ರಹವು ತಕ್ಷಣವೇ ಲಭಿಸುತ್ತದೆ ಎಂದು ಶಾಸ್ತ್ರಗಳು ಹೇಳುತ್ತವೆ ಎಂದು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ಅವರು ಹೇಳಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಅಕ್ಷಯ್​ ಪಲ್ಲಮಜಲು​​
ಅಕ್ಷಯ್​ ಪಲ್ಲಮಜಲು​​

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More