ಮಂಗಳವಾರ ಸಕಲೇಶಪುರ ಕಾಡಂಚಿನಲ್ಲಿ ಕಂಡ ಒಂಟಿ ಸಲಗವೇ ಬುಧವಾರ ಊರು ಪ್ರವೇಶಿಸಿತೇ?

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Mar 23, 2022 | 7:37 PM

ಗ್ರಾಮದ ಜನವಸತಿ ಪ್ರದೇಶಕ್ಕೆ ನುಗ್ಗಿ ಒಂದೆಡೆ ಸ್ವಲ್ಪ ಹೊತ್ತು ನಿಂತು ಸುತ್ತಲೂ ವೀಕ್ಷಿಸಿ ಓ ಇದು ನಾವು ವಾಸಮಾಡುವ ಜಾಗವಲ್ಲ ಅಂದುಕೊಂಡು ಪುನಃ ಕಾಡಿನೊಳಗೆ ಹೋಗಿದೆ. ಅದು ಊರಲ್ಲಿ ಕಂಡ ಕೂಡಲೇ ಜನ ಹೆದರಿ ತಮ್ಮ ಮನೆಗಳ ಮಹಡಿಗಳನ್ನು ಹತ್ತಿಬಿಟ್ಟಿದ್ದಾರೆ.

ಮಂಗಳವಾರ ನಾವು ನಿಮಗೆ ಸಕಲೇಶಪುರ (Sakleshpur) ಮೂಲಕ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ (NH) ಅಂಟಿಕೊಂಡಂತಿರುವ ಕಾಡಿನಂಚಿಗೆ ಬಂದು ರಸ್ತೆ ಮೇಲೆ ಓಡಾಡುತ್ತಿದ್ದ ವಾಹನಗಳನ್ನು ಗುರಾಯಿಸುತ್ತಿದ್ದ ಒಂದು ಸಲಗದ ವಿಡಿಯೋ ತೋರಿಸಿದ್ದೆವು. ಕಾಡಿನ ಅಂಚು ಮತ್ತು ರಸ್ತೆಯ ನಡುವೆ ತಡೆಗೋಡೆ ಇರದಿದ್ದರೆ ಅದು ರೋಡಿಗೆ ಬಂದುಬಿಡುತ್ತಿತ್ತು ಅಂತ ನಾವು ಚರ್ಚಿಸಿದ್ದೆವು. ಪ್ರಾಯಶ: ಅದೇ ಸಲಗವು ಬುಧವಾರದದಂದು ಅದ್ಹೇಗೋ ರಸ್ತೆಗೂ ಬಂದು ಬಿಟ್ಟದೆ ಮತ್ತು ಸಕಲೇಶಪುರ ತಾಲ್ಲೂಕಿನ ಹಲಸುಲಿಗೆ (Halasulige) ಹೆಸರಿನ ಗ್ರಾಮವನ್ನೂ ಪ್ರವೇಶಿಸಿದೆ. ಮೊಬೈಲ್ ಫುಟೇಜ್ ನಲ್ಲಿ ಕಾಣುತ್ತಿರುವ ಆನೆಯನ್ನು ನೋಡಿ. ಗ್ರಾಮದ ಜನವಸತಿ ಪ್ರದೇಶಕ್ಕೆ ನುಗ್ಗಿ ಒಂದೆಡೆ ಸ್ವಲ್ಪ ಹೊತ್ತು ನಿಂತು ಸುತ್ತಲೂ ವೀಕ್ಷಿಸಿ ಓ ಇದು ನಾವು ವಾಸಮಾಡುವ ಜಾಗವಲ್ಲ ಅಂದುಕೊಂಡು ಪುನಃ ಕಾಡಿನೊಳಗೆ ಹೋಗಿದೆ. ಅದು ಊರಲ್ಲಿ ಕಂಡ ಕೂಡಲೇ ಜನ ಹೆದರಿ ತಮ್ಮ ಮನೆಗಳ ಮಹಡಿಗಳನ್ನು ಹತ್ತಿಬಿಟ್ಟಿದ್ದಾರೆ.

ವಿಡಿಯೋನಲ್ಲಿ ನಿಮಗೊಂದು ಕಚ್ಚಾ ರಸ್ತೆ ಕಾಣುತ್ತಿದೆ ಪ್ರಾಯಶಃ ಅದು ಕಾಡಿನೊಳಗೆ ಹೋಗುತ್ತದೆ. ಈ ರಸ್ತೆಯ ಕೊನೆಭಾಗದಲ್ಲಿ ಆನೆ ಹೋಗುತ್ತಿರುವುದನ್ನು ನೋಡಬಹುದು. ಅದಕ್ಕೆ ಕಾಡಿಗೆ ಮರಳುವ ಧಾವಂತವೇನೂ ಇಲ್ಲ. ನಿಧಾನಕ್ಕೆ, ಅಲ್ಲಲ್ಲಿ ನಿಂತು ಮುಂದಕ್ಕೆ ಹೋಗುತ್ತಿದೆ.

ಅಂದಹಾಗೆ, ಹಲಸುಲಿಗೆ ಸೇರಿದಂತೆ ಸುತ್ತಮುತ್ತಲಿನ ಬೇರೆ ಊರುಗಳ ಜನರು ಕಾಡಾನೆಗಳು ಪದೇಪದೆ ಊರೊಳಗೆ ಬಂದು ಭೀತಿ ಹುಟ್ಟಿಸುತ್ತಿವೆ ಎಂದು ಆಗಾಗ್ಗೆ ಸರ್ಕಾರ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತರುತ್ತಿದ್ದಾರೆ. ಅದರೆ ಸರ್ಕಾರ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ.

ಇದನ್ನೂ ಓದಿ:  ಸಕಲೇಶಪುರ ಕಾಡಂಚಿನಲ್ಲಿ ನಿಂತು ರಸ್ತೆ ಮೇಲೆ ಸಂಚರಿಸುವ ವಾಹನ ಮತ್ತು ಜನರನ್ನು ಗುರಾಯಿಸುತ್ತಿದೆ ಒಂಟಿ ಸಲಗ!