ಉಡುಪಿಯ ಮಾರಿಕಾಂಬಾ ದೇವಸ್ಥಾನ ಕಟ್ಟಿದ್ದು ಒಬ್ಬ ಮುಸ್ಲಿಂ ಸೈನಿಕ: ರಿಜ್ವಾನ್ ಅರ್ಷದ್, ಕಾಂಗ್ರೆಸ್ ಶಾಸಕ

ಉಡುಪಿಯ ಮಾರಿಕಾಂಬಾ ದೇವಸ್ಥಾನ ಕಟ್ಟಿದ್ದು ಒಬ್ಬ ಮುಸ್ಲಿಂ ಸೈನಿಕ: ರಿಜ್ವಾನ್ ಅರ್ಷದ್, ಕಾಂಗ್ರೆಸ್ ಶಾಸಕ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Mar 23, 2022 | 5:27 PM

ಮೂಲ್ಕಿಯಲ್ಲಿರುವ ಬಪ್ಪನಾಡು ದುರ್ಗಾ ಪರಮೇಶ್ವರಿ ದೇವಸ್ಥಾನ ಸಹ ಒಬ್ಬ ಮುಸ್ಲಿಂ ವ್ಯಾಪಾರಿ ಕಟ್ಟಿದ್ದಾನೆ. ಹಿಂದೂ ಸಂಘಟನೆಗಳು ಅಲ್ಲೂ ಮುಸ್ಲಿಂ ಸಮುದಾಯದವರಿಗೆ ತಡೆಯೊಡ್ಡುತ್ತಾರಾ? ಎಂದು ರಿಜ್ವಾನ್ ಹೇಳಿದರು.

ಬೆಂಗಳೂರು: ಜಾತ್ರಾ ಮಹೋತ್ಸವಗಳಲ್ಲಿ ಮುಸ್ಲಿಂ ವ್ಯಾಪಾರಸ್ಥರು (Muslim traders) ಅಂಗಡಿಗಳನ್ನು ಹಾಕಕೂಡದು ಎಂದು ಹಿಂದೂ ಸಂಘಟನೆ (Hindu oragnisations) ಮತ್ತು ಬಜರಂಗದಳದ (Bajrang Dal) ಸದಸ್ಯರು ಹೇಳಿ ಅದನ್ನು ಕೆಲವು ಕಡೆಗಳಲ್ಲಿ ಜಾರಿಗೆ ತಂದಿರುವುದು ಸದನದದಲ್ಲಿ ಬುಧವಾರ ಚರ್ಚೆಯಾಯಿತು. ಇದೇ ವಿಷಯವಾಗಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಕಾಂಗ್ರೆಸ್ ಶಾಸಕ ರಿಜ್ವಾನ್ ಅರ್ಷದ್ ಅವರು ಇದು ತುಂಬಾ ಆಘಾತಕಾರಿ ಬೆಳವಣಿಗೆ, ಹಿಂದೂ ಸಂಘಟನೆಗಳು ಸಮಾಜದಲ್ಲಿರುವ ಸಾಮರಸ್ಯ ಮತ್ತು ಸೌಹಾರ್ದತೆಯನ್ನು ಹಾಳು ಮಾಡುತ್ತಿವೆ. ಮುಸ್ಲಿ ಸಮುದಾಯದವರು ಹಿಂದೂ ದೇವಸ್ಥಾನಗಳ ಜಾತ್ರೆ ನಡೆಯುವಾಗ ವ್ಯಾಪಾರ ಮಾಡದಂತೆ ತಡೆಯುವುದು ಸರಿಯಲ್ಲ ಎಂದು ಹೇಳಿದರು.

ಹಿಂದೂವಾದಿಗಳು ಇತಿಹಾಸವನ್ನು ಓದಿ ಅರ್ಥಮಾಡಿಕೊಳ್ಳುವ ಅವಶ್ಯಕತೆಯಿದೆ. ಉಡುಪಿಯ ಮಾರಿಕಾಂಬ ದೇವಸ್ಥಾನ ಕಟ್ಟಿದ್ದು ಒಬ್ಬ ಮುಸ್ಲಿಂ ಸೈನಿಕ ಅವರಿಗೆ ಗೊತ್ತಿಲ್ಲ. 1740 ರಲ್ಲಿ ಕೆಳದಿ ಬಸ್ಸಪ್ಪ ನಾಯಕನ ಸೇನೆಯಲ್ಲಿ ಸೈನಿಕನಾಗಿದ್ದ ಮುಸ್ಲಿಂ ವ್ಯಕ್ತಿಗೆ ಕನಸಲ್ಲಿ ಮಾರಿಕಾಂಬ ದೇವಿ ಕಾಣಿಸಿಕೊಂಡು ತನಗಾಗಿ ನೀನೇ ದೇವಸ್ಥಾನ ಕಟ್ಟಬೇಕೆಂದು ಹೇಳಿದಾಗ ಅವನು, ನಾನೊಬ್ಬ ಮುಸ್ಲಿಂ, ನಾನು ಹೇಗೆ ಗುಡಿ ಕಟ್ಟಲಾದೀತು ಅಂತ ಕೇಳುತ್ತಾನೆ. ಅಗ ದೇವಿಯು, 4-5 ಬೇರೆ ಬೇರೆ ಜಾತಿಯ ಜನರನ್ನು ನಿನ್ನೊಂದಿಗೆ ಸೇರಿಸಿಕೊಂಡು ದೇವಸ್ಥಾನ ಕಟ್ಟು ಎನ್ನುತ್ತಾಳೆ.

ಮಾರಿಕಾಂಬಾ ದೇವಸ್ಥಾನ ಅಸ್ತಿತ್ವಕ್ಕೆ ಬಂದಿದ್ದು ಹಾಗೆ ಎಂದು ರಿಜ್ವಾನ್ ಹೇಳಿದರು.

ಮೂಲ್ಕಿಯಲ್ಲಿರುವ ಬಪ್ಪನಾಡು ದುರ್ಗಾ ಪರಮೇಶ್ವರಿ ದೇವಸ್ಥಾನ ಸಹ ಒಬ್ಬ ಮುಸ್ಲಿಂ ವ್ಯಾಪಾರಿ ಕಟ್ಟಿದ್ದಾನೆ. ಹಿಂದೂ ಸಂಘಟನೆಗಳು ಅಲ್ಲೂ ಮುಸ್ಲಿಂ ಸಮುದಾಯದವರಿಗೆ ತಡೆಯೊಡ್ಡುತ್ತಾರಾ? ಇದೆಲ್ಲವೂ ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ. ಇಂಥ ಹಲವಾರು ಉದಾಹರಣೆಗಳಿವೆ ಎಂದು ರಿಜ್ವಾನ್ ಹೇಳಿದರು.

ಹಿಂದೂ ಮತ್ತು ಮುಸ್ಲಿಂ ಸಮುದಾಯಗಳ ನಡುವೆ ಸೌಹಾರ್ದತೆ, ಸಾಮರಸ್ಯ ಶತಮಾನಗಳಿಂದ ಇದೆ. ನಮ್ಮ ರಾಜಕೀಯ ಸ್ವಾರ್ಥಕ್ಕಾಗಿ, ಕೆಟ್ಟ ಉದ್ದೇಶಗಳಿಗಾಗಿ ಎರಡು ಸಮುದಾಯಗಳ ನಡುವಿನ ಬಾಂಧವ್ಯ ಹಾಳುಮಾಡಬಾರದು, ಅದು ಪಾಪದ ಕೆಲಸ, ನಾವು ನಂಬಿಕೊಂಡಿರುವ ದೇವರು ಸಹ ನಮ್ಮನ್ನು ಕ್ಷಮಿಸುವುದಿಲ್ಲ ಎಂದ ಅವರು ಸಾಮರಸ್ಯದಿಂದ ಬಾಳಲು ಕರೆ ಎಲ್ಲ ಸಮುದಾಯಗಳನ್ನು ಆಗ್ರಹಿಸಿದರು.

ಇದನ್ನೂ ಓದಿ:   ವಿಧಾನ ಸಭೆಯಲ್ಲಿ ಈಗಲ್ಟನ್ ರೆಸಾರ್ಟ್ ಖರೀದಿ ವ್ಯವಹಾರದ ಇಂಚಿಂಚೂ ಮಾಹಿತಿ ತೆರೆದಿಟ್ಟ ಜೆಡಿಎಸ್ ನಾಯಕ ಕುಮಾರಸ್ವಾಮಿ