Daily Devotional: ಶ್ರಾವಣ ಮಾಸದಲ್ಲಿ ಹಸಿರು ಉಡುಗೆ-ತೊಡುಗೆಯ ಮಹತ್ವ ತಿಳಿಯಿರಿ

Updated on: Aug 20, 2025 | 6:51 AM

ಶ್ರಾವಣ ಮಾಸದ ಕೊನೆ ದಿನಗಳಲ್ಲಿ ಹಸಿರು ಬಣ್ಣದ ಉಡುಗೆ-ತೊಡುಗೆಯ ಮಹತ್ವದ ಬಗ್ಗೆ ಡಾ. ಬಸವರಾಜ ಗುರೂಜಿ ವಿವರಿಸಿದ್ದಾರೆ. ಹಸಿರು ಬಣ್ಣ ಬುಧ ಗ್ರಹದ ಪ್ರತಿಕ ಮತ್ತು ವೆಂಕಟೇಶ್ವರ ಸ್ವಾಮಿಗೆ ಪ್ರಿಯವಾದದ್ದು. ಹಸಿರು ಬಟ್ಟೆ ಧರಿಸುವುದು, ಹಸಿರು ವಸ್ತುಗಳನ್ನು ಉಪಯೋಗಿಸುವುದು ಶುಭವೆಂದು ಹೇಳಲಾಗಿದೆ.

ಬೆಂಗಳೂರು, ಆಗಸ್ಟ್​ 20: ಶ್ರಾವಣ ಮಾಸದ ಕೊನೆಯ ದಿನಗಳಲ್ಲಿ ಹಸಿರು ಬಣ್ಣದ ಬಳಕೆಯ ಮಹತ್ವವನ್ನು ಡಾ. ಬಸವರಾಜ ಗುರೂಜಿ ಅವರು ಈ ದೈನಂದಿನ ಭಕ್ತಿ ಕಾರ್ಯಕ್ರಮದಲ್ಲಿ ವಿವರಿಸಿದ್ದಾರೆ. ಶ್ರಾವಣ ಮಾಸದ ಕೊನೆಯ ದಿನಗಳಲ್ಲಿ (23ನೇ ತಾರೀಖು ಅಮವಾಸ್ಯೆ) ಹಸಿರು ಬಣ್ಣವನ್ನು ಹೆಚ್ಚಾಗಿ ಉಪಯೋಗಿಸುವುದರಿಂದ ಶುಭ ಫಲಿತಾಂಶಗಳು ಸಿಗಲಿದೆ. ಹಸಿರು ಬಣ್ಣ ಬುಧ ಗ್ರಹದ ಪ್ರತಿಕವಾಗಿದ್ದು, ವೆಂಕಟೇಶ್ವರ ಸ್ವಾಮಿಗೂ ಇದು ಪ್ರಿಯವಾದ ಬಣ್ಣ. ಮಹಿಳೆಯರು ಹಸಿರು ಬಟ್ಟೆ ಧರಿಸುವುದು, ಪುರುಷರು ಹಸಿರು ಖರ್ಚುಪು ಅಥವಾ ಹಸಿರು ಬಣ್ಣದ ವಸ್ತುಗಳನ್ನು ಇಟ್ಟುಕೊಳ್ಳುವುದು ಉತ್ತಮ.