ಕಾಫಿ ಬೆಳೆಗಾರರ ನಿದ್ದೆಗೆಡಿಸಿದ ಗಜಪಡೆ; ಇಲ್ಲಿದೆ ಕಾಡಾನೆಗಳ ಉಪಟಳದ ವಿಡಿಯೋ

| Updated By: ಕಿರಣ್ ಹನುಮಂತ್​ ಮಾದಾರ್

Updated on: Oct 27, 2023 | 3:44 PM

ಬರಗಾಲದಲ್ಲೂ ಅಲ್ಪಸ್ವಲ್ಪ ಬೆಳೆದಿದ್ದ ಬೆಳೆಗಳು ಕಾಡಾನೆ ಪಾಲಾಗಿದೆ. ಕಾಡಾನೆ ಹಾವಳಿಯಿಂದ ರೈತರು ಹಾಗೂ ಕಾಫಿ ಬೆಳೆಗಾರರು ಭಯಭೀತರಾಗಿದ್ದು, ಜೀವ ಭಯದಿಂದ ಕಾಫಿ ತೋಟಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಹಗಲು ವೇಳೆ ಗಜಪಡೆಗಳು ರಸ್ತೆ ದಾಟುತ್ತಿದೆ.

ಹಾಸನ, ಅ.27: ಜಿಲ್ಲೆಯ ಬೇಲೂರು(Belur)ತಾಲೂಕಿನಲ್ಲಿ ಕಾಡಾನೆಗಳು ಬೀಡುಬಿಟ್ಟಿವೆ. ಮಿತಿಮೀರಿದ ಕಾಡಾನೆ (Elephant)ಗಳ ಉಪಟಳಕ್ಕೆ ರೈತರು ಕಂಗಾಲಾಗಿದ್ದಾರೆ. ಹೌದು, ತಾಲೂಕಿನ ಬಿಕ್ಕೋಡು, ಇಲಕರವಳ್ಳಿ, ಲಕ್ಕುಂದ, ಮಲ್ಸಾವರ, ಮತ್ಸಾವರ ಸೇರಿ ವಿವಿಧ ಗ್ರಾಮದಲ್ಲಿ 30ಕ್ಕೂ ಹೆಚ್ಚು ಕಾಡಾನೆಗಳು ಬೀಡು ಬಿಟ್ಟಿವೆ. ಕಾಫಿ, ಬಾಳೆ, ಮೆಕ್ಕೆಜೋಳ, ಭತ್ತ, ಮೆಣಸು ಸೇರಿ ಇನ್ನಿತರ ಬೆಳೆಗಳನ್ನು ನಾಶ ಮಾಡಿವೆ. ಇದೀಗ ಕಾಡಾನೆಗಳನ್ನು ಕಾಡಿಗಟ್ಟಲು ಇಟಿಎಫ್ ಸಿಬ್ಬಂದಿಗಳು ಹರಸಾಹಸ ನಡೆಸಿದ್ದಾರೆ. ಇತ್ತ ಕಾಡಾನೆಗಳ ಮುಕ್ತಿಗೆ ಸರ್ಕಾರ, ಅರಣ್ಯ ಇಲಾಖೆಗೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ತೋಟಕ್ಕೆ ಬರಲು ಹಿಂದೇಟು ಹಾಕುತ್ತಿರುವ ಮಾಲೀಕರು ಹಾಗೂ ಕಾರ್ಮಿಕರು

ಬರಗಾಲದಲ್ಲೂ ಅಲ್ಪಸ್ವಲ್ಪ ಬೆಳೆದಿದ್ದ ಬೆಳೆಗಳು ಕಾಡಾನೆ ಪಾಲಾಗಿದೆ. ಕಾಡಾನೆ ಹಾವಳಿಯಿಂದ ರೈತರು ಹಾಗೂ ಕಾಫಿ ಬೆಳೆಗಾರರು ಭಯಭೀತರಾಗಿದ್ದು, ಜೀವ ಭಯದಿಂದ ಕಾಫಿ ತೋಟಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಹಗಲು ವೇಳೆ ಗಜಪಡೆಗಳು ರಸ್ತೆ ದಾಟುತ್ತಿದೆ. ಕಾಡಾನೆ ಹಾವಳಿಗೆ ಶಾಶ್ವತ ಪರಿಹಾರ ಕಂಡುಹಿಡಿಯದ ಸರ್ಕಾರ ಹಾಗೂ ಅರಣ್ಯ ಇಲಾಖೆಗೆ ಅನ್ನದಾತರು ಹಿಡಿಶಾಪ ಹಾಕುತ್ತಿದ್ದಾರೆ.

ಇದನ್ನೂ ಓದಿ:

ಇನ್ನು ಇತ್ತೀಚೆಗಷ್ಟೇ ಹಾಸನ ಜಿಲ್ಲೆಯ ಆಲೂರು ತಾಲ್ಲೂಕಿನ ಹೆಮ್ಮಿಗೆ ಗ್ರಾಮದಲ್ಲಿ ಬೆಳ್ಳಬೆಳಗ್ಗೆ ಕಾಡಾನೆಯೊಂದು ಪ್ರತ್ಯಕ್ಷವಾಗಿತ್ತು. ಇದರಿಂದ ಭಯಭೀತರಾದ ಹಸು-ಕರು ಮತ್ತು ನಾಯಿಗಳು ದಿಕ್ಕಾಪಾಲಾಗಿ ಓಡಿ ಹೋಗಿದ್ದು, ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಇನ್ನು ಅದೃಷ್ಟವಶಾತ್  ಕಾಡಾನೆ ಯಾರಿಗೂ ತೊಂದರೆ ಮಾಡದೆ ತನ್ನ ಪಾಡಿಗೆ ತಾನು ಕಾಡಿನೊಳಗೆ ಹೋಗಿತ್ತು. ಈ ಆನೆಗೆ ಇಲ್ಲಿಯ ಜನ ಭೀಮ ಎಂದು ನಾಮಕರಣ ಕೂಡ ಮಾಡಿದ್ದಾರೆ. ಇದೀಗ ಇದರ ಎಂಟ್ರಿ ಬೆನ್ನಲ್ಲೇ ಇಂದು ಕಾಡಾನೆಗಳ ಹಿಂಡೆ ನಾಡಿಗೆ ಬಂದು ರೈತರ ಬೆಳೆಗಳನ್ನು ನಾಶಪಡಿಸಿದೆ.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ

Published On - 3:00 pm, Fri, 27 October 23