Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸತೀಶ್ ಜಾರಕಿಹೊಳಿ ಸ್ವಂತ ಖರ್ಚಿನಲ್ಲಿ ಶಾಪಿಂಗ್​ಗಾಗಿ ದುಬೈ ಹೋಗುತ್ತಿದ್ದಾರೆ: ಜಿ ಪರಮೇಶ್ವರ, ಗೃಹ ಸಚಿವ

ಸತೀಶ್ ಜಾರಕಿಹೊಳಿ ಸ್ವಂತ ಖರ್ಚಿನಲ್ಲಿ ಶಾಪಿಂಗ್​ಗಾಗಿ ದುಬೈ ಹೋಗುತ್ತಿದ್ದಾರೆ: ಜಿ ಪರಮೇಶ್ವರ, ಗೃಹ ಸಚಿವ

ಅರುಣ್​ ಕುಮಾರ್​ ಬೆಳ್ಳಿ
|

Updated on:Oct 27, 2023 | 1:17 PM

ಸತೀಶ್ ಮತ್ತು ಬೇರೆ 3-4 ಶಾಸಕರು ಶಾಪಿಂಗ್ ದುಬೈ ಹೋಗುತ್ತಿದ್ದಾರೆ, ಅವರ ಪ್ರವಾಸವನ್ನು ಸರ್ಕಾರವೇನೂ ಪ್ರಾಯೋಜಿಸುತ್ತಿಲ್ಲ ಮತ್ತು ಪಕ್ಷದ ಹಣದಲ್ಲೂ ಅವರು ಅಲ್ಲಿಗೆ ಹೋಗುತ್ತಿಲ್ಲ, ತಮ್ಮ ಸ್ವಂತ ಖರ್ಚಿನಲ್ಲಿ ಹೋಗುತ್ತಿದ್ದಾರೆ ಎಂದು ಪರಮೇಶ್ವರ್ ಹೇಳಿದರು. ನಾಲ್ಕು ಜನ ಶಾಸಕರು ಜೊತೆಗೂಡಿ ಪ್ರವಾಸಕ್ಕೆ ಹೊರಟರೆ ಅದಕ್ಕೆ ವಿಪರೀತ ಆರ್ಥಗಳನ್ನು ಕಲ್ಪಿಸುವ ಅಗತ್ಯವಿಲ್ಲ ಎಂದು ಗೃಹ ಸಚಿವ ಹೇಳಿದರು.

ಬೆಂಗಳೂರು: ತುಂಬಾ ಗಂಭೀರ ಸ್ವಭಾವದವರಂತೆ ಕಾಣುವ ಗೃಹ ಸಚಿವ ಜಿ ಪರಮೇಶ್ವರ (G Parameshwara) ಅವರ ಹಾಸ್ಯಪ್ರಜ್ಞೆ ಜೋರಾಗಿದೆ ಮಾರಾಯ್ರೇ. ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳು; ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಅವರು ದುಬೈ ಪ್ರವಾಸ (Dubai tour) ತೆರಳುತ್ತಿರುವ ಬಗ್ಗೆ ಪ್ರಶ್ನೆ ಕೇಳಿದಾಗ, ತಮ್ಮ ಹಣದಲ್ಲಿ ಅವರು ಹೋಗುತ್ತಿದ್ದಾರೆ, ಬೇಡ ಅನ್ನೋಕ್ಕಾಗುತ್ತದೆಯೇ ಎಂದ ಅವರು ಪತ್ರಕರ್ತರನ್ನು ಉದ್ದೇಶಿಸಿ, ನೀವೂ ಹೋಗಿ, ಯಾರು ಬೇಡ ಅಂತಾರೆ? ಆದರೆ ಕೆಮೆರಾಗಳನ್ನು ಮಾತ್ರ ಜೊತೆಗೆ ತಗೊಂಡ್ಹೋಗಬೇಡಿ ಅಂದಾಗ ಪತ್ರಕರ್ತರ ಜೊತೆ ಅಲ್ಲಿದ್ದರೆಲ್ಲ ಜೋರಾಗಿ ನಕ್ಕರು. ಸತೀಶ್ ಮತ್ತು ಬೇರೆ 3-4 ಶಾಸಕರು ಶಾಪಿಂಗ್ ದುಬೈ ಹೋಗುತ್ತಿದ್ದಾರೆ, ಅವರ ಪ್ರವಾಸವನ್ನು ಸರ್ಕಾರವೇನೂ ಪ್ರಾಯೋಜಿಸುತ್ತಿಲ್ಲ ಮತ್ತು ಪಕ್ಷದ ಹಣದಲ್ಲೂ ಅವರು ಅಲ್ಲಿಗೆ ಹೋಗುತ್ತಿಲ್ಲ, ತಮ್ಮ ಸ್ವಂತ ಖರ್ಚಿನಲ್ಲಿ ಹೋಗುತ್ತಿದ್ದಾರೆ ಎಂದು ಪರಮೇಶ್ವರ್ ಹೇಳಿದರು. ನಾಲ್ಕು ಜನ ಶಾಸಕರು ಜೊತೆಗೂಡಿ ಪ್ರವಾಸಕ್ಕೆ ಹೊರಟರೆ ಅದಕ್ಕೆ ವಿಪರೀತ ಆರ್ಥಗಳನ್ನು ಕಲ್ಪಿಸುವ ಅಗತ್ಯವಿಲ್ಲ ಎಂದು ಗೃಹ ಸಚಿವ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Oct 27, 2023 01:17 PM