ಹುಲಿ ಉಗರು ಪ್ರಕರಣ: ಪಕ್ಕಾ ಸಸ್ಯಾಹಾರಿಯಾಗಿರುವ ನನ್ನ ಮನೆಯಲ್ಲಿ ಹುಲಿಯುಗುರು ಹೇಗೆ ಬಂದೀತು? ಲಕ್ಷ್ಮಿ ಹೆಬ್ಬಾಳ್ಕರ್
ರಾಜ್ಯದಲ್ಲಿ ಅನೇಕ ಜನ ವನ್ಯಜೀವಿ ಉತ್ಪನ್ನಗಳಾದ ಜಿಂಕೆ ಕೊಂಬು, ಹುಲಿಯುಗುರು ಮೊದಲಾದವುಗಳನ್ನು ಮನೆಯಲ್ಲಿ ಇಟ್ಟುಕೊಂಡಿರಬಹುದು, ಸರ್ಕಾರ ಮತ್ತು ಅರಣ್ಯ ಇಲಾಖೆ ಅವುಗಳನ್ನು ಜಪ್ತು ಮಾಡಿ ವನ್ಯಜೀವಿ ಸಂರಕ್ಷಣಾ ಕಾಯ್ದೆ ಬಗ್ಗೆ ಜಾಗೃತಿ ಮೂಡಿಸುವುದು ಒಳಿತು ಎಂದರು.
ಬೆಳಗಾವಿ: ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ತಾವೊಬ್ಬ ಪಕ್ಕಾ ಸಸ್ಯಾಹಾರಿ (vegetarian) ಆಗಿರೊದ್ರಿಂದ ತಮ್ಮ ಮನೆಯಲ್ಲಿ ವನ್ಯಜೀವಿ ಉತ್ಪನ್ನಗಳು ಬರೋದು ಸಾಧ್ಯವೇ ಇಲ್ಲ ಎಂದು ಹೇಳಿದರು. ತಮ್ಮ ಮಗ ಮೃಣಾಲ್ ಹೆಬ್ಬಾಳ್ಕರ್ (Mrinal Hebbalkar) ಧರಿಸಿದ್ದು ಹುಲಿ ಉಗುರಿನಂತೆ ಕಾಣುವ ಪ್ಲಾಸ್ಟಿಕ್ ಪೆಂಡೆಂಟ್, ಯಾರೋ ಅವನಿಗೆ ಉಡುಗೊರೆ ರೂಪದಲ್ಲಿ ನೀಡಿದ್ದು ಅಂತ ಹೇಳಿದ ಅವರು ಇವತ್ತಿನ ಕಾಲದಲ್ಲಿ ಅಸಲಿ ಹುಲಿಯುಗುರು ಸಿಗೋದು ಸಾಧ್ಯವೇ ಎಂದು ಪ್ರಶ್ನಿಸಿದರು. ಮೃಣಾಲ್ ಧರಿಸಿದ್ದ ಪೆಂಡೆಂಟನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಪೊರೆನ್ಸಿಕ್ ಲ್ಯಾಬ್ ಗೆ ಕಳಿಸಿ ತಪಾಸಣೆ ಮಾಡಿಸುತ್ತಾರೆ ಎಂದು ಸಚಿವರು ಹೇಳಿದರು. ಕಾನೂನು ಎಲ್ಲರಿಗೂ ಒಂದೇ; ಅದು ಲಕ್ಷ್ಮಿ ಹೆಬ್ಬಾಳ್ಕರ್ ಗೆ ಬೇರೆಯಾಗುವುದು ಸಾಧ್ಯವಿಲ್ಲ ಎಂದು ಹೇಳಿದ ಸಚಿವೆ, ರಾಜ್ಯದಲ್ಲಿ ಅನೇಕ ಜನ ವನ್ಯಜೀವಿ ಉತ್ಪನ್ನಗಳಾದ ಜಿಂಕೆ ಕೊಂಬು, ಹುಲಿಯುಗುರು ಮೊದಲಾದವುಗಳನ್ನು ಮನೆಯಲ್ಲಿ ಇಟ್ಟುಕೊಂಡಿರಬಹುದು, ಸರ್ಕಾರ ಮತ್ತು ಅರಣ್ಯ ಇಲಾಖೆ ಅವುಗಳನ್ನು ಜಪ್ತು ಮಾಡಿ ವನ್ಯಜೀವಿ ಸಂರಕ್ಷಣಾ ಕಾಯ್ದೆ ಬಗ್ಗೆ ಜಾಗೃತಿ ಮೂಡಿಸುವುದು ಒಳಿತು ಎಂದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಉತ್ತರ ಪ್ರದೇಶ ಕಾಂಗ್ರೆಸ್ ರಾಜ್ಯಾಧ್ಯಕ್ಷ ಅಜಯ್ ರೈ ಮೇಲೆ ಶೂ ಅಟ್ಯಾಕ್
ವಿದ್ಯುತ್ ದೀಪಾಲಂಕಾರದಿಂದ ಝಗಮಗಿಸಿದ ಮೈಸೂರು: ನೋಡ ನೋಡ ಎಷ್ಟು ಚಂದ ಅಲಾ
ಸ್ಟಿಂಗ್ ಆಪರೇಷನ್ ಯಾರು ಮಾಡುತ್ತಿದ್ದಾರೆಂದು ಗೊತ್ತಿದೆ ಎಂದ ಸಿದ್ದರಾಮಯ್ಯ
ಸ್ಟಿಂಗ್ ಆಪರೇಷನ್ ಮಾಂತ್ರಿಕ ಯಾರು? ಹೋಟೆಲ್ ಸೀಕ್ರೆಟ್ ಬಿಚ್ಚಿಟ್ಟ ಕುಮಾರಣ್ಣ
