AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹುಲಿ ಉಗುರು ವಿವಾದ: ಲಕ್ಷ್ಮಿ ಹೆಬ್ಬಾಳ್ಕರ್​ ಪುತ್ರನ ಕೊರಳಲ್ಲೂ ಹುಲಿ ಉಗುರಿನ ಪೆಂಡೆಂಟ್; ಪರಿಶೀಲನೆಗೆ ಡಿಸಿಎಫ್ ಸೂಚನೆ

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​ ಪುತ್ರ ಮೃಣಾಲ್​​ ಹೆಬ್ಬಾಳ್ಕರ್​ ಧರಿಸಿರುವ ಹುಲಿ ಉಗುರಿನ ಬಗ್ಗೆ ಶೀಘ್ರದಲ್ಲೇ ಪರಿಶೀಲಿಸಲಾಗುತ್ತದೆ. ಮಾಧ್ಯಮದ ಮೂಲಕ ಸಚಿವರ ಪುತ್ರನ ಪೆಂಡೆಂಟ್ ಬಗ್ಗೆ ಮಾಹಿತಿ ಸಿಕ್ಕಿದೆ. ಹುಲಿ ಉಗುರಿನ ಪೆಂಡೆಂಟ್ ಬಗ್ಗೆ ಪರಿಶೀಲನೆ ನಡೆಸುವಂತೆ ಅರಣ್ಯ ಇಲಾಖೆಯ ಕೆಳಹಂತದ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಬೆಳಗಾವಿ ಡಿಸಿಎಫ್ ಶಂಕರ ಕಲ್ಲೋಳಕರ್ ಹೇಳಿದರು.

ಹುಲಿ ಉಗುರು ವಿವಾದ: ಲಕ್ಷ್ಮಿ ಹೆಬ್ಬಾಳ್ಕರ್​ ಪುತ್ರನ ಕೊರಳಲ್ಲೂ ಹುಲಿ ಉಗುರಿನ ಪೆಂಡೆಂಟ್; ಪರಿಶೀಲನೆಗೆ ಡಿಸಿಎಫ್ ಸೂಚನೆ
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಪುತ್ರ ಮೃಣಾಲ್ ಹೆಬ್ಬಾಳ್ಕರ್
Sahadev Mane
| Edited By: |

Updated on: Oct 27, 2023 | 8:13 AM

Share

ಬೆಳಗಾವಿ ಅ.27: ರಾಜ್ಯದಲ್ಲಿ ಹುಲಿ ಉಗುರಿನ ಸದ್ದು ಜೋರಾಗಿದೆ. ಹುಲಿ ಉಗುರು (Tiger Claw) ಧರಿಸಿದ್ದ ಬಿಗ್ ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಬಂಧನ ಬೆನ್ನಲ್ಲೇ ಹುಲಿ ಉಗುರು ಧರಿಸಿರುವ ರಾಜ್ಯದ ವಿಐಪಿ ಮಂದಿಗೆ ತಲೆನೋವು ಶುರುವಾಗಿದೆ. ಕನ್ನಡ ಚಿತ್ರರಂಗದ (Sandlwood) ಪ್ರಮುಖರ ವಿರುದ್ಧ ಹುಲಿ ಉಗುರಿನ ಪೆಂಡೆಂಟ್ ಧರಿಸಿದ ಆರೋಪ ಕೇಳಿಬಂತು. ಸೆಲೆಬ್ರೆಟಿಗಳು ಬೆನ್ನಲ್ಲೇ ರಾಜಕಾರಣಿಗಳು, ಉದ್ಯಮಿಗಳು ಕೂಡ ಹುಲಿ ಉಗುರಿನ ಪೆಂಡೆಂಟ್ ಧರಿಸಿರುವ ಆರೋಪ ಕೇಳಿಬಂದಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ (Laxmi Hebbalkar)​​ ಪುತ್ರ, ಕಾಂಗ್ರೆಸ್ (Congress) ಯುವ ಮುಖಂಡ ಮೃಣಾಲ್ ಹೆಬ್ಬಾಳ್ಕರ್ ಹುಲಿ ಉಗುರಿನ ಪೆಂಡೆಂಟ್​ ಧರಿಸಿರುವ​ ಫೋಟೋ ವೈರಲ್​​ ಆಗುತ್ತಿದೆ. ಈ ಬಗ್ಗೆ ಟಿವಿ9ನಲ್ಲಿ ವರದಿ ಬೆನ್ನಲ್ಲೇ ಬೆಳಗಾವಿ ಅರಣ್ಯ ಇಲಾಖೆ ಅಧಿಕಾರಿಗಳು ಅಲರ್ಟ್​​ ಆಗಿದ್ದಾರೆ.

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​ ಪುತ್ರ ಮೃಣಾಲ್​​ ಹೆಬ್ಬಾಳ್ಕರ್​ ಧರಿಸಿರುವ ಹುಲಿ ಉಗುರಿನ ಬಗ್ಗೆ ಶೀಘ್ರದಲ್ಲೇ ಪರಿಶೀಲಿಸಲಾಗುತ್ತದೆ. ಮಾಧ್ಯಮದ ಮೂಲಕ ಸಚಿವರ ಪುತ್ರನ ಪೆಂಡೆಂಟ್ ಬಗ್ಗೆ ಮಾಹಿತಿ ಸಿಕ್ಕಿದೆ. ಹುಲಿ ಉಗುರಿನ ಪೆಂಡೆಂಟ್ ಬಗ್ಗೆ ಪರಿಶೀಲನೆ ನಡೆಸುವಂತೆ ಅರಣ್ಯ ಇಲಾಖೆಯ ಕೆಳಹಂತದ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಇಂದು ಸಂಜೆಯೊಳಗೆ ಹುಲಿ ಉಗುರಿನ ಸತ್ಯಾಸತ್ಯತೆ ಬಗ್ಗೆ ಪರಿಶೀಲಿಸುತ್ತೇವೆ. ಏನಾದರೂ ತಪ್ಪು ಕಂಡುಬಂದರೆ ಸರ್ಕಾರದ ಸಮಿತಿಗೆ ವರದಿ ನೀಡುತ್ತೇವೆ ಎಂದು ಬೆಳಗಾವಿ ಡಿಸಿಎಫ್ ಶಂಕರ ಕಲ್ಲೋಳಕರ್ ಮಾಹಿತಿ ನೀಡಿದರು.

ಇದನ್ನೂ ಓದಿ: ಹುಲಿ ಉಗುರು ವಿವಾದ: ಹುಲಿಯುಗುರು ಡಾಲರ್ ಧರಿಸಿದ್ದ ಚಿಕ್ಕಮಗಳೂರಿನ ಇಬ್ಬರು ಅರ್ಚಕರಿಗೆ 14-ದಿನ ನ್ಯಾಯಾಂಗ ಕಸ್ಟಡಿ!

ಹುಲಿ ಉಗುರಿನ ಲಾಕೆಟ್ ಧರಿಸಿದ ಹೆಬ್ಬಾಳ್ಕರ್ ಅಳಿಯನ ಫೋಟೋ ವೈರಲ್​​

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅಳಿಯನ ಕೊರಳಲ್ಲೂ ಹುಲಿ ಉಗುರಿನ ಲಾಕೆಟ್ ಧರಿಸಿರುವ ಫೋಟೋ ಕೂಡ ವೈರಲ್ ಆಗುತ್ತಿದೆ. ಲಕ್ಷ್ಮೀ ಹೆಬ್ಬಾಳಕರ್ ಅಕ್ಕನ ಮಗಳನ್ನು ಮದುವೆಯಾಗಿರುವ ರಜತ್ ಉಳ್ಳಾಗಡ್ಡಿಮಠ ಧರಿಸಿರುವ ಲಾಕೆಟ್ ಬಗ್ಗೆ ಚರ್ಚೆ ಶುರುವಾಗಿತ್ತು. ಮದುವೆ ಸಮಯದಲ್ಲಿ ಫೋಟೋ ಶೂಟ್​ನಲ್ಲಿ ಹುಲಿ ಉಗುರು ಮಾದರಿ ಚೈನ್ ಧರಿಸಿದ್ದ ರಜತ್ ಫೋಟೋ ಈಗ ವೈರಲ್ ಆಗಿತ್ತು.

ವಿಜುಗೌಡ ಪಾಟೀಲ್ ಪುತ್ರನಿಗೆ ಸಂಕಷ್ಟ

ಇಂದು ವಿಜಯಪುರದಲ್ಲಿ ಪರಿಶೀಲನೆ ನಡೆಸಿದ ಅರಣ್ಯ ಇಲಾಖೆ ಅಧಿಕಾರಿಗಳು, ಬಿಜೆಪಿ ಮುಖಂಡ ವಿಜುಗೌಡ ಪಾಟೀಲ್ ಪುತ್ರ ಶಾಶ್ವತ ಗೌಡ ಪಾಟೀಲ್ ಧರಿಸುತ್ತಿದ್ದ ಹುಲಿ ಉಗುರಿನ ಲಾಕೆಟ್​ನ್ನು ಅರಣ್ಯಾಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದರು. ಸದ್ಯ ಅದನ್ನು ಪರೀಕ್ಷೆಗೆ ಕಳಿಸಿದ್ದರು.