ಹುಲಿ ಉಗುರು ವಿವಾದ: ಹುಲಿಯುಗುರು ಡಾಲರ್ ಧರಿಸಿದ್ದ ಚಿಕ್ಕಮಗಳೂರಿನ ಇಬ್ಬರು ಅರ್ಚಕರಿಗೆ 14-ದಿನ ನ್ಯಾಯಾಂಗ ಕಸ್ಟಡಿ!

ಈ ಪ್ರಕರಣಗಳಲ್ಲಿ ಇಲಾಖೆಯ ಧೋರಣೆ ಇಬ್ಬಂದಿತನದಿಂದ ಕೂಡಿದೆ. ವನ್ಯಜೀವಿ ಉತ್ಪನ್ನಗಳನ್ನು ಹೊಂದಿದ್ದ ಸೆಲಿಬ್ರಿಟಿಗಳಿಗೆ ಕೇವಲ ನೋಟೀಸ್ ನೀಡಿದರೆ ಕೃಷ್ಣಾನಂದ ಹೊಳ್ಳ, ನಾಗೇಂದ್ರ ಜೋಯಿಸಾ ಮತ್ತು ವರ್ತೂರು ಸಂತೋಷ್ ಅವರಂಥ ಸೆಲಿಬ್ರಿಟಿಗಳಲ್ಲದವರನ್ನು ನ್ಯಾಯಾಂಗ ಕಸ್ಟಡಿಗೆ ಒಪ್ಪಿಸಲಾಗುತ್ತಿದೆ!

ಹುಲಿ ಉಗುರು ವಿವಾದ: ಹುಲಿಯುಗುರು ಡಾಲರ್ ಧರಿಸಿದ್ದ ಚಿಕ್ಕಮಗಳೂರಿನ ಇಬ್ಬರು ಅರ್ಚಕರಿಗೆ 14-ದಿನ ನ್ಯಾಯಾಂಗ ಕಸ್ಟಡಿ!
|

Updated on: Oct 26, 2023 | 7:09 PM

ಚಿಕ್ಕಮಗಳೂರು: ಹುಲಿ ಉಗುರಿನ ಪೆಂಡೆಂಟ್ (tiger claw pendant), ಹುಲಿಯುಗುರಿನ ಡಾಲರ್ ಆಥವಾ ಹುಲಿಯುಗುರಿನ ಲಾಕೆಟ್-ಧರಿಸಿ ಫೋಟೋ ತೆಗೆಸಿಕೊಂಡವರಿಗೆ, ಪ್ರದರ್ಶನ ಮಾಡಿದವರಿಗೆ, ಪ್ರತಿಷ್ಠೆ ಅಂತ ಕೊರಳಿಗೆ ಧರಿಸಿ ಮೆರೆದವರಿಗೆ ಅವು ಕಂಟಕಗಳಾಗಿವೆ! ಇದೇ ವಿಷಯಕ್ಕೆ ಸಂಬಂಧಿಸಿದಂತೆ ಚಿಕ್ಕಮಗಳೂರಿನ ಇಬ್ಬರು ಅರ್ಚಕರು ಬಂಧನಕ್ಕೊಗಾಗಿದ್ದಾರೆ. ನಿಮಗೆ ದೃಶ್ಯಗಳಲ್ಲಿ ಕಾಣುತ್ತಿರುವ ಕೃಷ್ಣಾನಂದ ಹೊಳ್ಳ (Krishnanand Holla) ಮತ್ತು ನಾಗೇಂದ್ರ ಜೋಯಿಸಾ (Nagendra Joisa) ಎನ್ನುವವರನ್ನು ಅರಣ್ಯಾಧಿಕಾರಿಗಳು ಬಂಧಿಸಿ ಚಿಕ್ಕಮಗಳೂರ ಜಿಲ್ಲಾ ನ್ಯಾಯಾಲಯಯದ ಮುಂದೆ ಹಾಜರುಪಡಿಸಿದ್ದು, ನ್ಯಾಯಾಧೀಶರು ಅವರಿಬ್ಬರನ್ನು 14-ದಿನ ನ್ಯಾಯಾಂಗ ಕಸ್ಟಡಿಗೆ ಒಪ್ಪಿಸಿದ್ದಾರೆ. ನಮಗೆ ಲಭ್ಯವಿರುವ ಮಾಹಿತಿಯ ಪ್ರಕಾರ ಕೃಷ್ಣಾನಂದ ಹೊಳ್ಳ ಮತ್ತು ನಾಗೇಂದ್ರ ಜೋಯಿಸಾ ಚಿಕ್ಕಮಗಳೂರಿನ ಐತಿಹಾಸಿಕ ಮಾರ್ಕಂಡೇಯ ದೇವಸ್ಥಾನದ ಅರ್ಚಕರು. ಈ ಪ್ರಕರಣಗಳಲ್ಲಿ ಇಲಾಖೆಯ ಧೋರಣೆ ಇಬ್ಬಂದಿತನದಿಂದ ಕೂಡಿದೆ. ವನ್ಯಜೀವಿ ಉತ್ಪನ್ನಗಳನ್ನು ಹೊಂದಿದ್ದ ಸೆಲಿಬ್ರಿಟಿಗಳಿಗೆ ಕೇವಲ ನೋಟೀಸ್ ನೀಡಿದರೆ ಕೃಷ್ಣಾನಂದ ಹೊಳ್ಳ, ನಾಗೇಂದ್ರ ಜೋಯಿಸಾ ಮತ್ತು ವರ್ತೂರು ಸಂತೋಷ್ ಅವರಂಥ ಸೆಲಿಬ್ರಿಟಿಗಳಲ್ಲದವರನ್ನು ನ್ಯಾಯಾಂಗ ಕಸ್ಟಡಿಗೆ ಒಪ್ಪಿಸಲಾಗುತ್ತಿದೆ!

ಅಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Follow us