‘ಟಗರು ಪಲ್ಯ’ ಸಿನಿಮಾ ಬಿಡುಗಡೆಗೆ ಮುನ್ನವೇ ನಟಿ ಅಮೃತಾಗೆ ಅವಕಾಶಗಳು ಬರುತ್ತಿವೆಯೇ?
Tagaru Palya: ನಾಗಭೂಷಣ್, ವಾಸುಕಿ ವೈಭವ್, ಪ್ರೇಮ್ ಪುತ್ರಿ ಅಮೃತಾ ನಟಿಸಿರುವ 'ಟಗರು ಪಲ್ಯ' ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಸಿನಿಮಾ ಬಿಡುಗಡೆಗೆ ಮುನ್ನವೇ ಅಮೃತಾಗೆ ಹೊಸ ಸಿನಿಮಾ ಆಫರ್ಗಳು ಬಂದಿವೆಯೇ?
ಡಾಲಿ ಧನಂಜಯ್ (Daali Dhananjay) ನಿರ್ಮಾಣ ಮಾಡಿ, ನಾಗಭೂಷಣ್, ವಾಸುಕಿ ವೈಭವ್, ಪ್ರೇಮ್ ಪುತ್ರಿ ಅಮೃತಾ ನಟಿಸಿರುವ ‘ಟಗರು ಪಲ್ಯ’ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ನಟ ಲವ್ಲಿ ಪ್ರೇಮ್ ಪುತ್ರಿ ಅಮೃತಾ ಈ ಸಿನಿಮಾ ಮೂಲಕ ನಟಿಯಾಗಿ ಸ್ಯಾಂಡಲ್ವುಡ್ಗೆ ಎಂಟ್ರಿ ನೀಡಿದ್ದಾರೆ. ಮೊದಲ ಸಿನಿಮಾ ಬಿಡುಗಡೆಗೆ ಮುನ್ನವೇ ಹಾಡು, ಟ್ರೈಲರ್ಗಳಲ್ಲಿಯೇ ಅಮೃತಾ ಗಮನ ಸೆಳೆಯುತ್ತಿದ್ದಾರೆ. ಸಿನಿಮಾ ಬಿಡುಗಡೆಗೆ ಮುನ್ನವೇ ಅಮೃತಾಗೆ ಹೊಸ ಸಿನಿಮಾ ಅವಕಾಶಗಳು ಬರಲಾರಂಭಿಸಿವೆಯೇ? ಪ್ರಶ್ನೆಗೆ ಉತ್ತರ ನೀಡಿರುವ ಅಮೃತಾ, ಅದೇನೋ ಗೊತ್ತಿಲ್ಲ, ಸದ್ಯಕ್ಕೆ ನಾನು ಈ ಸಿನಿಮಾ ಬಗ್ಗೆ ಗಮನ ವಹಿಸಿದ್ದೀನಿ. ಹೊಸ ಅವಕಾಶಗಳು ಬಂದಿವೆಯೋ ಇಲ್ಲವೋ ಗೊತ್ತಿಲ್ಲ, ಅಪ್ಪ ನನ್ನ ಬಳಿ ಇನ್ನೂ ಏನೂ ಹೇಳಿಲ್ಲ ಎಂದಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos