ಚಿತ್ರನಟನಾಗಿರಲಿ ಅಥವಾ ಮಂತ್ರಿ; ಯಾವುದೇ ಸಮುದಾಯದ ಬಗ್ಗೆ ಕೀಳಾಗಿ ಮಾತಾಡಿದರೆ ಸಹಿಸಲಾಗದು: ಜಿ ಪರಮೇಶ್ವರ, ಗೃಹ ಸಚಿವ

ಚಿತ್ರನಟನಾಗಿರಲಿ ಅಥವಾ ಮಂತ್ರಿ; ಯಾವುದೇ ಸಮುದಾಯದ ಬಗ್ಗೆ ಕೀಳಾಗಿ ಮಾತಾಡಿದರೆ ಸಹಿಸಲಾಗದು: ಜಿ ಪರಮೇಶ್ವರ, ಗೃಹ ಸಚಿವ

ಅರುಣ್​ ಕುಮಾರ್​ ಬೆಳ್ಳಿ
|

Updated on: Aug 16, 2023 | 12:23 PM

ಹಲವು ಸಲ ಸಚಿವನಾಗಿ ಒಮ್ಮೆ ಉಪ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸಿರುವ ಪರಮೇಶ್ವರ ಅವರು ನೇರ ನುಡಿಯ ದಕ್ಷ ರಾಜಕಾರಣಿ. ಮುಖ ದಾಕ್ಷಿಣ್ಯ ಮಾಡಿ ಅವರಿಗೆ ಗೊತ್ತಿಲ್ಲ. ಜೇಡವನ್ನು ಜೇಡವೆಂದೇ ಕರೆಯುವ ಎದೆಗಾರಿಕೆಯನ್ನು ಅವರು ಪ್ರದರ್ಶಿಸುತ್ತಾರೆ.

ಬೆಂಗಳೂರು: ಗೃಹ ಸಚಿವ ಜಿ ಪರಮೇಶ್ವರ ಸಚಿವ ನಾನ್ಸೆನ್ಸ್ (nonsense) ಸಹಿಸುವುದಿಲ್ಲ. ಇದನ್ನು ನಾವು ಆಗಾಗ ಹೇಳುತ್ತಾ ಬಂದಿದ್ದೇವೆ. ಕಳೆದ ನಾಲ್ಕೂವರೆ ದಶಕಗಳಿಂದ ಸಕ್ರಿಯ ರಾಜಕಾರಣದಲ್ಲಿರುವ ಮತ್ತು ಹಲವು ಸಲ ಸಚಿವನಾಗಿ ಒಮ್ಮೆ ಉಪ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸಿರುವ ಪರಮೇಶ್ವರ (G Parameshwara) ಅವರು ನೇರ ನುಡಿಯ ದಕ್ಷ ರಾಜಕಾರಣಿ. ಮುಖ ದಾಕ್ಷಿಣ್ಯ ಮಾಡಿ ಅವರಿಗೆ ಗೊತ್ತಿಲ್ಲ. ಜೇಡವನ್ನು ಜೇಡವೆಂದೇ (calls spade a spade) ಕರೆಯುವ ಎದೆಗಾರಿಕೆಯನ್ನು ಅವರು ಪ್ರದರ್ಶಿಸುತ್ತಾರೆ. ಬೆಂಗಳೂರಲ್ಲಿ ಇಂದು ಅವರನ್ನು ಚಿತ್ರನಟ ಉಪೇಂದ್ರ ಮತ್ತು ಸಚಿವ ಎಸ್ಎಸ್ ಮಲ್ಲಿಕಾರ್ಜುನ ನಿರ್ದಿಷ್ಟ ಸಮುದಾಯಗಳ ಬಗ್ಗೆ ಅವಹೇಳನಕಾರಿಯಾಗಿ ಮಾತಾಡಿರುವ ಬಗ್ಗೆ ಮಾಧ್ಯಮ ಪ್ರತಿನಿಧಿಗಳು ಪ್ರಶ್ನಿಸಿದಾಗ ಪ್ರಶ್ನಿಸಿದಾಗ, ಚಿತ್ರನಟನಾಗಲೀ ಅಥವಾ ಸಚಿವ-ಒಂದು ಸಮುದಾಯದ ಬಗ್ಗೆ ಅವಹೇಳನಕಾರಿಯಾಗಿ ಮಾತಾಡುವುದನ್ನು ಸಹಿಸಲಾಗದು. ಆ ಸಮುದಾಯಕ್ಕೆ ಆಗುವ ಅವಮಾನ ಮತ್ತು ನೋವನ್ನು ಈ ಜನ ಅರ್ಥಮಾಡಿಕೊಳ್ಳಬೇಕು, ತಪ್ಪಿತಸ್ಥರು ಯಾರೇ ಆಗಿರಲಿ, ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ