ಕಾಂಗ್ರೆಸ್ ಪಕ್ಷಕ್ಕೆ ವಾಪಸ್ಸಾಗಲಿಚ್ಛಿಸುವವರಿಗೆ ಸ್ವಾಗತವಿದೆ, ಆದರೆ ಅಂತಿಮ ನಿರ್ಧಾರ ಹೈಕಮಾಂಡ್ ತೆಗೆದುಕೊಳ್ಳುತ್ತದೆ: ಡಿಕೆ ಸುರೇಶ್, ಸಂಸದ

ವಿಶ್ವನಾಥ ಈಗಾಗಲೇ ಕಾಂಗ್ರೆಸ್ ಪಾಳೆಯದಲ್ಲಿದ್ದಾರೆ ಮತ್ತು ಉಳಿದಿಬ್ಬರು ವಾಪಸ್ಸು ಹೋಗುವ ಪ್ರಯತ್ನದಲ್ಲಿದ್ದಾರೆ. ಇದೇ ವಿಷಯದ ಬಗ್ಗೆ ಸಂಸದ ಡಿಕೆ ಸುರೇಶ್ ಆವರನ್ನು ಕೇಳಿದಾಗ, ಅವರು ಪಕ್ಷಕ್ಕೆ ವಾಪಸ್ಸಾಗುವ ಇಚ್ಛೆ ವ್ಯಕ್ತಪಡಿಸಿರುವ ಬಗ್ಗೆ ಮಾಹಿತಿ ಇಲ್ಲ ಎಂದರು.

ಕಾಂಗ್ರೆಸ್ ಪಕ್ಷಕ್ಕೆ ವಾಪಸ್ಸಾಗಲಿಚ್ಛಿಸುವವರಿಗೆ ಸ್ವಾಗತವಿದೆ, ಆದರೆ ಅಂತಿಮ ನಿರ್ಧಾರ ಹೈಕಮಾಂಡ್ ತೆಗೆದುಕೊಳ್ಳುತ್ತದೆ: ಡಿಕೆ ಸುರೇಶ್, ಸಂಸದ
|

Updated on: Aug 16, 2023 | 2:14 PM

ಬೆಂಗಳೂರು: ವಲಸೆ ಹಕ್ಕಿಗಳು ಅಂತ 2019 ರಲ್ಲಿ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದ ನಾಯಕರಿಗೆ ಹೇಳೋದುಂಟು. ವಲಸೆ ಹಕ್ಕಿಗಳ ಪ್ರವೃತ್ತಿ ನಮಗೆ ಗೊತ್ತು. ಒಂದು ಋತು ಕಳೆದ ಬಳಿಕ ಅವು ತಮ್ಮ ಸ್ವಸ್ಥಳಕ್ಕೆ ವಾಪಸ್ಸಾಗುತ್ತವೆ. ರಾಜಕೀಯ ವಲಸೆ ಹಕ್ಕಿಗಳ ಪೈಕಿ ಒಂದು ಆ ಕೆಲಸ ಮಾಡಿದೆ, ಮತ್ತೆರಡು ಆ ಪ್ರಕ್ರಿಯೆಯಲ್ಲಿ ತೊಡಗಿರುವ ವದಂತಿ ಇದೆ. ಹೌದು ಸ್ವಾಮಿ, ನಾವು ಹಳ್ಳಿ ಹಕ್ಕಿ ಹೆಚ್ ವಿಶ್ವನಾಥ (H Vishwanath), ಮಾಜಿ ಸಚಿವರಾದ ಎಸ್ ಟಿ ಸೋಮಶೇಖರ್ (ST Somashekhar) ಹಾಗೂ ಎಮ್ ಟಿ ಬಿ ನಾಗರಾಜ್ (MTB Nagaraj) ಅವರ ಬಗ್ಗೆ ಚರ್ಚಿಸುತ್ತಿದ್ದೇವೆ. ವಿಶ್ವನಾಥ ಈಗಾಗಲೇ ಕಾಂಗ್ರೆಸ್ ಪಾಳೆಯದಲ್ಲಿದ್ದಾರೆ ಮತ್ತ್ತು ಉಳಿದಿಬ್ಬರು ವಾಪಸ್ಸು ಹೋಗುವ ಪ್ರಯತ್ನದಲ್ಲಿದ್ದಾರೆ. ಇದೇ ವಿಷಯದ ಬಗ್ಗೆ ಸಂಸದ ಡಿಕೆ ಸುರೇಶ್ (DK Suresh) ಆವರನ್ನು ಕೇಳಿದಾಗ, ಅವರು ಪಕ್ಷಕ್ಕೆ ವಾಪಸ್ಸಾಗುವ ಇಚ್ಛೆ ವ್ಯಕ್ತಪಡಿಸಿರುವ ಬಗ್ಗೆ ಮಾಹಿತಿ ಇಲ್ಲ, ಅದರೆ ವಾಪಸ್ಸು ಬರುವವರಿಗೆ ಸ್ವಾಗತವಂತೂ ಇದ್ದೇ ಇದೆ ಎಂದು ಹೇಳಿದರು. ಹೈಕಮಾಂಡ್ ಈ ವಿಷಯದಲ್ಲಿ ಅಂತಿಮ ನಿರ್ಣಯ ತೆಗೆದುಕೊಳ್ಳುತ್ತದೆ ಎಂದು ಸುರೇಶ್ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us