Video: ಖಾಸಗಿ ವಾಹಿನಿಯ ಕ್ಯಾಮೆರಾ ಮ್ಯಾನ್ ಮೇಲೆ ಹಲ್ಲೆ: ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷನ ರೌಡಿಸಂ

Video: ಖಾಸಗಿ ವಾಹಿನಿಯ ಕ್ಯಾಮೆರಾ ಮ್ಯಾನ್ ಮೇಲೆ ಹಲ್ಲೆ: ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷನ ರೌಡಿಸಂ

ಮಹೇಶ್ ಇ, ಭೂಮನಹಳ್ಳಿ
| Updated By: ಕಿರಣ್ ಹನುಮಂತ್​ ಮಾದಾರ್

Updated on:Oct 27, 2023 | 6:03 PM

ತುಮಕೂರಿನ(Tumakur)  ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಇಂದಿನಿಂದ ಆರಂಭವಾಗಲಿರುವ ಕ್ರೀಡಾಕೂಟದ ಅವ್ಯವಸ್ಥೆ ಬಗ್ಗೆ ಚಿತ್ರೀಕರಿಸಲು ಹೋದ ವೇಳೆ ಮಾದ್ಯಮದವರ ಮೇಲೆ ಹಲ್ಲೆ ಮಾಡಿದ್ದಾರೆ. ಟ್ರ್ಯಾಕ್ ಸೂಟ್ ಹಾಗೂ ಸಮವಸ್ತ್ರ ವಿತರಣೆಯಲ್ಲಿ ಅವ್ಯವಸ್ಥೆ ಕಂಡುಬಂದಿದ್ದು, ಕ್ರೀಡಾಪಟುಗಳಿಗೆ ಟೀ ಶರ್ಟ್ ಕೊಡುವಲ್ಲಿ ಗೋಲ್ ಮಾಲ್ ನಡೆದಿರುವ ಆರೋಪ ಕೇಳಿಬಂದಿತ್ತು.

ತುಮಕೂರು, ಅ.27: ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ (State Government Employees Association President) ಸಿ.ಎಸ್ ಷಡಕ್ಷರಿ(CS Shadakshari) ಅವರು ಖಾಸಗಿ ವಾಹಿನಿಯ ಕ್ಯಾಮೆರಾ ಮ್ಯಾನ್ ಮೇಲೆ ಹಲ್ಲೆ ಮಾಡಿ ದರ್ಪ ತೋರಿದ್ದಾರೆ. ರಾಜ್ಯ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ ಹಿನ್ನೆಲೆ ತುಮಕೂರಿನ(Tumakur)  ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಇಂದಿನಿಂದ ಆರಂಭವಾಗಲಿರುವ ಕ್ರೀಡಾಕೂಟದ ಅವ್ಯವಸ್ಥೆ ಬಗ್ಗೆ ಚಿತ್ರೀಕರಿಸಲು ಹೋದ ವೇಳೆ ಮಾದ್ಯಮದವರ ಮೇಲೆ ಹಲ್ಲೆ ಮಾಡಿದ್ದಾರೆ. ಟ್ರ್ಯಾಕ್ ಸೂಟ್ ಹಾಗೂ ಸಮವಸ್ತ್ರ ವಿತರಣೆಯಲ್ಲಿ ಅವ್ಯವಸ್ಥೆ ಕಂಡುಬಂದಿದ್ದು, ಕ್ರೀಡಾಪಟುಗಳಿಗೆ ಟೀ ಶರ್ಟ್ ಕೊಡುವಲ್ಲಿ ಗೋಲ್ ಮಾಲ್ ನಡೆದಿರುವ ಆರೋಪ ಕೇಳಿಬಂದಿದೆ. ಇನ್ನು ಆರು ತಿಂಗಳ ಹಿಂದೆಯೇ ಸಂಘವೊಂದು ರಿಜಿಸ್ಟ್ರೇಷನ್ ಮಾಡಿಸಿಕೊಂಡಿದ್ದು, ಆದ್ರೆ, ಸರಿಯಾದ ಸೈಜ್​ಗಳ ಟೀ ಶರ್ಟ್ ಕೊಡದ ಹಿನ್ನಲೆ ರೊಚ್ಚಿಗೆದ್ದ ಕ್ರೀಡಾಪಟುಗಳು ಆಕ್ರೋಶ ವ್ಯಕ್ತಪಡಿಸಿದ್ದರು. ಇದನ್ನು ಚಿತ್ರೀಕರಿಸುತ್ತಿದ್ದ ಮಾಧ್ಯಮದವರ ಮೇಲೆ ರಾಜ್ಯಧ್ಯಕ್ಷ ಷಡಕ್ಷರಿ ಸುದ್ದಿ ಮಾಡದಂತೆ ಆವಾಜ್ ಹಾಕಿದ್ದಾರೆ.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ

Published on: Oct 27, 2023 06:02 PM