ಸುದ್ದಿವಾಹಿನಿ ಚರ್ಚೆಯ ನೇರಪ್ರಸಾರದಲ್ಲಿ ಬಿಜೆಪಿ ನಾಯಕನ ಮೇಲೆ ಬಿಆರ್​ಎಸ್​ ಶಾಸಕನಿಂದ ಹಲ್ಲೆ

ನವೆಂಬರ್ 30 ರಂದು ನಡೆಯಲಿರುವ ತೆಲಂಗಾಣ ವಿಧಾನಸಭಾ ಚುನಾವಣೆಯ ಕುರಿತು ತೆಲುಗು ಸುದ್ದಿ ವಾಹಿನಿಯೊಂದು ಚರ್ಚೆಯನ್ನು ಆಯೋಜಿಸಿತ್ತು. ಇದೇ ವೇಳೆ ಕೆಸಿಆರ್​ ಶಾಸಕರು ಬಿಜೆಪಿ ಅಭ್ಯರ್ಥಿ ಜತೆ ಮಾತಿನ ಚಕಮಕಿ ನಡೆಸಿದರು. ಆದರೆ, ಪೊಲೀಸರು ಮತ್ತು ಇತರರು ಮಧ್ಯಪ್ರವೇಶಿಸಿ ಇಬ್ಬರನ್ನು ಶಾಂತಗೊಳಿಸಿದರು. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಸುದ್ದಿವಾಹಿನಿ ಚರ್ಚೆಯ ನೇರಪ್ರಸಾರದಲ್ಲಿ ಬಿಜೆಪಿ ನಾಯಕನ ಮೇಲೆ ಬಿಆರ್​ಎಸ್​ ಶಾಸಕನಿಂದ ಹಲ್ಲೆ
Image Credit source: NDTV
Follow us
ನಯನಾ ರಾಜೀವ್
|

Updated on: Oct 26, 2023 | 8:33 AM

ನವೆಂಬರ್ 30 ರಂದು ನಡೆಯಲಿರುವ ತೆಲಂಗಾಣ ವಿಧಾನಸಭಾ ಚುನಾವಣೆಯ ಕುರಿತು ತೆಲುಗು ಸುದ್ದಿ ವಾಹಿನಿಯೊಂದು ಚರ್ಚೆಯನ್ನು ಆಯೋಜಿಸಿತ್ತು. ಇದೇ ವೇಳೆ ಕೆಸಿಆರ್​ ಶಾಸಕರು ಬಿಜೆಪಿ ಅಭ್ಯರ್ಥಿ ಜತೆ ಮಾತಿನ ಚಕಮಕಿ ನಡೆಸಿದರು. ಆದರೆ, ಪೊಲೀಸರು ಮತ್ತು ಇತರರು ಮಧ್ಯಪ್ರವೇಶಿಸಿ ಇಬ್ಬರನ್ನು ಶಾಂತಗೊಳಿಸಿದರು. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಹೈದರಾಬಾದ್‌ನ ಕುತ್ಬುಳ್ಳಾಪುರದ ಬಿಆರ್‌ಎಸ್ ಶಾಸಕ ಕೆಪಿ ವಿವೇಕಾನಂದ ಅವರು ಕುನಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀಶೈಲಂ ಗೌಡ್ ಕೇಳಿದ ಪ್ರಶ್ನೆಗೆ ಉತ್ತರಿಸಲು ಸಾಧ್ಯವಾಗದ ಕಾರಣ ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಮತ್ತು ಕೇಂದ್ರ ಸಚಿವ ಜಿ ಕಿಶನ್ ರೆಡ್ಡಿ ಆರೋಪಿಸಿದ್ದಾರೆ.

ವಿವೇಕಾನಂದ ಶ್ರೀಶೈಲಗೌಡರ ಮೇಲೆ ಹಲ್ಲೆ ನಡೆಸಿ ಕತ್ತು ಹಿಸುಕಲು ಯತ್ನಿಸಿದರು ಎಂದು ರೆಡ್ಡಿ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಬಿಆರ್‌ಎಸ್ ಶಾಸಕರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಬೇಕು, ಇಲ್ಲವಾದಲ್ಲಿ ಬಿಜೆಪಿ ಕಾನೂನು ಹೋರಾಟ ನಡೆಸಲಿದೆ ಎಂದ ಅವರು, ಬಿಆರ್‌ಎಸ್ ವಕ್ತಾರ ಶ್ರವಣ್ ದಾಸೋಜು ಅವರು ಗೌಡರು ಬಿಆರ್‌ಎಸ್ ಶಾಸಕರ ತಂದೆಯ ಬಗ್ಗೆ ಉಲ್ಲೇಖಿಸಿದ್ದಾರೆ ಎಂದು ಆರೋಪಿಸಿದರು, ಆದರೂ ಇಬ್ಬರೂ ಚರ್ಚೆಯ ವೇಳೆ ಸಂಯಮ ಕಾಯ್ದುಕೊಳ್ಳಬೇಕಿತ್ತು.

ಮತ್ತಷ್ಟು ಓದಿ: ಪಾಕಿಸ್ತಾನದ ಸುದ್ದಿವಾಹಿನಿಯ ಚರ್ಚೆಯ ನೇರಪ್ರಸಾರದಲ್ಲಿ ಎರಡು ಪಕ್ಷದ ನಾಯಕರ ವಾಗ್ವಾದ, ಕಪಾಳಮೋಕ್ಷ, ಹೊಡೆದಾಟ

ವಿವೇಕಾನಂದರು ಹಾಲಿ ಶಾಸಕರಾಗಿದ್ದರೆ, ಶ್ರೀಶೈಲಂ.ಗೌರ್ ಅವರು ಈ ಹಿಂದೆ ಶಾಸಕರಾಗಿದ್ದರು. ಇಬ್ಬರಿಂದಲೂ ಸಭ್ಯತೆ ಮತ್ತು ಸಂಯಮವನ್ನು ನಿರೀಕ್ಷಿಸಲಾಗಿತ್ತು. ಶ್ರೀಶೈಲಗೌಡ ಅವರು ವಿವೇಕಾನಂದರ ಪೋಷಕರ ವಿರುದ್ಧ ಮಾತನಾಡುವ ಮೂಲಕ ಚರ್ಚೆಯನ್ನು ಮೊದಲು ಪ್ರಾರಂಭಿಸಿದ್ದರು ಮತ್ತು ಆಡಳಿತ ಪಕ್ಷದ ಶಾಸಕರು ತಮ್ಮ ಪ್ರತಿಸ್ಪರ್ಧಿಯ ಮೇಲೆ ಹಲ್ಲೆ ಮಾಡಬಾರದು ಎಂದು ಅವರು ಹೇಳಿದರು.

ಇಬ್ಬರೂ ವಿವೇಚನೆಯಿಂದ ವರ್ತಿಸಬೇಕು ಮತ್ತು ಇಡೀ ಜಗತ್ತು ಅವರನ್ನು ನೋಡುತ್ತಿದೆ ಎಂಬುದು ಗಮನದಲ್ಲಿರಬೇಕು ಎಂದು ಹೇಳಿದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ