ಭ್ರಷ್ಟಾಚಾರ ಆರೋಪ: ಪಶ್ಚಿಮ ಬಂಗಾಳ ಸಚಿವ ಜ್ಯೋತಿಪ್ರಿಯಾ ಮಲ್ಲಿಕ್ ನಿವಾಸದ ಮೇಲೆ ಇಡಿ ದಾಳಿ

ಪಡಿತರ ವಿತರಣೆಯಲ್ಲಿ ನಡೆದ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಸಚಿವ ಜ್ಯೋತಿಪ್ರಿಯಾ ಮಲ್ಲಿಕ್ ನಿವಾಸದ ಮೇಲೆ ಜಾರಿ ನಿರ್ದೇಶಕನಾಲಯದ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಭ್ರಷ್ಟಾಚಾರ ಆರೋಪ: ಪಶ್ಚಿಮ ಬಂಗಾಳ ಸಚಿವ ಜ್ಯೋತಿಪ್ರಿಯಾ ಮಲ್ಲಿಕ್ ನಿವಾಸದ ಮೇಲೆ ಇಡಿ ದಾಳಿ
ಜ್ಯೋತಿಪ್ರಿಯ ಮಲ್ಲಿಕ್
Follow us
ನಯನಾ ರಾಜೀವ್
|

Updated on:Oct 26, 2023 | 10:01 AM

ಪಡಿತರ ವಿತರಣೆಯಲ್ಲಿ ನಡೆದ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಸಚಿವ ಜ್ಯೋತಿಪ್ರಿಯಾ ಮಲ್ಲಿಕ್(Jyotipriya Mallick) ನಿವಾಸದ ಮೇಲೆ ಜಾರಿ ನಿರ್ದೇಶಕನಾಲಯದ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ಪಶ್ಚಿಮ ಬಂಗಾಳದ ಸಚಿವ ಜ್ಯೋತಿಪ್ರಿಯಾ ಮಲ್ಲಿಕ್ ಅವರ ನಿವಾಸದ ಮೇಲೆ ದಾಳಿ ನಡೆದಿದೆ. ಪಡಿತರ ಹಗರಣ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ದಾಳಿ ನಡೆದಿದೆ ಎಂದು ಹೇಳಲಾಗುತ್ತಿದೆ.

ಇಡಿ ಅಧಿಕಾರಿಗಳು ಗುರುವಾರ ಬೆಳಗ್ಗೆ ಬಂಗಾಳ ಅರಣ್ಯ ಸಚಿವರ ನಿವಾಸಕ್ಕೆ ತಲುಪಿದ್ದಾರೆ. ಜ್ಯೋತಿಪ್ರಿಯಾ ಮಲಿಕ್ ಅವರು ಅರಣ್ಯ ಸಚಿವರಾಗುವ ಮೊದಲು ಆಹಾರ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದರು.

ಪಡಿತರ ಭ್ರಷ್ಟಾಚಾರದ ಆರೋಪಿ ಬಾಕಿಬುರ್ ರೆಹಮಾನ್ ನನ್ನು ವಿಚಾರಣೆಗೊಳಪಡಿಸಿ ಮಹತ್ವದ ಮಾಹಿತಿ ಲಭಿಸಿದೆ ಎನ್ನಲಾಗಿದೆ. ಆ ಮಾಹಿತಿ ಆಧರಿಸಿ ಇಡಿ ಹೊಸ ಶೋಧ ಕಾರ್ಯಾಚರಣೆ ಆರಂಭಿಸಿದೆ.

ಮತ್ತಷ್ಟು ಓದಿ: ED Raids In Bengaluru: ಐಟಿ ಬೆನ್ನಲ್ಲೇ ಈಗ ಬೆಂಗಳೂರಿನಲ್ಲಿ ಇಡಿ ದಾಳಿ, ಉದ್ಯಮಿಯೊಬ್ಬರ ಮನೆ ಪರಿಶೀಲನೆ

ಜ್ಯೋತಿಪ್ರಿಯಾ ಮಲ್ಲಿಕ್ ಅವರ ಬಿಸಿ ಬ್ಲಾಕ್‌ನಲ್ಲಿರುವ ಎರಡು ಮನೆಗಳ ಮೇಲೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಗುರುವಾರ ಮುಂಜಾನೆ ದಾಳಿ ನಡೆಸಿದ್ದಾರೆ. ಪಡಿತರ ಭ್ರಷ್ಟಾಚಾರ ಪ್ರಕರಣದಲ್ಲಿ ಸಚಿವರ ಸಹಾಯಕನ ಮನೆಗೆ ಕೇಂದ್ರ ಸಂಸ್ಥೆ ಭೇಟಿ ನೀಡಿತ್ತು.

ಇನ್ನು ಎಂಟು ಕಡೆ ಪಡಿತರ ಭ್ರಷ್ಟಾಚಾರದ ಬಗ್ಗೆ ಶೋಧ ನಡೆಸಲಾಗುತ್ತಿದೆ. ಇಡಿ ಅಧಿಕಾರಿಗಳ ದೊಡ್ಡ ಗುಂಪು ಬೆಳಿಗ್ಗೆ 6 ಗಂಟೆ ಸುಮಾರಿಗೆ ಸಾಲ್ಟ್ ಲೇಕ್‌ನಲ್ಲಿರುವ ಜ್ಯೋತಿಪ್ರಿಯಾ ಮಲ್ಲಿಕ್ ಅವರ ಮನೆಗೆ ತಲುಪಿದೆ ಎಂದು ಹೇಳಲಾಗುತ್ತಿದೆ.

ಸಚಿವರ ಹೊರತಾಗಿ ಅವರ ಫ್ಲ್ಯಾಟ್‌ನಲ್ಲೂ ಶೋಧ ನಡೆಯುತ್ತಿದೆ. ಮಾಜಿ ಆಹಾರ ಸಚಿವರು ಮತ್ತು ಹಾಲಿ ಅರಣ್ಯ ಸಚಿವರು ಫ್ಲಾಟ್‌ನಲ್ಲಿ ವಾಸಿಸುತ್ತಿದ್ದಾರೆ. ಇಡಿ ಅಧಿಕಾರಿಗಳ ತಂಡವು BC ಬ್ಲಾಕ್ 244 ಮತ್ತು BC 245 ರ ಎರಡು ಫ್ಲಾಟ್‌ಗಳಿಗೆ ಭೇಟಿ ನೀಡಿದೆ. ಜ್ಯೋತಿಪ್ರಿಯಾ ಮಲ್ಲಿಕ್ ಅವರ ಪಿಎ ಮೂರು ಫ್ಲಾಟ್‌ಗಳನ್ನು ಹೊಂದಿದ್ದಾರೆ ಎಂದು ಹೇಳಲಾಗಿದೆ. ಎಲ್ಲಾ ಮೂರು ಫ್ಲಾಟ್‌ಗಳಿಗೆ ಬೀಗ ಹಾಕಲಾಗಿದೆ ಎನ್ನಲಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 9:27 am, Thu, 26 October 23