ಪಾಕಿಸ್ತಾನದ ಸುದ್ದಿವಾಹಿನಿಯ ಚರ್ಚೆಯ ನೇರಪ್ರಸಾರದಲ್ಲಿ ಎರಡು ಪಕ್ಷದ ನಾಯಕರ ವಾಗ್ವಾದ, ಕಪಾಳಮೋಕ್ಷ, ಹೊಡೆದಾಟ
ಭಾರತದಲ್ಲಿನ ಸುದ್ದಿವಾಹಿನಿಯ ಚರ್ಚೆಗಳು ಹಾಗೂ ಕಾರ್ಯಕ್ರಮಗಳು ಸಾಮಾನ್ಯವಾಗಿ ಮನರಂಜನೆ ಮತ್ತು ವಿಶಿಷ್ಟವಾದ ವಿಷಯಗಳನ್ನು ಒಳಗೊಂಡಿರುತ್ತದೆ. ಇದು ಸಾಮಾನ್ಯವಾಗಿ ಭಾರತದ ವೀಕ್ಷಕರ ಗಮನವನ್ನು ಸೆಳೆಯುತ್ತದೆ. ಆದರೆ ಪಾಕಿಸ್ತಾನಿ ಸುದ್ದಿ ವಾಹಿನಿಯ ಚರ್ಚೆಯ ನೇರಪ್ರಸಾರದ ವೇಳೆ ಎರಡೂ ಪಕ್ಷದ ನಾಯಕರು ಕಪಾಳಮೋಕ್ಷ ಮಾಡಿಕೊಂಡು, ಒಬ್ಬರನ್ನೊಬ್ಬರು ಎಳೆದಾಡಿರುವ ಘಟನೆ ವರದಿಯಾಗಿದೆ.

ಪಾಕಿಸ್ತಾನ ಮುಸ್ಲಿಂ ಲೀಗ್ ನವಾಜ್(ಪಿಎಂಎಲ್-ಎನ್) ಪ್ರತನಿಧಿಸುವ ಅಫ್ನಾನ್ ಉಲ್ಲಾ ಖಾನ್ ಹಾಗೂ ಪಾಕಿಸ್ತಾನ ತೆಹ್ರೀಕ್ ಇ ಇನ್ಸಾಫ್(ಪಿಟಿಐ)ನ ಮುಖಂಡ ಶೇರ್ ಅಫ್ಜಲ್ ಖಾನ್ ಮರ್ವಾತ್ ನಡುವೆ ವಾಗ್ವಾದ ನಡೆಯಿತು. ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್ ಖಾನ್ ವಿಚಾರವಾಗಿ ಜಗಳ ಆರಂಭವಾಗಿತ್ತು.
ಅಫ್ನಾನ್ ಉಲ್ಲಾ ಅವರು ಪಾಕಿಸ್ತಾನ ಮಾಜಿ ಪ್ರಧಾನಿ ಅವರನ್ನು ನಿಂದಿಸಿದ್ದರು, ಮಾರ್ವತ್ ಅವರು ಅಫ್ನಾನ್ ಉಲ್ಲಾ ಖಾನ್ಗೆ ಕಪಾಳಮೋಕ್ಷ ಮಾಡಿದ್ದಾರೆ. ಈ ವಿಡಿಯೋ ಇದೀಗ ಭಾರತದಲ್ಲಿ ವೈರಲ್ ಆಗಿದ್ದು, ಜನರು ಈ ನಾಯಕರನ್ನು ಗೇಲಿ ಮಾಡುತ್ತಿದ್ದಾರೆ, ಇದನ್ನು 48K ಮಂದಿ ವೀಕ್ಷಿಸಿದ್ದಾರೆ.
Viral Video From Pakistan Social Media
Video Of The Fight Between Imran Khan’s PTI Lawyer Sher Afzal Khan Marwat And PMLN’S Senator Dr Afnan Ullah Khan 🤣#ImranKhan #PTI #PMLN pic.twitter.com/R3YWic1M1R
— OsintTV 📺 (@OsintTV) September 28, 2023
ಇಬ್ಬರ ನಡುವೆ ತೀವ್ರ ವಾಗ್ವಾದದ ನಂತರ ಪಾಕಿಸ್ತಾನದ ಜನಪ್ರಿಯ ಟಿವಿ ನಿರೂಪಕ ಜಾವೇದ್ ಚೌಧರಿ ಅವರು ಎಕ್ಸ್‌ಪ್ರೆಸ್ ಟಿವಿಯಲ್ಲಿ ಆಯೋಜಿಸಿದ್ದ ಕಾಲ್ ತಕ್ ಕಾರ್ಯಕ್ರಮವನ್ನು ತಡೆಹಿಡಿಯಲಾಯಿತು.
ಮತ್ತಷ್ಟು ಓದಿ: ಹಜ್ಗೆ ಕಳ್ಳರು, ಭಿಕ್ಷುಕರನ್ನು ಕಳುಹಿಸಬೇಡಿ: ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ ಸೌದಿ ಅರೇಬಿಯಾ
ಚರ್ಚೆಯ ಐದು ಅಥವಾ ಆರು ನಿಮಿಷಗಳ ಸುದೀರ್ಘ ರೆಕಾರ್ಡಿಂಗ್ ಅನ್ನು ಎಕ್ಸ್‌ಪ್ರೆಸ್ ಟಿವಿ ಹೊಂದಿದೆ, ಐದು ಅಥವಾ ಆರು ನಿಮಿಷಗಳ ರೆಕಾರ್ಡಿಂಗ್ ಅನ್ನು ಸಾರ್ವಜನಿಕರೊಂದಿಗೆ ಏಕೆ ಹಂಚಿಕೊಳ್ಳುತ್ತಿಲ್ಲ ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ.