ಹಜ್ಗೆ ಕಳ್ಳರು, ಭಿಕ್ಷುಕರನ್ನು ಕಳುಹಿಸಬೇಡಿ: ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ ಸೌದಿ ಅರೇಬಿಯಾ
ಹಜ್ಗೆ ಕಳ್ಳರು, ಭಿಕ್ಷುಕರನ್ನು ಕಳುಹಿಸಬೇಡಿ ಎಂದು ಪಾಕಿಸ್ತಾನಕ್ಕೆ ಸೌದಿ ಅರೇಬಿಯಾ ಎಚ್ಚರಿಕೆ ನೀಡಿದೆ. ವಿದೇಶಾಂಗ ಸಚಿವಾಲಯದ ಸಭೆಯಲ್ಲಿ ಪಾಕಿಸ್ತಾನದ ಹಜ್ ಕೋಟಾದ ಬಗ್ಗೆ ಸೌದಿ ಅರೇಬಿಯಾ ಕಳವಳ ವ್ಯಕ್ತಪಡಿಸಿದೆ. ಹಜ್ ಕೋಟಾ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಲ್ಲಿ ಎಚ್ಚರಿಕೆವಹಿಸುವಂತೆ ಸೌದಿ ಅರೇಬಿಯಾ ಪಾಕಿಸ್ತಾನವನ್ನು ಕೇಳಿದೆ.

ಮೂಲಗಳ ಪ್ರಕಾರ, ಬಂಧಿತ ಭಿಕ್ಷುಕರಲ್ಲಿ ಶೇ.90ರಷ್ಟು ಪಾಕಿಸ್ತಾನದವರು ಎಂದು ಅರೇಬಿಯಾ ಹೇಳಿದೆ. ಈ ಎಲ್ಲಾ ಭಿಕ್ಷುಕರು ಉಮ್ರಾ ವೀಸಾದ ಮೇಲೆ ಸೌದಿಗೆ ಬಂದಿದ್ದಾರೆ, ಹಜ್ಗೆ ಪದೇ ಪದೇ ಇಂತವರನ್ನು ಕಳುಹಿಸದಂತೆ ಪಾಕಿಸ್ತಾನಕ್ಕೆ ಮನವಿ ಮಾಡಿದೆ.
ನಮ್ಮ ಜೈಲುಗಳು ನಿಮ್ಮ ಕೈದಿಗಳಿಂದ ತುಂಬಿದೆ, ಮೆಕ್ಕಾದ ಮಸ್ಜಿದ್ ಅಲ್ -ಹರಾಮ್ ಬಳಿ ಸಿಕ್ಕಿಬಿದ್ದ ಜೇಬುಗಳ್ಳರು ಕೂಡ ನಿಮ್ಮ ದೇಶದವರೇ. ಈ ಜೇಬುಗಳ್ಳರೆಲ್ಲಾ ಅರಬ್ ವೀಸಾ ಬದಲು ಉಮ್ರಾ ವೀಸಾದಲ್ಲಿ ಸೌದಿಗೆ ಬರುತ್ತಿದ್ದಾರೆ. ಇದರೊಂದಿಗೆ ಸೌದಿ ಅರೇಬಿಯಾದಲ್ಲಿರುವ ಜನರು ಪಾಕಿಸ್ತಾನಿ ನುರಿತ ಕಾರ್ಮಿಕರನ್ನು ನಂಬುತ್ತಿಲ್ಲ ಅವರಿಗೆ ಉದ್ಯೋಗ ಪತ್ರ ವಿತರಿಸುತ್ತಿಲ್ಲ ಎಂದು ಸೌದಿ ಹೇಳಿದೆ.
ಮತ್ತಷ್ಟು ಓದಿ: Hajj 2022: ಮುಸ್ಲಿಮರು ಪವಿತ್ರ ಹಜ್ ಯಾತ್ರೆ ಕೈಗೊಳ್ಳುವುದೇಕೆ? ಇದರ ಹಿಂದಿರುವ ಉದ್ದೇಶವೇನು?
ಹೆಚ್ಚಿನ ಅರಬ್ ನಾಗರಿಕರು ಕೆಲಸಕ್ಕಾಗಿ ಭಾರತೀಯರು ಹಾಗೂ ಬಾಂಗ್ಲಾದೇಶೀಯರನ್ನು ಅವಲಂಬಿಸಿದ್ದಾರೆ. ಮುಸ್ಲಿಂ ಧರ್ಮಕ್ಕೆ ಸೇರಿದ ಯಾವುದೇ ವ್ಯಕ್ತಿಗೆ ಉಮ್ರಾ ಯಾತ್ರೆಯನ್ನು ಬಹಳ ಮುಖ್ಯ ಎಂದು ಪರಿಗಣಿಸಲಾಗುತ್ತದೆ. ಜನರು ಪ್ರಾರ್ಥನೆ ಮಾಡಲು ಮತ್ತು ಕಾಬಾದ ಪ್ರದಕ್ಷಿಣೆ ಮಾಡಲು ಪವಿತ್ರ ನಗರವಾದ ಮೆಕ್ಕಾಗೆ ಹೋಗುತ್ತಾರೆ. 2023ರಲ್ಲಿ ಪಾಕಿಸ್ತಾನದಿಂದ ಉಮ್ರಾ ವೀಸಾ ತೆಗೆದುಕೊಳ್ಳುವವರು 44,000ರಿಂದ 52,000 ಪಾಕಿಸ್ತಾನಿ ರೂಪಾಯಿಗಳನ್ನುಖರ್ಚು ಮಾಡಬೇಕಾಗುತ್ತದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ