ಲಂಡನ್: ಶಾಲೆಗೆ ತೆರಳುತ್ತಿದ್ದ ವಿದ್ಯಾರ್ಥಿನಿಯನ್ನು ಚೂರಿಯಿಂದ ಇರಿದು ಹತ್ಯೆ ಮಾಡಿದ ಅಪ್ರಾಪ್ತ ಬಾಲಕ
ಶಾಲೆಗೆ ತೆರಳುತ್ತಿದ್ದ ಬಾಲಕಿಯ ಮೇಲೆ ಚಾಕುವಿನಿಂದ ದಾಳಿ ನಡೆಸಿ ಹತ್ಯೆ ಮಾಡಿರುವ ಘಟನೆ ಲಂಡನ್ನಲ್ಲಿ ನಡೆದಿದೆ. ದಕ್ಷಿಣ ಲಂಡನ್ನ ಕ್ರಾಯ್ಡಾನ್ನಲ್ಲಿ ಘಟನೆ ನಡೆದಿದೆ, ಶಾಲೆಗೆ ಹೋಗುತ್ತಿದ್ದ ಬಾಲಕಿ ಮೇಲೆ ಅಪ್ರಾಪ್ತ ಬಾಲಕ ಚೂರಿಯಿಂದ ತಿವಿದಿದ್ದಾನೆ. ತಕ್ಷಣವೇ ಏರ್ ಆಂಬ್ಯುಲೆನ್ಸ್ಗೆ ಕರೆ ಮಾಡಲಾಯಿತು, ಬೆಳಗ್ಗೆ 8.30ರ ಸುಮಾರಿಗೆ ಘಟನೆ ನಡೆದಿದ್ದು, ಬಾಲಕಿಯನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತು.

ವೈದ್ಯರು ವಿದ್ಯಾರ್ಥಿನಿಯನ್ನು ಬದುಕಿಸಲು ಹರಸಾಹಸಪಟ್ಟರು ಆದರೆ ಯಾವುದೇ ಪ್ರಯೋಜನವಾಗಿಲ್ಲ, 50 ನಿಮಿಷಗಳ ಬಳಿಕ ಆಕೆ ಮೃತಪಟ್ಟಿದ್ದಾಳೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 17 ವರ್ಷದ ಅಪ್ರಾಪ್ತನನ್ನು ಬಂಧಿಸಲಾಗಿದೆ.
ಲಂಡನ್ ಮೇಯರ್ ಸಾದಿಕ್ ಮಾತನಾಡಿ, ಇದೊಂದು ಹೃದಯ ವಿದ್ರಾವಕ ಘಟನೆ, ಇಂತಹ ದುಷ್ಕೃತ್ಯಗಳನ್ನು ತಡೆಯಲು ಪೊಲೀಸರು ಹಗಲು ರಾತ್ರಿ ಕಷ್ಟಪಡುತ್ತಿದ್ದಾರೆ ಎಂದರು.
ಅಧಿಕೃತ ಅಂಕಿಅಂಶಗಳ ಪ್ರಕಾರ, ಇಂಗ್ಲೆಂಡ್ ಹಾಗೂ ವೇಲ್ಸ್ನಲ್ಲಿ ಈ ವರ್ಷ ಮಾರ್ಚ್ ವರೆಗೆ 25 ವರ್ಷದೊಳಗಿನ 99 ಮಂದಿ ಚೂರಿ ಇರಿತದಿಂದ ಸಾವನ್ನಪ್ಪಿದ್ದಾರೆ.
ಮತ್ತಷ್ಟು ಓದಿ: ಉತ್ತರ ಪ್ರದೇಶ: ದೂರು ದಾಖಲಿಸಲು ಹೋದ ದಲಿತ ಮಹಿಳೆಯ ಮೇಲೆ ಪೊಲೀಸರಿಂದ ಅತ್ಯಾಚಾರ
ಒಟ್ಟು ಚೂರಿ ಇರಿತ ಪ್ರಕರಣದಲ್ಲಿ ಈ ವರ್ಷ 50 ಸಾವಿರ ಮಂದಿ ಸಾವನ್ನಪ್ಪಿದ್ದಾರೆ, ಅಪರಾಧ ಪ್ರಕರಣಗಳು ಶೇ.5ರಷ್ಟು ಹೆಚ್ಚಾಗಿವೆ. ರಾತ್ರಿ ಪಾಳಿ ಮುಗಿಸಿ ಮನೆಗೆ ಹೋಗುತ್ತಿದ್ದ ಸೆಕ್ಯುರಿಟಿ ಗಾರ್ಡ್ ಒಬ್ಬರು ಈ ಕೃತ್ಯವನ್ನು ನೋಡಿದ್ದಾರೆ. ಶಾಲೆಯ ಬ್ಲೇಜರ್ನಲ್ಲಿದ್ದ ಬಾಲಕನನ್ನು ಹಿಂಬಾಲಿಸಿದ್ದರು.
ನಾನು ಅವನನ್ನು ಹಿಡಿಯಲು ಪ್ರಯತ್ನಿಸಿದೆ, ಇನ್ನುಳಿದವರು ಬಾಲಕಿಯ ಪ್ರಾಣ ಉಳಿಸಲು ಪ್ರಯತ್ನಿಸಿದರು. ಯಾರ ಮಗಳಾದರೂ ನಮ್ಮ ಮಕ್ಕಳಿದ್ದಂತೆ ಅಲ್ಲವೇ ಎಂದು ಬೇಸರ ವ್ಯಕ್ತಪಡಿಸಿದರು. ಆ ಸಮಯದಲ್ಲಿ ವಿದ್ಯಾರ್ಥಿನಿ ಬಸ್ನಿಂದ ಇಳಿದಿದ್ದಳು, ಆತನೊಂದಿಗೆ ಜಗಳವಾಡುತ್ತಿದ್ದಳು. ಬಾಲಕಿಯ ಗುರುತು ಇನ್ನೂ ಪತ್ತೆಯಾಗಿಲ್ಲ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ