AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡ್ರಗ್ಸ್​ ತೆಗೆದುಕೊಳ್ಳುವವರಿಗೆಂದು ಈ ದೇಶದಲ್ಲಿ ಸರ್ಕಾರದಿಂದಲೇ ರೂಂ ನಿರ್ಮಾಣ!

ಇದು ಸ್ಕಾಟಿಷ್ ಸರ್ಕಾರದಿಂದ ಬೆಂಬಲಿತವಾದ ಒಂದು ಪ್ರಾಯೋಗಿಕ ಯೋಜನೆಯಾಗಿದೆ. ಈ ರೀತಿಯ ಮೊದಲ ರೂಂ ಈ ಮೊದಲು ಗ್ಲ್ಯಾಸ್ಗೋದ ಪೂರ್ವ ತುದಿಯಲ್ಲಿ ನಿರ್ಮಾಣವಾಗಿದೆ. ಅಲ್ಲಿ ಡ್ರಗ್ಸ್​ ಬಳಕೆದಾರರು ವೈದ್ಯಕೀಯ ತಜ್ಞರ ಮೇಲ್ವಿಚಾರಣೆಯಲ್ಲಿ ಡ್ರಗ್ಸ್​ ತೆಗೆದುಕೊಳ್ಳಬಹುದಾಗಿದೆ.

ಡ್ರಗ್ಸ್​ ತೆಗೆದುಕೊಳ್ಳುವವರಿಗೆಂದು ಈ ದೇಶದಲ್ಲಿ ಸರ್ಕಾರದಿಂದಲೇ ರೂಂ ನಿರ್ಮಾಣ!
ಡ್ರಗ್ಸ್
Follow us
ಸುಷ್ಮಾ ಚಕ್ರೆ
|

Updated on: Sep 27, 2023 | 6:38 PM

ಯಾವ ದೇಶವಾದರೂ ಡ್ರಗ್ ಅಡಿಕ್ಟ್​ಗಳಿಗೆ ಅಧಿಕೃತವಾಗಿ ಹೆರಾಯಿನ್ ಮತ್ತು ಕೊಕೇನ್ ಸೇವಿಸಲು ತಾನೇ ಪ್ರತ್ಯೇಕ ಕೊಠಡಿ ನಿರ್ಮಿಸಿಕೊಡಲು ಸಾಧ್ಯವೇ? ಈ ರೀತಿಯ ಕೆಲಸವನ್ನು ಬ್ರಿಟನ್ ಮಾಡಿದೆ! ಡ್ರಗ್ಸ್ ಸೇವನೆ​ಗೆ ಸಂಬಂಧಿಸಿದ ಸಾವುಗಳನ್ನು ತಡೆಗಟ್ಟುವ ಉದ್ದೇಶದಿಂದ ಈ ರೀತಿ ಮಾಡಿರುವ ಇಂಗ್ಲೆಂಡ್ ಸರ್ಕಾರ ಅಕ್ರಮ ಡ್ರಗ್ಸ್​ಗಳ ಅಧಿಕೃತ ಬಳಕೆಯ ಕೊಠಡಿಗಳನ್ನು ನಿರ್ಮಿಸಲಾಗುತ್ತಿದೆ ಎಂದಿದೆ.

ಇದು ಸ್ಕಾಟಿಷ್ ಸರ್ಕಾರದಿಂದ ಬೆಂಬಲಿತವಾದ ಒಂದು ಪ್ರಾಯೋಗಿಕ ಯೋಜನೆಯಾಗಿದೆ. ಈ ರೀತಿಯ ಮೊದಲ ರೂಂ ಈ ಮೊದಲು ಗ್ಲ್ಯಾಸ್ಗೋದ ಪೂರ್ವ ತುದಿಯಲ್ಲಿ ಕಾಣಿಸಿಕೊಂಡಿದೆ. ಅಲ್ಲಿ ಡ್ರಗ್ಸ್​ ಬಳಕೆದಾರರು ವೈದ್ಯಕೀಯ ತಜ್ಞರ ಮೇಲ್ವಿಚಾರಣೆಯಲ್ಲಿ ಡ್ರಗ್ಸ್​ ತೆಗೆದುಕೊಳ್ಳಬಹುದಾಗಿದೆ. ಈ ಯೋಜನೆಗೆ ಗ್ಲಾಸ್ಗೋದ ಇಂಟಿಗ್ರೇಷನ್ ಜಾಯಿಂಟ್ ಬೋರ್ಡ್ ಬುಧವಾರ ಅಧಿಕೃತ ಒಪ್ಪಿಗೆ ನೀಡಿದೆ.

ಇದನ್ನೂ ಓದಿ: ಕ್ಯಾಪ್ಸೂಲ್ ಮಾತ್ರೆ ಮಾದರಿಯಲ್ಲಿ ಡ್ರಗ್ಸ್ ಸಾಗಾಟ, ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಮಹಿಳೆ

ಈ ಯೋಜನೆಯು ವರ್ಷಗಳಿಂದ ನೆನೆಗುದಿಗೆ ಬಿದ್ದಿತ್ತು. ಈ ರೂಮುಗಳಲ್ಲಿ ಕಾನೂನುಬಾಹಿರ ಮಾದಕ ದ್ರವ್ಯಗಳನ್ನು ಸೇವಿಸುವ ಬಳಕೆದಾರರಿಗೆ ಕಾನೂನು ಕ್ರಮದಿಂದ ವಿನಾಯಿತಿ ನೀಡಲು ವಿಶೇಷ ಕಾನೂನು ವ್ಯವಸ್ಥೆಗಳನ್ನು ಮಾಡಿದ ನಂತರ ಇದೀಗ ಹಸಿರು ನಿಶಾನೆ ತೋರಿಸಲಾಗಿದೆ. ಇಲ್ಲಿ ಡ್ರಗ್ಸ್​ ಸೇವಿಸುವವರಿಗೆ ಕಾನೂನು ಪ್ರಕಾರವಾಗಿ ಯಾವುದೇ ಶಿಕ್ಷೆ ವಿಧಿಸುವುದಿಲ್ಲ.

BBC ವರದಿಯ ಪ್ರಕಾರ, ಈ ಯೋಜನೆಯು ವ್ಯಕ್ತಿಗಳಿಗೆ ಡ್ರಗ್ಸ್​ ಸಂಬಂಧಿತ ಹಾನಿಗಳನ್ನು ಕಡಿಮೆ ಮಾಡುತ್ತದೆ. ಅಲ್ಲದೆ, ಡ್ರಗ್ಸ್​ ಸೇವಿಸುವವರಿಗೆ ಚಿಕಿತ್ಸೆ, ಆರೈಕೆ ಮತ್ತು ಚೇತರಿಕೆಗೆ ಅವಕಾಶಗಳನ್ನು ಒದಗಿಸುತ್ತದೆ.

ಡ್ರಗ್ಸ್​ ಬಳಕೆಯ ಕೊಠಡಿಗಳ ಸ್ಥಾಪನೆಯು ಬಿಕ್ಕಟ್ಟನ್ನು ಪರಿಹರಿಸಲು ಸ್ಕಾಟಿಷ್ ಸರ್ಕಾರವು ಕೈಗೊಂಡ ವ್ಯಾಪಕ ಪ್ರಯತ್ನಗಳ ಪ್ರಮುಖ ಅಂಶವಾಗಿದೆ. ಡ್ರಗ್ಸ್​ನಿಂದ ಉಂಟಾಗುತ್ತಿರುವ ಸಾವು ಇತರ ಯುರೋಪಿಯನ್ ಪ್ರದೇಶಕ್ಕಿಂತ ಇಲ್ಲಿ ಹೆಚ್ಚಿನ ಸಾವುಗಳಿಗೆ ಕಾರಣವಾಗಿದೆ.

ಇದನ್ನೂ ಓದಿ: ಮಂಗಳೂರು: ಡ್ರಗ್ ಪೆಡ್ಲರ್​ನನ್ನು ಬಂಧಿಸಿದ ಸಿಸಿಬಿ, 2.50 ಲಕ್ಷ ಮೌಲ್ಯದ ಮಾದಕವಸ್ತು ವಶಕ್ಕೆ

2020ರಲ್ಲಿ ಡ್ರಗ್ಸ್​ ಸಂಬಂಧಿತ ಸಾವಿನ ಸಂಖ್ಯೆ 1,339ಕ್ಕೆ ತಲುಪಿದೆ. 2021ರಲ್ಲಿ ಸ್ವಲ್ಪ ಇಳಿಕೆ ಕಂಡುಬಂದಿದೆ. ನಂತರ 2022ರಲ್ಲಿ ಸರಿಸುಮಾರು ಶೇ. 20ರಷ್ಟು ಗಮನಾರ್ಹ ಕುಸಿತ ಕಂಡುಬಂದಿದ್ದು, 1,051ಕ್ಕೆ ಇಳಿಕೆಯಾಗಿದೆ. ಡ್ರಗ್ಸ್​ ಬಳಕೆಯ ಕೊಠಡಿಯನ್ನು ರಚಿಸುವ ಈ ಯೋಜನೆಗೆ ಸ್ಕಾಟಿಷ್ ನ್ಯಾಷನಲ್ ಪಾರ್ಟಿ, ಲೇಬರ್ ಮತ್ತು ಲಿಬರಲ್ ಡೆಮಾಕ್ರಟ್ ರಾಜಕಾರಣಿಗಳು ಬೆಂಬಲವನ್ನು ನೀಡಿದ್ದಾರೆ.

ಡ್ರಗ್ಸ್​ ಬಳಕೆದಾರರು ಈ ಯೋಜನೆಯನ್ನು ಅದ್ಭುತ ಯೋಜನೆ ಎಂದು ಮೆಚ್ಚುಗೆ ಸೂಚಿಸಿದ್ದಾರೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಲೈಂಗಿಕ ದೌರ್ಜನ್ಯ ನಡೆಸಿ ವಿಡಿಯೋ ಮಾಡಿದ್ದಾನೆ: ಮಡೆನೂರು ಮನು ಮೇಲೆ ಆರೋಪ
ಲೈಂಗಿಕ ದೌರ್ಜನ್ಯ ನಡೆಸಿ ವಿಡಿಯೋ ಮಾಡಿದ್ದಾನೆ: ಮಡೆನೂರು ಮನು ಮೇಲೆ ಆರೋಪ
ಕೆಣಕ್ಕಿದ ಸಿರಾಜ್​ಗೆ ಪೂರನ್ ನೀಡಿದ ಉತ್ತರ ಹೇಗಿತ್ತು ಗೊತ್ತಾ?
ಕೆಣಕ್ಕಿದ ಸಿರಾಜ್​ಗೆ ಪೂರನ್ ನೀಡಿದ ಉತ್ತರ ಹೇಗಿತ್ತು ಗೊತ್ತಾ?
ಗುಜರಾತ್ ವಿರುದ್ಧ ಸಿಡಿಲಬ್ಬರದ ಶತಕ ಸಿಡಿಸಿದ ಮಿಚೆಲ್ ಮಾರ್ಷ್
ಗುಜರಾತ್ ವಿರುದ್ಧ ಸಿಡಿಲಬ್ಬರದ ಶತಕ ಸಿಡಿಸಿದ ಮಿಚೆಲ್ ಮಾರ್ಷ್
ಭಾರತೀಯ ಸೇನೆ ಮಾಹಿತಿಯನ್ನು ಪಾಕಿಸ್ತಾನಕ್ಕೆ ಕಳಿಸುತ್ತಿದ್ದ ಇಬ್ಬರ ಬಂಧನ
ಭಾರತೀಯ ಸೇನೆ ಮಾಹಿತಿಯನ್ನು ಪಾಕಿಸ್ತಾನಕ್ಕೆ ಕಳಿಸುತ್ತಿದ್ದ ಇಬ್ಬರ ಬಂಧನ
ಇಲಿಗಳು ತಿಂದ ಆಹಾರವೇ ಈ ದೇವಸ್ಥಾನದ ಪ್ರಸಾದ: ಏನಿದರ ವಿಶೇಷತೆ?
ಇಲಿಗಳು ತಿಂದ ಆಹಾರವೇ ಈ ದೇವಸ್ಥಾನದ ಪ್ರಸಾದ: ಏನಿದರ ವಿಶೇಷತೆ?
ಬಿಜೆಪಿ ನಾಯಕರೆಲ್ಲ ಜೊತೆಗಿದ್ದೇವೆ, ನಮ್ಮ ಹೋರಾಟ ನಿಲ್ಲಲ್ಲ: ಚಲವಾದಿ
ಬಿಜೆಪಿ ನಾಯಕರೆಲ್ಲ ಜೊತೆಗಿದ್ದೇವೆ, ನಮ್ಮ ಹೋರಾಟ ನಿಲ್ಲಲ್ಲ: ಚಲವಾದಿ
ಗುಜರಾತ್​ನ ದಾಹೋದ್​ನಲ್ಲಿ 32 ವರ್ಷಗಳ ಬಳಿಕ ಹುಲಿ ಪ್ರತ್ಯಕ್ಷ
ಗುಜರಾತ್​ನ ದಾಹೋದ್​ನಲ್ಲಿ 32 ವರ್ಷಗಳ ಬಳಿಕ ಹುಲಿ ಪ್ರತ್ಯಕ್ಷ
ಗುತ್ತಿಗೆದಾರರಿಗೆ ಹಣ ಪಾವತಿಯಾಗದ ಕಾರಣ ಸಾಯಿ ಲೇಔಟ್​ನಲ್ಲಿ ಸಮಸ್ಯೆ: ನಿಖಿಲ್
ಗುತ್ತಿಗೆದಾರರಿಗೆ ಹಣ ಪಾವತಿಯಾಗದ ಕಾರಣ ಸಾಯಿ ಲೇಔಟ್​ನಲ್ಲಿ ಸಮಸ್ಯೆ: ನಿಖಿಲ್
‘ಅವನು ಸಾಯೋ ಬದಲು ಇವನು ಸಾಯಬಾರದಾ ಎಂದಿದ್ರು’: ಮಡೆನೂರು ಮನು
‘ಅವನು ಸಾಯೋ ಬದಲು ಇವನು ಸಾಯಬಾರದಾ ಎಂದಿದ್ರು’: ಮಡೆನೂರು ಮನು
ಕೇಂದ್ರಕ್ಕೆ ಪವರ್ ಇಲ್ಲ...ರಾಮನಗರ ಹೆಸರು ಬದಲಾವಣೆ ಬಗ್ಗೆ ಡಿಕೆಶಿ ಸ್ಪಷ್ಟನೆ
ಕೇಂದ್ರಕ್ಕೆ ಪವರ್ ಇಲ್ಲ...ರಾಮನಗರ ಹೆಸರು ಬದಲಾವಣೆ ಬಗ್ಗೆ ಡಿಕೆಶಿ ಸ್ಪಷ್ಟನೆ